ಚಳ್ಳಕೆರೆ
ಪ್ರತಿವರ್ಷದಂತೆ ಈ ವರ್ಷವೂ ಸಹ ಗ್ರಾಮದ ಅಧಿದೇವರಾದ ಶ್ರೀವೀರಭದ್ರಸ್ವಾಮಿ ರಥೋತ್ಸವ ಹಾಗೂ ದನಗಳ ಜಾತ್ರೆ ಮೇ-14 ರಿಂದ 20ರ ತನಕ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
ಈ ಬಗ್ಗೆ ಪತ್ರಿಕೆಗೆ ಮಾಹಿತಿ ನೀಡಿದ ಧರ್ಮದರ್ಶಿ ರಾಮಣ್ಣ ಶ್ರೀಸ್ವಾಮಿಯ ರಥೋತ್ಸವ, ದನಗಳ ಜಾತ್ರೆ ಕುರಿತು ಇತ್ತೀಚೆಗೆ ಸಭೆ ಸೇರಿ ಎಲ್ಲರ ಸವiಕ್ಷಮದಲ್ಲಿ ಜಾತ್ರೆಯನ್ನು ಅತ್ಯಂತ ಯಶಸ್ಸಿಯಾಗಿ ನಡೆಸುವ ಬಗ್ಗೆ ಸುಧೀರ್ಘ ಚರ್ಚೆ ನಡೆಸಲಾಯಿತು. ಪ್ರತಿವರ್ಷದಂತೆ ಈ ವರ್ಷವೂ ಸಹ ಎಲ್ಲಾ ರೀತಿಯ ಪೂಜಾ ವಿಧಿ ವಿಧಾನಗಳನ್ನು ಕೈಗೊಳ್ಳಲು ಸಭೆಯಲ್ಲಿ ಚರ್ಚಿಸಲಾಯಿತು. ಶ್ರೀವೀರಭದ್ರಸ್ವಾಮಿ ಜಾತ್ರೆ ಮೇ.14 ರಿಂದ 20ರ ತನಕ ಒಟ್ಟು 8 ದಿನಗಳ ಕಾಲ ನಡೆಸಲಾಗುವುದು.
ಮೇ-14ರ ಮಂಗಳವಾರ ಕಂಕಣಧಾರಣೆ, ಏಕಾದಶ, ರುದ್ರಾಭಿಷೇಕದೊಂದಿಗೆ ಕಾರ್ಯಕ್ರಮ ಪ್ರಾರಂಭವಾಗುವುದು, ಮೇ-15ರ ಬುಧವಾರ ದೊಡ್ಡ ರಥಕ್ಕೆ ಕಳಸ ಸ್ಥಾಪನೆ, ಮೇ-16ರ ಗುರುವಾರ ದೊಡ್ಡ ರಥಕ್ಕೆ ತೈಲಾಭಿಷೇಕ, ಮೇ-17ರ ಶುಕ್ರವಾರ ಬೆಳ್ಳಿ ಪಲ್ಲಕಿಯಲ್ಲಿ ಗಂಗಾದೇವತೆ ಪೂಜೆ, ಮೇ-18ರ ಶನಿವಾರ ಮಧ್ಯಾಹ್ನ 3.30ಕ್ಕೆ ದೊಡ್ಡ ರಥೋತ್ಸವ ಹಾಗೂ ಮುಕ್ತಿ ಬಾವುಟ ಹರಾಜು ಕಾರ್ಯಕ್ರಮ ವಿರುತ್ತದೆ.
ಮೇ-19ರ ಭಾನುವಾರ ಶ್ರೀಸ್ವಾಮಿಯ ಉತ್ಸವದೊಂದಿಗೆ ಗ್ರಾಮ ದೇವತೆಯಾದ ಚಳ್ಳಕೆರೆಯಮ್ಮ, ಉಡಸಲಮ್ಮ, ಪುರಂತರ ವೀರನಾಟ್ಯ ಕಾರ್ಯಕ್ರಮ. ಮೇ-20ರ ಸೋಮವಾರ ಕಂಕಣ ವಿಸರ್ಜನೆ ಹಾಗೂ ಹೋಕಳಿ ಕಾರ್ಯಕ್ರಮವಿದ್ದು ಎಲ್ಲಾ ಭಕ್ತಾಧಿಗಳು ಜಾತ್ರೆಯಲ್ಲಿ ಭಾಗವಹಿಸಿ ಶ್ರೀಸ್ವಾಮಿಯ ಕೃಪೆಗೆ ಪಾತ್ರರಾಗಲು ಅವರು ಮನವಿ ಮಾಡಿದ್ದಾರೆ. ಮೇ-24ರ ಶುಕ್ರವಾರ ಇಲ್ಲಿನ ಸೂಜಿ ಮಲ್ಲೇಶ್ವರ ನಗರದಲ್ಲಿ ದನಗಳ ಜಾತ್ರೆಯನ್ನು ಏರ್ಪಡಿಸಿದೆ.