ವೇದಾವತಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳ ಸಾಧನೆ

ಹಿರಿಯೂರು:

        ದಾವಣಗೆರೆ ವಿಶ್ವವಿದ್ಯಾಲಯ ಅಂತರ ಮಹಾವಿದ್ಯಾಲಯಗಳ ಅಥ್ಲೆಟಿಕ್ಸ್ ಕ್ರೀಡಾಕೂಟ 2018-19 ನ್ನು ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಿರಿಯೂರು ಇವರು ವೀರ ವನಿತೆ ಒನಕೆ ಓಬವ್ವ ಜಿಲ್ಲಾ ಕ್ರೀಡಾಂಗಣ ಚಿತ್ರದುರ್ಗ ಇಲ್ಲಿ ಆಯೋಜಿಸಿದ್ದು ಈ ಕ್ರೀಡಾಕೂಟದಲ್ಲಿ ಹಿರಿಯೂರು ವೇದಾವತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಾವ್ಯ ಎಲ್. ದ್ವಿತೀಯ ಬಿ.ಕಾಂ ವಿದ್ಯಾರ್ಥಿನಿ 5000 ಮೀಟರ್ ಓಟದಲ್ಲಿ ಚಿನ್ನದ ಪದಕವನ್ನು, ಸರಸ್ವತಿ ಎಸ್. ಪ್ರಥಮ ಬಿ.ಬಿ.ಎಮ್. ವಿದ್ಯಾರ್ಥಿನಿ 400 ಮೀಟರ್ ಓಟದಲ್ಲಿ ಚಿನ್ನದ ಪದಕವನ್ನು ಮತ್ತು 800 ಮೀಟರ್ ಓಟದಲ್ಲಿ ಬೆಳ್ಳಿ ಪದಕವನ್ನು ಮತ್ತು ಮೊಹಮದ್ ಜೀಷನ್ ಪ್ರಥವi ಬಿ.ಕಾಂ. ವಿದ್ಯಾರ್ಥಿ 100 ಮತ್ತು 200 ಮೀಟರ್ ಓಟಗಳಲ್ಲಿ ಬೆಳ್ಳಿ ಪದಕಗಳನ್ನು ಪಡೆದು ಕಾಲೇಜಿಗೆ ಹಿರಿಯೂರಿಗೆ ಮತ್ತು ಅವರ ತಂದೆ ತಾಯಿಯರಿಗೆ ಕೀರ್ತಿ ತಂದಿರುತ್ತಾರೆ.

       ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಡಿ.ಚಂದ್ರಶೇಖರಪ್ಪ, ದೈಹಿಕ ಶಿಕ್ಷಣ ನಿರ್ದೇಶಕರಾದ ಡಿ.ಆರ್.ಪ್ರಸನ್ನಕುಮಾರ್, ಅಧ್ಯಾಪಕರು ಆಡಳಿತ ಸಿಬ್ಬಂದಿಯವರು ಅಭಿನಂದಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link