ಬೆಂಗಳೂರು :
ಕಲ ದಿನಗಳಿಂದ ನೆನಗುದಿಗೆ ಬಿದ್ದಿರುವ ಸಚಿವ ಸಂಪುಟ ವಿಸ್ತರಣೆ ಹಾಗು ರಾಜ್ಯದಲ್ಲಿನ ರಾಜಕೀಯ ಪರಿಸ್ಥಿತಿ ಕುರಿತಂತೆ ಅವಲೋಕನ ಮತ್ತುಉ ಕೇಂದ್ರ ಸರ್ಕಾರ ತಂದಿರುವ ಸಿಎಎ ಕಾನೂನಿನ ಕುರಿತಾದ ಸಮಾವೇಷದಲ್ಲಿ ಭಾಗವಿಹಿಸಲು ಬಂದಿರುವ ಅಮಿತ್ ಷಾ ಅವರಿಗೆ ಸಿಎಎ ವಿರುದ್ಧದ ಪ್ರತಿಭಟನೆಯ ಬಿಸಿ ಸ್ವಲ್ಪ ಮಟ್ಟಿಗೆ ತಟ್ಟಿದೆ .
ಒಂದೂ ಕಾಲು ತಿಂಗಳಿಂದ ಕಾದು ಕುಳಿತಿರುವ ಆಕಾಂಕ್ಷಿ ಶಾಸಕರು ಮಂತ್ರಿಗಳಾಗ್ತಾರಾ? ಸಚಿವ ಸಂಪುಟ ವಿಸ್ತರಣೆ ಸರ್ಕಸ್ ಗೆ ಅಮಿತ್ ಶಾ ತೆರೆ ಎಳೀತಾರಾ? ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಇಂತಹ ಹತ್ತಾರು ನಿರೀಕ್ಷೆಗಳು ಹುಟ್ಟಿಕೊಂಡಿದ್ದು.
ಇಂತಹ ಪ್ರಶ್ನೆಗಳಿಗೆ ಉತ್ತರ ಸಧ್ಯ ಸಸ್ಪೆನ್ಸ್ ಆದರು . ಅಮಿತ್ ಶಾ-ಯಡಿಯೂರಪ್ಪ ಭೇಟಿ ಬಳಿಕವೇ ಈ ಸಸ್ಪೆನ್ಸ್ ಗೆ ಉತ್ತರ ಸಿಗಲಿದೆ. ಈ ಮಧ್ಯೆ ಸಿಎಂ ಯಡಿಯೂರಪ್ಪನವರು ಅಮಿತ್ ಶಾ ಅವರ ಜೊತೆ ಮಾತುಕತೆ ಎಲ್ಲಿ ಮಾಡುತ್ತಾರೆ ಎಂಬುದೇ ಒಂದು ಸೋಜಿಗದ ಸಂಗತಿಯಾಗಿದೆ .
ಹುಬ್ಬಳ್ಳಿಗೆ ಸಿಎಂ ಮತ್ತು ಅಮಿತ್ ಶಾ ಒಟ್ಟಿಗೆ ಬಿಎಸ್‍ಎಫ್ ನ ಫ್ಲೈಟ್ ನಲ್ಲಿ ಇಂದು ಮಧ್ಯಾಹ್ನ ಪ್ರಯಾಣ ಬೆಳೆಸುವಾಗ ಮತ್ತು ಸಂಜೆ ಹುಬ್ಬಳ್ಳಿಯ ಖಾಸಗಿ ಹೊಟೇಲಿನಲ್ಲಿ. ಇವೆರಡು ಸಂದರ್ಭಗಳ ಪೈಕಿ ಮೊದಲ ಅವಕಾಶದಲ್ಲಿ ಸಿಎಂ ಗೆ ಅಮಿತ್ ಶಾ ಜೊತೆಗೆ ಮಾತುಕತೆ ನಡೆಸಲು ಒಂದು ಗಂಟೆ ಕಾಲಾವಕಾಶ ಸಿಗಲಿದೆ.
ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅಮಿತ್ ಷಾ ಅವರು ವೇದಾಂತ ಭಾರತಿ ಕಾರ್ಯಗಳನ್ನು ಮುಕ್ತ ಕಂಠದಿಂದ ಶ್ಲಾಗಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