ಚಿತ್ರದುರ್ಗ
ಎಂದಿನಂತೆ ಈ ಬಾರಿಯು ವಾಸವಿ ವಿದ್ಯಾಸಂಸ್ಥೆಗೆ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಲಬ್ಯವಾಗಿದ್ದು, ವಿದ್ಯಾರ್ಥಿಗಳು ಸಿಹಿ ಹಂಚಿ ಸಂಭ್ರಮಿಸಿದರು
ಪರೀಕ್ಷೆಯಲ್ಲಿ ಕನ್ನಡ ಮತ್ತು ಆಂಗ್ಲ ಮಾದ್ಯಮದಲ್ಲಿ ವಾಸವಿ ಸಂಸ್ಥೆಯಲ್ಲಿ ನಡೆಯುತ್ತಿರುವ ಶಾಲೆಗೆ ಶೇಕಡಾ 90.06ರಷ್ಟು ಫಲಿತಾಂಶ ಬಂದಿದೆ ಎಂದು ಸಂಸ್ಥೆಯ ಅಧ್ಯಕ್ಷ ಸುರೇಶ್ ರಾಜು ತಿಳಿಸಿದ್ದಾರೆಪರೀಕ್ಷೆ ಬರೆದ ವಿದ್ಯಾರ್ಥಿಗಳ ಪೈಕಿ 25 ಮಂದಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. 70 ಮಂದಿ ವಿದ್ಯಾರ್ಥಿಗಳು ಪ್ರತಮ ಹಾಗೂ 11 ಮಂದಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಶಾಲೆಯ ವಿದ್ಯಾರ್ಥಿನಿ ಎಂ.ಉಜ್ಮ ಫರ್ನಾಜ್ 625ಕ್ಕೆ 599 ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.
ಸಿಹಿ ಹಂಚಿ ಸಂಭ್ರಮಾಚರಣೆ;
ಮಂಗಳವಾರ ಪರೀಕ್ಷೆಯ ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ವಿದ್ಯಾರ್ಥಿಗಳು ಸಿಹಿ ಹಂಚಿ ಸಂಭ್ರಮಿಸಿದರು. ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿನಿ ಎಂ.ಉಜ್ಮ ಫರ್ನಾಜ್ ಅವರಿಗೆ ಸಂಸ್ಥೆಯ ಅಧ್ಯಕ್ಷ ಪಿ.ಎಲ್.ಸುರೇಶ್‍ರಾಜು, ಕಾರ್ಯದರ್ಶಿ ರಾಮಲಿಂಗ ಶ್ರೇಷ್ಠಿ ಅವರು ಇದೇ ಸಂದರ್ಭದಲ್ಲಿ ಅಭಿನಂದಿಸಿದರುಶಿಕ್ಷಕರಾದ ಶಶಿಕಲಾ, ಲೀಲಾವತಿ, ವಿಮಲಮ್ಮ, ಮೀನಾಕ್ಷಿ,ಯೋಗೇಶ್ ಇನ್ನಿತರರು ಹಾಜರಿದ್ದರು
ಎಸ್‍ಆರ್‍ಎಸ್ ಶಾಲೆ ಫಲಿತಾಂಶ;
ನಗರದ ಎಸ್‍ಆರ್‍ಎಸ್ ಶಾಲೆಗೆ ಸತತವಾಗಿ ಈ ಬಾರಿಯೂ ಶೇ.100ರಷ್ಟು ಫಲಿತಾಂಶ ಬಂದಿದೆ ಎಂದು ಶಾಲೆಯ ಪ್ರಕಟಣೆ ತಿಳಿಸಿದೆ.
ಶಾಲೆಯ ಗೌರಿಕ ಎಂ.ಶಾಸ್ತ್ರಿ ಶೇ.98 ಅಂಕಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ.21 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಹಾಗೂ 14 ಮಂದಿ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆ ಆಗಿದ್ದಾರೆ
ಬಾಪೂಜಿ ಸಂಸ್ಥೆಗೆ ಶೇ.100 ಫಲಿತಾಂಶ
ನಗರದ ರಾ.ಹೆ-13ಡಿ ಪಿಳ್ಳೆಕೆರೆನಹಳ್ಳಿಯಲ್ಲಿರುವ ಬಾಪೂಜಿ ಪಬ್ಲಿಕ್ ಸ್ಕೂಲ್‍ಗೆ ಶೇ.100ರಷ್ಟು ಫಲಿತಾಂಶ ಬಂದಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಕೆ.ಎಂ.ವೀರೇಶ್ ತಿಳಿಸಿದ್ದಾರೆ.46 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 45 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 99 ರಷ್ಟು ಫಲಿತಾಂಶ ಬಂದಿರುತ್ತದೆ. 21 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ ಉಳಿದ 24 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ಕುಮಾರಿ ಸ್ನೇಹ.ಕೆ.ವಿ ಒಟ್ಟು 609 ಅಂಕಗಳು, ಕುಮಾರಿ ಭೂಮಿಕ.ಎನ್ ಒಟ್ಟು 605 ಅಂಕಗಳು ಹಾಗೂ ಕುಮಾರಿ ಚೈತ್ರಶಾಸ್ತ್ರಿ.ಎಂ.ಎಸ್ 600 ಅಂಕಗಳನ್ನು ಪಡೆದು ಸಂಸ್ಥೆಗೆ ಕೀರ್ತಿ ತಂದಿದ್ದಾರೆಂದು ಅವರು ತಿಳಿಸಿದ್ದಾರೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
