ಚಿತ್ರದುರ್ಗ:
ಚೆನ್ನೈನ ರೇಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತುಮಕೂರಿನ ಸಿದ್ದಗಂಗಾಮಠದ ಡಾ.ಶಿವಕುಮಾರ ಮಹಾಸ್ವಾಮಿಗಳು ಚೇತರಿಸಿಕೊಂಡು ಶೀಘ್ರವೇ ಗುಣಮುಖರಾಗುವಂತೆ ಆರ್ಯವೈಶ್ಯ ಸಂಘದಿಂದ ವಾಸವಿ ದೇವಾಲಯದಲ್ಲಿ ವಿಶೇಷ ಪೂಜೆ ಅಭಿಷೇಕ ಸಲ್ಲಿಸಿ ಭಜನೆ ಮಾಡಲಾಯಿತು.
ಆರ್ಯವೈಶ್ಯ ಸಂಘದ ಅಧ್ಯಕ್ಷರಾದ ಎಸ್.ಎನ್.ಕಾಶಿವಿಶ್ವನಾಥಶೆಟ್ಟಿ ಈ ಸಂದರ್ಭದಲ್ಲಿ ಮಾತನಾಡಿ ನಡೆದಾಡುವ ದೇವರು ಶತಾಯುಷಿ ಡಾ.ಶಿವಕುಮಾರ ಮಹಾಸ್ವಾಮಿಗಳ ಅನ್ನದಾಸೋಹ ಮತ್ತು ಶಿಕ್ಷಣ ದಾಸೋಹ ಇನ್ನು ಸಹಸ್ರಾರು ಮಕ್ಕಳಿಗೆ ಸಿಗಬೇಕಾಗಿರುವುದರಿಂದ ಅವರು ಗುಣಮುಖರಾಗಲಿ ಎಂದು ವಾಸವಿ ದೇವಾಲಯದಲ್ಲಿ ಸಲ್ಲಿಸಿದ ಪೂಜೆಯಲ್ಲಿ ಪ್ರಾರ್ಥಿಸಿದರು.
ಡಾ.ಶಿವಕುಮಾರ ಮಹಾಸ್ವಾಮಿಗಳಿಗೆ ಜೀವಿತಾವಧಿಯಲ್ಲಿಯೇ ಭಾರತ ರತ್ನ ಪ್ರಶಸ್ತಿ ನೀಡುವಂತೆ ಆರ್ಯವೈಶ್ಯ ಸಂಘದಿಂದ ಪ್ರಧಾನಿಗೆ ಪತ್ರ ಬರೆದು ಮನವಿ ಮಾಡಲಾಗುವುದೆಂದು ಎಸ್.ಎನ್.ಕಾಶಿವಿಶ್ವನಾಥಶೆಟ್ಟಿ ತಿಳಿಸಿದರು.
ಆರ್ಯವೈಶ್ಯ ಸಂಘದ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








