ತುಮಕೂರು: ನಗರಾದ್ಯಂತ ವಾಹನ ಸಂಚಾರ-ನಿಲುಗಡೆ ನಿಷೇಧ

ತುಮಕೂರು

   ತುಮಕೂರು ನಗರದಲ್ಲಿ ಜ.2 ರಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಅತಿಮುಖ್ಯ ಗಣ್ಯರು ಆಗಮಿಸುವ ಹಿನ್ನೆಲೆಯಲ್ಲಿ ತುಮಕೂರಿನ ಪ್ರಮುಖ ರಸ್ತೆಗಳಲ್ಲಿ ವಾಹನಗಳ ಸಂಚಾರ ಮತ್ತು ನಿಲುಗಡೆಯನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಡಾ.ಕೋನ ವಂಶಿಕೃಷ್ಣ ತಿಳಿಸಿದ್ದು, ವಿವರ ಈ ಕೆಳಕಂಡಂತಿದೆ:-

    ಗುಬ್ಬಿ ರಿಂಗ್ ರಸ್ತೆ ಜಂಕ್ಷನ್‍ನಿಂದ ಕ್ಯಾತ್ಸಂದ್ರ ಸರ್ಕಲ್‍ವರೆಗೆ ಮತ್ತು ಕ್ಯಾತ್ಸಂದ್ರ ಸರ್ಕಲ್‍ನಿಂದ ಸಿದ್ದಗಂಗಾ ಮಠದವರೆಗೆ, ಭದ್ರಮ್ಮ ಸರ್ಕಲ್‍ನಿಂದ ರಾಧಾಕೃಷ್ಣ ರಸ್ತೆಯ ಫ್ಲೈಓವರ್ ಉಪ್ಪಾರಹಳ್ಳಿವರೆಗೆ, ಉಪ್ಪಾರಹಳ್ಳಿ ರೈಲ್ವೆ ಟ್ರಾಕ್‍ನಿಂದ ರೈಲ್ವೆ ನಿಲ್ದಾಣದವರೆಗೆ, ಉಪ್ಪಾರಹಳ್ಳಿ ಅಂಡರ್‍ಪಾಸ್‍ನಿಂದ-ರೈಲ್ವೆಸ್ಟೇಷನ್ ರಸ್ತೆ-ವಿದ್ಯಾನಿಕೇತನ ಶಾಲೆ-ಆಗಮನ ಹೋಟೆಲ್ ರಸ್ತೆ-ಬಿಷಪ್ ಸಾರ್ಜೆಂಟ್ ಶಾಲೆ ಮೈದಾನದವರೆಗೆ, ಅಶೋಕ ರಸ್ತೆ, ಹೆಲ್ತ್ ಕ್ಯಾಂಟೀನ್ ರಸ್ತೆ, ಜೆ.ಸಿ ರಸ್ತೆ, ಕುಣಿಗಲ್ ರಸ್ತೆಯಲ್ಲಿ ಕುಣಿಗಲ್ ಜಂಕ್ಷನ್‍ವರೆಗೆ ಮತ್ತು ಕುಣಿಗಲ್ ಜಂಕ್ಷನ್‍ನಿಂದ ಶೆಟ್ಟಿಹಳ್ಳಿ ಜಂಕ್ಷನ್‍ವರೆಗೆ, ಕೋಡಿ ಸರ್ಕಲ್‍ನಿಂದ ಎಸ್.ಎಸ್ ಸರ್ಕಲ್‍ವರೆಗೆ, ಹನುಮಂತಪುರ ಅಂಡರ್‍ಪಾಸ್‍ವರೆಗೆ, ರಂಗಾಪುರ ಸರ್ವಿಸ್ ರಸ್ತೆವರೆಗೆ, ಭದ್ರಮ್ಮ ಸರ್ಕಲ್‍ನಿಂದ ಬಿ.ಎಂ ತೋಟದವರೆಗೆ, ಕೆಇಬಿ ಸರ್ಕಲ್‍ವರೆಗೆ, ಶಿರಾಗೇಟ್ ಸರ್ಕಲ್‍ನಿಂದ ಅಂತರಸನಹಳ್ಳಿ ಅಂಡರ್‍ಪಾಸ್(ಮಧುಗಿರಿ ರಸ್ತೆ)ವರೆಗೆ, ಗುಬ್ಬಿ ರಿಂಗ್ ರೋಡ್ ಜಂಕ್ಷನ್‍ನಿಂದ ಗಾರ್ಡನ್ ರಸ್ತೆ ಮೂಲಕ ಕೋಡಿ ಬಸವಣ್ಣ ದೇವಸ್ಥಾನದವರೆಗೆ, ಕೋತಿತೋಪು ರಸ್ತೆ, ಅಶೋಕನಗರ ಮೂರನೇ ಕ್ರಾಸ್(ದೋಬಿಘಾಟ್) ಶೆಟ್ಟಿಹಳ್ಳಿ ಅಂಡರ್‍ಪಾಸ್‍ವರೆಗಿನ ರಸ್ತೆಗಳಲ್ಲಿ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.
ಸಿದ್ದಗಂಗಾ ಮಠದಿಂದ ಬಂಡೆಪಾಳ್ಯ ರಸ್ತೆ ಮೂಲಕ ಫೈರ್ ಸ್ಟೇಷನ್ ಸರ್ವಿಸ್ ರಸ್ತೆಯಲ್ಲಿ ಮಿರ್ಜಿ ಪೆಟ್ರೋಲ್ ಬಂಕ್‍ವರೆಗೆ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.

