ಪಾವಗಡ
ತಾಲ್ಲೂಕಿನ ತಿರುಮಣಿ ಗ್ರಾಮದ ಕೆನರಾಬ್ಯಾಂಕ್ ಶಾಖೆಯಿಂದ ಸಿಎಸ್‍ಆರ್ ಪ್ರಾಜೆಕ್ಟ್‍ನ ಕೆನರಾ ವಿದ್ಯಾಜ್ಯೋತಿ ಯೋಜನೆಯಡಿಯಲ್ಲಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮೂವರು ವಿದ್ಯಾರ್ಥಿನಿಯರಿಗೆ ತಲಾ 5000 ರೂ. ಹಾಗೂ ಪ್ರಾಥಮಿಕ ಶಾಲೆಯ ಮೂವರು ವಿದ್ಯಾರ್ಥಿನಿಯರಿಗೆ ತಲಾ 2,500 ರೂ.ಗಳ ಚೆಕ್‍ನ್ನು ಕೆನರಾಬ್ಯಾಂಕ್ ಮ್ಯಾನೇಜರ್ ಪಿ.ಕಲ್ಯಾಣಚಕ್ರವರ್ತಿ ಶನಿವಾರ ವಿತರಿಸಿದರು. ಉಪಪ್ರಾಂಶುಪಾಲ ಎಚ್.ರಾಘವೇಂದ್ರ, ದೈಹಿಕ ಶಿಕ್ಷಕ ನಜೀರ್, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಕೃಷ್ಣಮೂರ್ತಿ ಹಾಜರಿದ್ದಾರೆ.