ಚಿತ್ರದುರ್ಗ:
ವರುಣನ ಕೃಪೆ ಹಾಗೂ ಲೋಕಕಲ್ಯಾಣಾರ್ಥವಾಗಿ ಐತಿಹಾಸಿಕ ಚಿತ್ರದುರ್ಗ ಕೋಟೆಯಲ್ಲಿರುವ ಬನಶಂಕರಿ ದೇವಸ್ಥಾನದಲ್ಲಿ ಪರ್ಜನ್ಯ ಜಪ, ಲಲಿತ ಸಹಸ್ರನಾಮ, ಪಾರಾಯಣ ಜಪ ಮಂಗಳವಾರ ಬೆಳಗಿನಿಂದ ಸಂಜೆಯತನಕ ನೆರವೇರಿತು.
ಹಸಿರುಪತ್ರೆ, ಮಲ್ಲಿಗೆ, ಕನಕಾಂಬರ, ಸೇವಂತಿಗೆ, ಸುಗಂಧರಾಜ, ಗುಲಾಬಿ, ದಾಸವಾಳ, ಹತ್ತಿಯ ಹಾರಗಳಿಂದ ಬನಶಂಕರಿ ಅಮ್ಮ ನನ್ನು ಸಿಂಗರಿಸಿ ವರುಣನ ಕೃಪೆ ತೋರುವಂತೆ ಪ್ರಾರ್ಥಿಸಲಾಯಿತು. ಪುರೋಹಿತ ಕ್ಯಾತಪ್ಪನವರು ಲೋಕಕಲ್ಯಾಣಾರ್ಥವಾಗಿ ವಿಶೇಷ ಪೂಜೆ ಸಲ್ಲಿಸಿದರು.
ಕೋಟೆ ವಾಯುವಿಹಾರಿಗಳ ಸಂಘದ ಅಧ್ಯಕ್ಷ ಆರ್.ಸತ್ಯಣ್ಣ, ನಿರ್ದೇಶಕರುಗಳಾದ ಕೂಬಾನಾಯ್ಕ, ಡಿ.ಬಿ.ನರಸಿಂಹಪ್ಪ, ಉಡುಸಾಲಪ್ಪ , ಭದ್ರಣ್ಣ, ಯಲ್ಲಪ್ಪ, ಕೃಷ್ಣಪ್ಪ, ಜೆ.ಡಿ.ಎಸ್.ವಕ್ತಾರ ಡಿ.ಗೋಪಾಲಸ್ವಾಮಿ ನಾಯಕ ಸೇರಿದಂತೆ ನೂರಾರು ಭಕ್ತರು ಪರ್ಜನ್ಯ ಜಪದಲ್ಲಿ ಭಾಗವಹಿಸಿ ವರುಣನ ಕೃಪೆಗಾಗಿ ಬನಶಂಕರಿ ಅಮ್ಮನವರಲ್ಲಿ ಪ್ರಾರ್ಥಿಸಿದರು.ಬೆಳಗಿನಿಂದ ಸಂಜೆಯತನ ಭಕ್ತರಿಗೆ ಪ್ರಸಾದ ವಿನಿಯೋಗಿಸಲಾಯಿತು.