ವೇದಾವತಿ ನದಿ ಭರ್ತಿ: ಬಾಗಿನಕ್ಕೆ ಕೂಡಿ ಬರದ ಕಾಲ

ಹೊಸದುರ್ಗ:

   ತಾಲ್ಲೂಕಿನ ಜೀವನಾಡಿ, ಪಟ್ಟಣದ ಜನರ ಕುಡಿಯುವ ನೀರಿನ ಅನುಕೂಲ ಒದಗಿಸುವ ಕೆಲ್ಲೋಡು ಬಳಿ ವೇದಾವತಿ ನದಿ ಕಳೆದ ಐದಿನೈದು ದಿನದಿಂದ ತುಂಬಿ ಹರಿಯುತ್ತಿದ್ದರೂ ಬಾಗಿನ ಅರ್ಪಿಸುವ ಕಾಲ ಕೂಡಿ ಬಂದಿಲ್ಲ. ಮೂರನಾಲ್ಕು ವರ್ಷದಿಂದ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಹನಿ ನೀರಿಲ್ಲದೆ ವೇದಾವತಿ ನದಿ ಒಡಲು ಸಂಪೂರ್ಣ ಬತ್ತಿ ಹೋಗಿತ್ತು. ಇದರಿಂದ ನದಿ ಪಾತ್ರದೆಲ್ಲೆಡೆ ಅಕ್ರಮ ಮರಳುಗಾರಿಕೆ ದಂಧೆ ಅವ್ಯಾಹತವಾಗಿ ನಡೆದಿತ್ತು. ಆದರೆ ನೆರೆಯ ಜಿಲ್ಲೆ ವ್ಯಾಪ್ತಿಯಲ್ಲಿ ಸುರಿದ ಮಳೆ ಯಿಂದ ವೇದಾವತಿ ತನ್ನ ಒಡಲಿನಲ್ಲಿ ನೀರು ತುಂಬಿಕೊಂಡಿವೆ. ಇದರಿಂದ ಅಂರ್ತಜಲ ವೃದ್ದಿಯಾಗಿ ಕೊಳವೆ ಬಾವಿಗಳಲ್ಲಿ ನೀರು ಸಂಗ್ರಹವಾಗುತ್ತಿದೆ.

    ಪ್ರತಿ ವರ್ಷ ಕೆಲ್ಲೋಡು ಬಳಿ ವೇದಾವತಿ ನದಿ ತುಂಬುತ್ತಿದ್ದಂತೆ ತಾಲ್ಲೂಕಿನ ಹಾಲಿ, ಮಾಜಿ ಶಾಸಕರುಗಳು ಮತ್ತು ತಾಲ್ಲೂಕು ಆಡಳಿತ ಬಾಗಿನ ಅರ್ಪಿಸುವ ಸಂಪ್ರದಾಯ ರೂಢಿಯಲ್ಲಿತ್ತು. ಆದರೆ ಇದುವರೆಗೂ ಬಾಗಿನ ಅರ್ಪಣೆ ಮಾಡದೇ ಇರುವುದು ದುಸ್ಸಹದ ಸಂಗತಿ.ವೇದಾವತಿ ನದಿ ತುಂಬಿ ಐದಿನೈದು ದಿನಗಳೇ ಕಳೆದಿದ್ದರೂ ಬಾಗಿನ ಸಮರ್ಪಣೆಗೆ ಶಾಸಕರುಗಳು ಬಾರದಿರುವುದರಿಂದ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವರದಿ ನೋಡಿಯಾದರೂ ನಮ್ಮನ್ನಾಳುವ ಜನಪ್ರತಿನಿಧಿಗಳು ಬಾಗಿನ ಅರ್ಪಣೆ ಮಾಡುತ್ತಾರೆಯೇ ಕಾದು ನೋಡಬೇಕಿದೆ.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link