ಚಿತ್ರದುರ್ಗ:
ಸಾಮಾಜಿಕ ನ್ಯಾಯ, ಮಹಿಳೆಯರ ರಕ್ಷಣೆ, ವಿಧವೆಯರಿಗೆ ಸ್ಥಾನಮಾನ, ಹೆಣ್ಣು ಮಕ್ಕಳ ರಕ್ಷಣೆ, ಸಮಾಜದ ಕೆಲವು ಅನಿಷ್ಠ ಪದ್ದತಿಗಳ ನಿವಾರಣೆಗೆ ಮಹಾಯೋಗಿ ವೇಮನ ಅವರು ಸಾಕಷ್ಟು ದುಡಿದು, ಸಮಾಜ ಸುಧಾರಣೆ ಶ್ರಮಿಸಿದವರಲ್ಲಿ ಅಗ್ರಗಣ್ಯರಾಗಿದ್ದಾರೆ ಎಂದು ಶಾಸಕ ಜಿ.ಹೆಚ್ ತಿಪ್ಪಾರೆಡ್ಡಿ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ಇವರ ಸಹಯೋಗÀದಲ್ಲಿ ನಗರದ ತ.ರಾ.ಸು ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ‘ಮಹಾಯೋಗಿ ವೇಮನ ಜಯಂತಿ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಸರ್ಕಾರದ ವತಿಯಿಂದ ಸುಮಾರು 32 ಜಯಂತಿಗಳನ್ನು ಆಚರಿಸಲಾಗುತ್ತಿದೆ. ಕಾರಣ ಎಲ್ಲಾ ಮಹನೀಯರ ಅರಿವು ಯುವಪೀಳಿಗೆಗೆ ಇರಲಿ ಎಂಬ ಉದ್ದೇಶ. ಒಬ್ಬ ಶ್ರೀಮಂತ ಕುಟುಂಬದಲ್ಲಿ ಜನಿಸಿದ ವೇಮನರು ಭೋಗ ಜೀವನದಿಂದ ಹೊರಬಂದು ವೈರಾಗ್ಯ ಜೀವನವನ್ನು ಅರಸುವುದು ನಿಜಕ್ಕೂ ಅದ್ಬುತ ಸಂಗತಿ. ವೇಮನರ ದೂರದೃಷ್ಠಿ ಅರಿಯುವುದರ ಜೊತೆಗೆ ಅವರ ಆದರ್ಶವನ್ನು ಪ್ರತಿನಿತ್ಯ ಪಾಲಿಸಬೇಕು ಎಂದು ಶಾಸಕ ಜಿ.ಹೆಚ್ ತಿಪ್ಪಾರೆಡ್ಡಿ ಅವರು ಹೇಳಿದರು.
ಬೇಡರೆಡ್ಡಿಹಳ್ಳಿ ಬಿ.ವಿ ಅಂಜನಪ್ಪ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಎಸ್.ಬಿ ಭೀಮಾರೆಡ್ಡಿ ಅವರು ಉಪನ್ಯಾಸ ನೀಡಿ, ಇಂದು 608 ನೇ ವೇಮನ ಜಯಂತಿ ಆಚರಿಸುತ್ತಿರುವುದು ಸಂತಸದ ಸಂಗತಿ. ಬದುಕಿನ ಎಲ್ಲಾ ಅನುಭವಗಳನ್ನು ಅನುಭವಿಸಿ, ಅದರ ಮೂಲ ಸತ್ಯಾಸತ್ಯತೆ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸಿದ ಪ್ರತಿಯೊಬ್ಬರು ಇಂದು ದಾರ್ಶನಿಕರಾಗಿದ್ದಾರೆ. ಜಾತಿ, ಸಮುದಾಯ, ಸಂಕುಚಿತ ಮನೋಭಾವದಿಂದ ಹೊರಬಂದು ದಾರ್ಶನಿಕರ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು
ಜೀವನದ ಸಂಸ್ಕøತಿ, ಸಂಪ್ರದಾಯ, ಆಚರಣೆಗಳನ್ನು ಒಟ್ಟುಗೂಡಿಸಿ ಅನುಸರಣೆ ಮಾಡುವುದೇ ಸಂಸ್ಕಾರ. ಈ ಸಂಸ್ಕಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ವೇಮನರಂತಹ ಮಹನೀಯರ ಸಂದೇಶಗಳನ್ನು ದಿನನಿತ್ಯ ಪಾಲಿಸಬೇಕು ಎಂದರು.
