ಹೊನ್ನಾಳಿ
ಯುವಸಮೋಹ ದೇಶಾಬಿಮಾನ ದೇಶಪ್ರಮೆ ಬೆಳೆಸಿಕೊಳ್ಳಲು ದೇಶಸೇವೆ ಸಿದ್ದವಾಗಲು ಒಂದು ಪ್ರೇರಪೆಣೆಯೇ ಈ ನೂತನ ವೀರಯೋದನ ಪ್ರತಿಮೆಯನ್ನು ದುರ್ಗಿಗುಡಿ ಬಡಾವಣೆಯಲ್ಲಿ ಜನವರಿ 30ರಂದು ಪ್ರತಿಷ್ಠಾಪಿಸಲಾಗುವುದು ಎಂದು ಪಟ್ಟಣ ಪಂಚಾಯ್ತಿ ಸದಸ್ಯ ಹೊಸಕೇರಿಸುರೇಶ್ ಹೇಳಿದರು.
ಅವರು ಪತ್ರಿಕಾ ಹೇಳಿಕೆ ನೀಡಿ ಮಹಾತ್ಮ ಗಾಂದೀಜಿಯವರ 150ನೇ ವರ್ಷದ ಹುತಾತ್ಮ ದಿನಾಚರಣೆ ಅಂಗವಾಗಿ 11ನೇ ಕ್ರಾಸ್‍ನ ಗೂಳಪ್ಪ ನಿವಾಸದ ಮುಂಭಾಗ ನೂತನ ವೀರಯೋದನ ಪ್ರತಿಮೆಯನ್ನು ಪ್ರತಿಷ್ಠಾಪಿಸಲು, ದುರ್ಗಿಗುಡಿ ಬಡಾವಣೆ ಪಟ್ಟಣ ಪಂಚಾಯ್ತಿ ಸದಸ್ಯ ಹೊಸಕೇರಿಸುರೇಶ್ 6ನೇ ವಾರ್ಡಿನ್ನು ಮಾಧರಿ ವಾರ್ಡ್‍ನ್ನಾಗಿ ಮಾಡಲು ತಮ್ಮ ಸ್ವಂತ ಹಣದಿಂದ ಯೋದನ ಪ್ರತಿಮೆಯನ್ನು ಪ್ರತಿಷಾಪಿಸಲಾಗುವುದೆಂದರು.
ಜನವರಿ 30 ರ ಬುಧವಾರ ಬೆಳಿಗ್ಗೆ 11 ಗಂಟೆಗೆ ನೂತನ ವೀರಯೋದನ ಪ್ರತಿಮೆಯನ್ನು ಪ್ರತಿಷಾಪಿಸುವ ಸ್ಥಳಕ್ಕೆ ತರಲು, ತುಮ್ಮಿನಕಟ್ಟೆ ರಸ್ತೆಯ ಕುಂಬಾರಕೇರಿಯಿಂದ ವಿವಿಧ ವಾದ್ಯಮೇಳಗಳೊಂದಿಗೆ ಅದ್ದೂರಿ ಮೆರವಣೆಗೆ ಮೂಲಕ ತರಲಾಗುವುದು.
ಅದ್ದೂರಿ ಮೆರವಣೆಗೆಯನ್ನು ಚಾಲನೆಯನ್ನು ಹಿರೇಕಲ್ಮಠದ ಡಾ,ಮಲ್ಲಿಕಾರ್ಜನ ಶಿವಾಚಾರ್ಯ ಸ್ವಾಮೀಜಿ,ಶಾಸಕ ಎಂ.ಪಿ.ರೇಣುಕಾಚಾರ್ಯ,ಮಾಜಿ ಶಾಸಕ ಡಿ.ಜಿ.ಶಾಂತನಗೌಡ್ರು ಚಾಲನೆ ನೀಡಲಿದ್ದಾರೆ, ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ,ಬೆಳಗುತ್ತಿ ಜಿಪಂ ಸದಸ್ಯ ಎಂ.ಆರ್.ಮಹೇಶ್,ಕಾಂಗ್ರೆಸ್ ಪಕ್ಷದ ಹಿಂದೂಳಿದ ವರ್ಗದ ಉಪಾಧ್ಯಕ್ಷ ಹೆಚ್.ಎ.ಉಮಾಪತಿ ,ಮುಖಂಡ ಕೆಪಿಸಿಸಿ ಸದಸ್ಯ ಬಿ.ಸಿದ್ದಪ್ಪ,ಎಂ.ಸಿದ್ದಪ್ಪ ಪಪಂ ಸದಸ್ಯರು ವಿವಿಧ ಮುಖಂಡರು ಮೆರವಣಗೆಯಲ್ಲಿ ಪಾಲ್ಗೋಳ್ಳುವರು ಎಂದು ಹೇಳಿದರು.