ಮೇ.5ರಿಂದ ಶ್ರೀವಾಸವಾಂಬ ಜಯಂತ್ಯೋತ್ಸವ

ದಾವಣಗೆರೆ:

     ನಗರದ ಎಸ್‍ಕೆಪಿ ರಸ್ತೆಯಲ್ಲಿರುವ ಶ್ರೀಕನ್ಯಕಾ ಪರಮೇಶ್ವರಿ ದೇವಸ್ಥಾನದಲ್ಲಿ ಮೇ 5ರಿಂದ 14ರವರೆಗೆ ವಾಸವಾಂಬ ಜಯಂತ್ಯೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ಶ್ರೀ ಕನ್ಯಕಾ ಪರಮೇಶ್ವರಿ ದೇವಸ್ಥಾನ ಸಂಘದ ಅಧ್ಯಕ್ಷ ಆರ್.ಎಲ್.ಪ್ರಭಾಕರ್ ತಿಳಿಸಿದರು.

       ಈ ಕುರಿತು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 5ರಿಂದ 10 ದಿನಗಳ ಕಾಲ ಪ್ರತಿದಿನ ಬೆಳಗ್ಗೆ 7 ಗಂಟೆಯಿಂದ ಮಹಾಗಣಪತಿ ಪೂಜೆ, ನಗರೇಶ್ವರ ಸ್ವಾಮಿ, ಜನಾರ್ಧನಸ್ವಾಮಿ ಸಹಿತ ವಾಸವಾಂಬ ದೇವಿಗೆ ಪಂಚಾಮೃತ ಅಭಿಷೇಕ ಜರುಗಲಿದೆ.

       ಅಮ್ಮನವರ ಉತ್ಸವಮೂರ್ತಿಗೆ ವಿಶೇಷ ಪೂಜೆ ನೆರವೇರಲಿದೆ. ಸಂಜೆ 7.30ರಿಂದ ಅಮ್ಮನವರ ಪ್ರಾಕಾರೋತ್ಸವ, ಉಯ್ಯಾಲೋತ್ಸವ, ಕುಂಕುಮಾರ್ಚನೆ, ಮಹಾಮಂಗಳಾರತಿ, ತೀರ್ಥ-ಪ್ರಸಾದ ವಿನಿಯೋಗ ಬಡೆಯಲಿದೆ ಎಂದು ಮಾಹಿತಿ ನೀಡಿದರು.

       ಮೇ 12ರಂದು ಬೆಳಗ್ಗೆ 6.15ಕ್ಕೆ ಅಮ್ಮನವರ ಉತ್ಸವಮೂರ್ತಿ ಸಹಿತ ದಂಪತಿಗಳಿಗೆ ತುಲಾಭಾರ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ. ಮೇ 14ರಂದು ಬೆಳಗ್ಗೆ 8 ಗಂಟೆಗೆ ಉತ್ಸವಮೂರ್ತಿಗೆ ಸೇವಾಕರ್ತರ ಸ್ವ ಹಸ್ತದಿಂದ ಕ್ಷೀರಾಭಿಷೇಕ ನಡೆಯಲಿದೆ. ನಂತರ 8.15ಕ್ಕೆ ಬೈಕ್ ರ್ಯಾಲಿ, 10.30ಕ್ಕೆ ಅಮ್ಮನವರ ತೊಟ್ಟಿಲು ಸೇವೆ ನಡೆಯಲಿದೆ. ಬೆಳಗ್ಗೆ 11 ಗಂಟೆಗೆ ಆರ್ಥಿಕವಾಗಿ ಹಿಂದುಳಿದವರಿಗೆ ಶೈಕ್ಷಣಿಕ ಧನಸಹಾಯ ಮತ್ತು ಸೀರೆಗಳ ವಿತರಣೆ, ಮಧ್ಯಾಹ್ನ 1ಕ್ಕೆ ಅನ್ನ ಸಂತರ್ಪಣೆ ಜರುಗಲಿದೆ. ಸಂಜೆ 6 ಗಂಟೆಗೆ ಮುತ್ತಿನ ಮಂಟಪ ರಥದಲ್ಲಿ ಶ್ರಿ ಕನ್ಯಕಾ ಪರಮೇಶ್ವರಿ ಅಮ್ಮನವರ ಮೆರವಣಿಗೆ ಮುಖ್ಯ ಬೀದಿಗಳಲ್ಲಿ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.

       ಈ ಎಲ್ಲ ಕಾರ್ಯಕ್ರಮಗಳಲ್ಲೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಅಮ್ಮನವರ ಕೃಪೆಗೆ ಪಾತ್ರರಾಗಬೇಕೆಂದು ಅವರು ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ಸಂಘದ ಅಜೀವ ಗೌರವಾಧ್ಯಕ್ಷರಾದ ಆರ್.ಎಸ್.ನಾರಾಯಣಸ್ವಾಮಿ, ಆರ್.ಜಿ.ನಾಗೇಂದ್ರ ಪ್ರಕಾಶ್, ಕಾರ್ಯಾಧ್ಯಕ್ಷ ಕಾಸಲ್ ಎಸ್.ಸತೀಶ್, ಕಾರ್ಯದರ್ಶಿ ಜೆ.ರವೀಂದ್ರ ಗುಪ್ತ, ಮ್ಯಾನೇಜರ್ ಸುರೇಶ್ ಪಾಂಡುರಂಗಿ ಮತ್ತಿತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link