ಅತಿ ಹೆಚ್ಚು ಸಂಶೋಧನೆಗೆ ಒಳಪಟ್ಟವರಲ್ಲಿ ವೇಮನರು ಕೂಡ ಒಬ್ಬರು. ಉತ್ತರ ಕರ್ನಾಟಕದ ಖ್ಯಾತ ಸಂಶೋಧಕ ಎಸ್.ಆರ್ ಪಾಟೀಲ್ ಅವರ ಪ್ರಕಾರ ವೇಮನರು 1412-1484 ರವರೆಗಿನ ಜೀವನ ನಡೆಸಿದರು ಎಂಬ ಉಲ್ಲೇಖವಿದೆ. ವೇಮನರ ವಚನಗಳು ಹಿಂದಿ, ಇಂಗ್ಲೀಷ್ ಭಾಷೆಗಳಿಗೆಲ್ಲಾ ತರ್ಜುಮೆಗೊಂಡಿವೆ. ನೆರೆ ರಾಷ್ಟ್ರಗಳಾದ ಇಂಗ್ಲೇಂಡ್ ಮತ್ತು ಫ್ರಾನ್ಸ್ ರಾಷ್ಟ್ರಗಳ ಗ್ರಂಥಾಲಯಗಳಲ್ಲಿ ವೇಮನ ವಚನಗಳ ಸಂಗ್ರಹವಿರುವುದು ಹೆಮ್ಮೆಯ ಸಂಗತಿ ಎಂದರು
ಇವರು ಮಲ್ಲಮ್ಮ ಮತ್ತು ಕುಮಾರಗಿರಿರೆಡ್ಡಿ ಅವರ ಮಗನಾಗಿ ಜನಿಸಿದರು. ತಮ್ಮ ಅತ್ತಿಗೆ ಹೇಮರೆಡ್ಡಿ ಮಲ್ಲಮ್ಮನ ಹಿತವಚನದಿಂದ ಸಮಾಜದ ಮಹಾಪುರುಷನಾದ. ಅವರ ವಚನಗಳ ಅಂಕಿತ ‘ವಿಶ್ವದಾಭಿರಾಮ ಕೇಳೋ ವೇಮ’ ಎಂಬುದಾಗಿದೆ. ಆತ್ಮ ವಿಮರ್ಶೆ ಹಾಗೂ ಆತ್ಮ ಶುದ್ಧಿಯಿಂದ ಇದ್ದವ ಜಗತ್ತನ್ನೇ ಗೆಲ್ಲಬಲ್ಲ ಎಂಬ ಸಂದೇಶವನ್ನು ಸಾರಿದ್ದಾರೆ ಎಂದರು.
ಅಪರ ಜಿಲ್ಲಾಧಿಕಾರಿ ಸಂಗಪ್ಪ ಮಾತನಾಡಿ, ಸಮಾಜ ಸುಧಾರಕರ ಸಾಧನೆ ಸ್ಮರಿಸಲು ಸರ್ಕಾರ ಜಯಂತಿಗಳ ಆಚರಣೆ ಜಾರಿಗೆ ತಂದಿದೆ. ಜಯಂತಿಗಳ ಆಚರಣೆ ಮೂಲಕ ಸಮಾಜದ ಸಂಘಟನೆ ರೂಪಿಸುವುದು ಸರ್ಕಾರದ ಉದ್ದೇಶವಾಗಿದೆ. ಸಮಾಜ ಸುಧಾರಕರ ಜೀವನದ ಆದರ್ಶಗಳನ್ನು ಅಳವಡಿಸಿಕೊಂಡು, ಸಮಾಜ ಸೇವೆ ಮಾಡಬೇಕು. ಸಮಾಜಕ್ಕೆ ಪ್ರತಿನಿತ್ಯ ಕೊಡುಗೆ ನೀಡುತ್ತಲೇ ಇರಬೇಕು. ಸಮಾಜದ ಒಳಿತಿಗಾಗಿ ಶ್ರಮಿಸಬೇಕು ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ. ರವಿಶಂಕರ್‍ರೆಡ್ಡಿ, ನಗರಸಭೆ ಆಯುಕ್ತ ಜಿ.ಟಿ ಹನುಮಂತರಾಜು, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ನಿಜಲಿಂಗಪ್ಪ, ರೆಡ್ಡಿ ಜನಸಂಘದ ಕಾರ್ಯದರ್ಶಿ ಇಂಟೂರು ಜಯರಾಮರೆಡ್ಡಿ, ಎಪಿಎಂಸಿ ಮಾಜಿ ಅಧ್ಯಕ್ಷ ಡಿ.ಟಿ ರಾಜೇಂದ್ರರೆಡ್ಡಿ ಸೇರಿದಂತೆ ಸಮಾಜದ ಪದಾಧಿಕಾರಿಗಳು, ಮಹಿಳೆಯರು ಹಾಗೂ ಮಕ್ಕಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
