ಹುಳಿಯಾರು
ಹುಳಿಯಾರು ಹೋಬಳಿಯ ಕೆಂಕೆರೆಯಲ್ಲಿ ನೂತನವಾಗಿ ಅಂಗನವಾಡಿ ಕಟ್ಟಡಕ್ಕೆ ಶಾಸಕರು ಶಂಕುಸ್ಥಾಪನೆ ನೆರವೇರಿಸಿದ ಮರು ಕ್ಷಣವೇ ಅಲ್ಲಿನ ಗ್ರಾಪಂ ಸದಸ್ಯ ಕಾಡಿನರಾಜ ನಾಗರಾಜು ಅವರಿಂದ ತಕರಾರು ಎದುರಿಸಬೇಕಾಯಿತು.
ಶಂಕುಸ್ಥಾಪನೆ ನೆರವೇರಿಸಿ ಶಾಸಕ ಜೆ.ಸಿ.ಮಾಧುಸ್ವಾಮಿ ಅವರು ಹೊರಡುವ ಸಂದರ್ಭದಲ್ಲಿ ನಾಗಣ್ಣ ಅವರು ಶಾಸಕರ ಬಳಿ ಬಂದು ಕಾಮಗಾರಿ ಕಂಟ್ರ್ಯಾಕ್ಟ್ ಯಾರಿಗೆ ಕೊಟ್ಟಿದ್ದೀರಿ ಎಂದು ಪ್ರಶ್ನಿಸಿದರು. ಭಟ್ಟರಹಳ್ಳಿ ದಿನೇಶ್ ಅನ್ನುವವರಿಗೆ ಕೊಟ್ಟಿರುವುದಾಗಿ ಶಾಸಕರು ಹೇಳಿದಾಗ ನಮ್ಮೂರಲ್ಲೇ ಅನೇಕರು ಕೆಲಸ ಮಾಡುವವರಿದ್ದರೂ ಬೇರೆಯವರಿಗೆ ಕೊಟ್ಟಿದ್ದೀರಿ. ನಾನು ಬೇರೆಯವರು ಕಾಮಗಾರಿ ಮಾಡಲು ಬಿಡಲ್ಲ ಎಂದರು.
ಇದೇ ಸಂದರ್ಭದಲ್ಲಿ ಗ್ರಾಮಸ್ಥ ಮಚ್ಚು ಬಸವರಾಜು ಅವರು ಊರಿನವರು ಕೆಸಲ ಮಾಡಿದರೆ ನಾನು ಬಿಡೋದಿಲ್ಲ. ಬೇರೆಯೂರಿನವರು ಬಂದು ಮಾಡಿದರೆ ಗುಣಮಟ್ಟ ಕೇಳಬಹುದು. ಊರಿನವರು ಮಾಡಿದರೆ ಎಲ್ಲದಕ್ಕೂ ಅನುಸರಿಸಿಕೊಂಡು ಹೋಗಬೇಕಾಗುತ್ತದೆ ಎಂದು ಹೇಳಿದರು. ಇದಕ್ಕೆ ಪ್ರತಿಯಾಗಿ ನಾಗಣ್ಣ ಅವರು ಅನೇಕ ಕಾಮಗಾರಿ ನಾನೂ ಮಾಡಿದ್ದು ಕಳಪೆ ಇದ್ದರೆ ತೋರಿಸಲಿ ಎಂದು ಸವಾಲು ಹಾಕಿದರು.
ಈ ಇಬ್ಬರ ನಡುವ ಮಾತಿನ ಚಕಮಕಿ ಅರಿತ ಶಾಸಕರು ಮಧ್ಯ ಪ್ರವೇಶಿಸಿ 2 ತಿಂಗಳಿಂದ ಇದೇ ಊರಿನವರಾರಾದರೂ ಮಾಡುತ್ತಾರೆ ಕೇಳಿ ಎಂದು ಅಧಿಕಾರಿಗಳಿಗೆ ಮತ್ತು ಸ್ಥಳೀಯ ಮುಖಂಡರಿಗೆ ತಿಳಿಸಿದ್ದೆ. 2 ತಿಂಗಳು ಕಳೆದರೂ ಯಾರೊಬ್ಬರೂ ಮುಂದೆ ಬಾರದಿದ್ದರಿಂದ ಅನಿವಾರ್ಯವಾಗಿ ನಾನೇ ದಿನೇಶ್‍ಗೆ ಹೇಳಿದ್ದೇನೆ. ಈಗ ಈ ಕೆಲಸ ಮಾಡಲಿ ಮುಂದೆ ಆಗಬೇಕಿರುವ ಕಾಮಗಾರಿಗೆ ಊರಿನವರು ಮುಂದೆ ಬಂದರೆ ಖಂಡಿತ ಕೊಡುತ್ತೇನೆ ಎಂದು ನಾಗಣ್ಣನ ಮನವೊಲಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