     ಗುಬ್ಬಿ ರಿಂಗ್ ರಸ್ತೆ ಜಂಕ್ಷನ್‍ನಿಂದ ಜೆ.ಸಿ ರಸ್ತೆ, ಮಂಡಿಪೇಟೆ ರಸ್ತೆ, ಜನರಲ್ ಕಾರ್ಯಪ್ಪ ರಸ್ತೆ, ಗಂಗೋತ್ರಿ ರಸ್ತೆ, ಎಸ್‍ಐಟಿ ಮುಖ್ಯರಸ್ತೆ, ಎಸ್‍ಎಸ್‍ಪುರಂ ಮುಖ್ಯರಸ್ತೆಯಿಂದ ಉಪ್ಪಾರಹಳ್ಳಿ ಫ್ಲೈಓವರ್‍ವರೆಗೆ, ಮಿರ್ಜಿ ಪೆಟ್ರೋಲ್ ಬಂಕ್‍ನಿಂದ ರೋಟಿಘರ್‍ವರೆಗೆ, ಗೆದ್ದಲಹಳ್ಳಿ ಜಂಕ್ಷನ್‍ನಿಂದ ಉಪ್ಪಾರಹಳ್ಳಿ ಫ್ಲೈಓವರ್‍ವರೆಗೆ ರಸ್ತೆಗಳಲ್ಲಿ ಸಾರ್ವಜನಿಕ ವಾಹನಗಳ ನಿಲುಗಡೆಯನ್ನು ನಿಷೇಧಿಸಿ ಸಂಚಾರವನ್ನು ನಿರ್ಬಂಧಿಸಲಾಗಿದೆ.

