ಹರಪನಹಳ್ಳಿ
ತಾಲೂಕಿನ ಅರಸೀಕೆರೆ ಗ್ರಾಮದಲ್ಲಿ ಶ್ರೀ ಕೋಲಶಾಂತೇಶ್ವರ ಮಠದ ಬಳಿ ಬುಧುವಾರ ಆಕಸ್ಮಿಕ ವಿದ್ಯುತ್ ಕಿಡಿ ತಗುಲಿದ ಪರಿಣಾಮ ಲಕ್ಷಾಂತರ ಮೌಲ್ಯದ ಬಣವೆಗಳು ಭಸ್ಮವಾಗಿದ್ದು, ಅದೃಷ್ಟವಶಾತ್ ನಾಲ್ಕು ಎತ್ತುಗಳು ಬೆಂಕಿಯಿಂದ ಪಾರಾಗಿವೆ.
ಡಿ.ನಾಗೇಂದ್ರಪ್ಪ ಸೇರಿದ ಎರಡು ಬಣವೆ, ಮಡಿವಾಳರ ಸುರೇಶ್, ಕಣ್ವಪ್ಪ ಮತ್ತು ಸಿದ್ದಪ್ಪ ಅವರಿಗೆ ಸೇರಿದ ತಲಾ ಒಂದು ಬಣವೆಗಳು ಬೆಂಕಿಗೆ ಆಹುತಿಯಾಗಿವೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಠಾಣೆ ಸಿಬ್ಬಂದಿ, ಪೊಲೀಸರು ಹಾಗೂ ಗ್ರಾಮಸ್ಥರು ಜಂಟಿ ಕಾರ್ಯಾಚರಣೆ ನಡೆಸಿ ಹಬ್ಬುತ್ತಿದ್ದ ಬೆಂಕಿ ನಂದಿಸಿದರು.
ಕಣದಲ್ಲಿ ಕಟ್ಟಲಾಗಿದ್ದ ಎತ್ತುಗಳನ್ನು ಸುರಕ್ಷಿತವಾಗಿ ಗ್ರಾಮಸ್ಥರು ಕಾಪಾಡಿದ್ದಾರೆ. ಬಿತ್ತನೆ ಸಮಯದಲ್ಲಿ ಹೊಲದಲ್ಲಿ ಮೇವು ಸಿಗುವುದಿಲ್ಲ, ದಾಸ್ತಾನು ಮಾಡಿದ್ದ ಮೇವು ಈಗಾಯ್ತು ಎಂದು ರೈತರು ಚಿಂತೆಗೀಡಾಗಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