     ರಾಷ್ಟ್ರೀಯ ಹೆದ್ದಾರಿ- 48ರಲ್ಲಿ ಹನುಮಂತಪುರ ಫ್ಲೈಓವರ್‍ನಿಂದ ಕ್ಯಾತ್ಸಂದ್ರವರೆಗೆ ಸಂಚಾರವನ್ನು ನಿರ್ಬಂಧಿಸಲಾಗಿದೆ. ಬಿ.ಹೆಚ್ ರಸ್ತೆಯಲ್ಲಿ ವಾಹನಗಳ ಸಂಚಾರ ನಿಬರ್ಂಧಿಸಿರುವುದರಿಂದ ಬೆಂಗಳೂರು ಕಡೆಯಿಂದ ಬರುವ ವಾಹನಗಳು ಗುಬ್ಬಿ ಬೈಪಾಸ್ ರಸ್ತೆ, ಗೋಕುಲ 80 ಅಡಿ ರಸ್ತೆ, ಗೋಕುಲ 60 ಅಡಿರಸ್ತೆ, ಸಿದ್ದರಾಮೇಶ್ವರ ಬಡಾವಣೆ ಮುಖ್ಯರಸ್ತೆ, ಶೆಟ್ಟಿಹಳ್ಳಿ ರಸ್ತೆ, ಜಯನಗರ ರಸ್ತೆ, ಗಂಗೋತ್ರಿ ರಸ್ತೆ, ಎಸ್‍ಐಟಿ ಮುಖ್ಯರಸ್ತೆ, ಎಸ್‍ಎಸ್‍ಪುರಂ ಮುಖ್ಯರಸ್ತೆ, ಎನ್‍ಹೆಚ್ -48 ರಸ್ತೆಯಿಂದ ನಗರದ ಒಳಗೆ ಕೂಡುವ ರಸ್ತೆಗಳನ್ನು ಸಂದರ್ಭಕ್ಕೆ ಅನುಸಾರವಾಗಿ ಉಪಯೋಗಿಸಬಹುದಾಗಿದೆ. ಗುಬ್ಬಿ ಕಡೆಯಿಂದ ಬರುವ ವಾಹನಗಳು ನಿರ್ಬಂಧಿತ ರಸ್ತೆಗಳನ್ನು ಹೊರತುಪಡಿಸಿ ಮಂಡಿಪೇಟೆ ರಸ್ತೆ ಮತ್ತು ಇತರೆ ರಸ್ತೆಗಳನ್ನು ಉಪಯೋಗಿಸಬಹುದಾಗಿದೆ.

    ಸಾರ್ವಜನಿಕ ವಾಹನಗಳನ್ನು ಹೊರತುಪಡಿಸಿ ಖಾಸಗಿ ವಾಹನಗಳಲ್ಲಿ ಸಮಾರಂಭಕ್ಕೆ ಬರುವ ಸಾರ್ವಜನಿಕರು ಅವರುಗಳ ವಾಹನಗಳನ್ನು ಕೊತಿತೋಪು ರಸ್ತೆಯಲ್ಲಿರುವ ಸರ್ವೋದಯ ಶಾಲಾ ಆವರಣ, ಬಿಹೆಚ್ ರಸ್ತೆಯಲ್ಲಿರುವ ಭಾರತ ಮಾತಾ ಶಾಲಾ ಆವರಣ, ಸಿರಾ ರಸ್ತೆಯ ಪವನ್ ಹೊಂಡಾಯ್ ಷೋರೂಂನ ಮುಂಭಾಗ, ಅಮಾನಿಕೆರೆಯ ಏರಿಯ ಪಕ್ಕದ ಖಾಲಿಜಾಗ, ಅಮಾನಿಕೆರೆಯ ಗ್ಲಾಸ್‍ಹೌಸ್‍ನ ಒಳಭಾಗ, ಬಾವಿಕಟ್ಟೆ ಕಲ್ಯಾಣ ಮಂಟಪ ಪಕ್ಕ, ಉಪ್ಪಾರಹಳ್ಳಿ ಬ್ರಿಡ್ಜ್ ರಸ್ತೆಯ ಸೋಮೇಶ್ವರ ಶಾಲೆಯ ಆವರಣದಲ್ಲಿ ಪಾರ್ಕಿಂಗ್ ಮಾಡಬಹುದು. ಕಾರುಗಳು ಮತ್ತು ದ್ವಿಚಕ್ರ ವಾಹನಗಳಿಗೆ ರೈಲ್ವೆಸ್ಟೇಷನ್ ರಸ್ತೆಯ ಪಶ್ಚಿಮ ಗೇಟ್‍ನಿಂದ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link