ವಿಜ್ಞಾನ ಮೇಳ ಕಾರ್ಯಕ್ರಮ

ಹರಪನಹಳ್ಳಿ:

     ಮಕ್ಕಳಲ್ಲಿ ವೈಜ್ಞಾನಿಕ ಕೌಶಲ್ಯ ಬೆಳೆಸುವುದು ಇಂದಿನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ವಿಜ್ಞಾನ ಮೇಳದಂತ ಕಾರ್ಯಕ್ರಮಗಳು ವಿಜ್ಞಾನ ಕಲಿಕೆ ಪೂರಕವಾಗಿದೆ ಎಂದು ಬಳ್ಳಾರಿ ವಿವಿ ಸಂಘದ ಉಪಾಧ್ಯಕ್ಷ ಎಚ್.ಎಂ.ವೀರಭದ್ರಶರ್ಮ ಅಭಿಪ್ರಾಯಪಟ್ಟರು.

      ಪಟ್ಟಣದ ಎಡಿಬಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಕಾಲೇಜು ವತಿಯಿಂದ ವಿಜ್ಞಾನ ಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

      ವಿಜ್ಞಾನ ಕ್ಷೇತ್ರ ಸಾಗರವಿದ್ದಂತೆ. ಹುಡುಕಿದಷ್ಟು ಆಳವಾಗಿದೆ. ಈ ಕ್ಷೇತ್ರದ ಮೇಲೆ ಸಾಕಷ್ಟು ಸಂಶೋಧನೆಗಳು ನಡೆಸಿದ್ದರೂ ಮತ್ತೆ ಹೊಸ ಹೊಸ ಆವಿಷ್ಕಾರಗಳು ಗೋಚರಿಸುತ್ತಿವೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿ ವಿಜ್ಞಾನದ ಚಿಂತನೆಗೆ ಒಳಪಡಿಸಬೇಕಿದೆ. ಇಂತಹ ಕಾರ್ಯಕ್ರಮಗಳಿಗೆ ಸಂಘ ಬೆಂಬಲಿಸುತ್ತಾ ಬಂದಿದೆ’ ಎಂದರು.

      ಎಸ್.ಎಸ್.ಎಚ್.ಜೈನ್ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಸಿ.ಮೋಹನರೆಡ್ಡಿ ಮಾತನಾಡಿ, `ಜೀವ ಜಗತ್ತಿನಲ್ಲಿ ಪ್ರಕೃತಿ ಮತ್ತು ವಿಜ್ಞಾನಿಗಳ ಮಧ್ಯೆ ಸ್ಪರ್ಧೆ ನಿರಂತರವಾಗಿದೆ. ವಿಸ್ಮಯಗಳು ಹುಟ್ಟಿದಂತೆ ಸಂಶೋಧನೆಗಳೂ ನಡೆಯುತ್ತಲೇ ಇರುತ್ತವೆ. ಮಕ್ಕಳಲ್ಲಿ ವಿಜ್ಞಾನ ಬಗ್ಗೆ ಅಭಿರುಚಿ ಬೆಳೆಸಿದರೆ ವೈಜ್ಞಾನಿಕ ವಿಷಯಗಳ ಬಗ್ಗೆ ಅರಿಯಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

       ಗುಲ್ಬರ್ಗಾ ವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ.ಬಿ.ಕೆ.ಪ್ರಭಾಕರ ಅವರು, `ಇಂದಿನ ದಿನದಲ್ಲಿ ವಿಜ್ಞಾನ ಶಿಕ್ಷಣದ ಮಹತ್ವ’ ಹಾಗೂ ಬಳ್ಳಾರಿ ಎ.ಎಸ್.ಎಂ.ಮಹಿಳಾ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಎಸ್.ಸೋಮಶೇಖರ ಅವರು, `ಬೆಳಕಿನ ಸ್ವಭಾವದ ಅದ್ಭುತಗಳು’ ವಿಶೇಷ ಉಪನ್ಯಾಸ ನೀಡಿದರು. ಅಧ್ಯಕ್ಷ ಅಕ್ಕಿ ಶಿವಕುಮಾರ ಅಧ್ಯಕ್ಷತೆ ವಹಿಸಿದ್ದರು. ಗಣಿತಶಾಸ್ತ್ರ ವಿಭಾಗದ ಬಿ.ಬಸವರಾಜ ಪ್ರಾಸ್ತಾವಿಕ ಮಾತನಾಡಿದರು.

        ದಾವಿವಿ ಕುಲಸಚಿವ ಬಸವರಾಜ ಬಣಕಾರ, ಸಾರಿಗೆ-ಬಂದರು ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಂ.ಲಿಂಗಪ್ಪ, ಕಾಲೇಜು ಆಡಳಿತ ಮಂಡಳಿ ಕಾಲೇಜು ಆಡಳಿತ ಮಂಡಳಿ ಸದಸ್ಯ ಕೆ.ಎಂ.ಬಸವರಾಜಯ್ಯ, ಪ್ರಾಂಶುಪಾಲ ಡಾ.ಎಚ್.ಮಲ್ಲಿಕಾರ್ಜುನ ಗೌಡ, ಡಾ.ತಿಪ್ಪೇಸ್ವಾಮಿ, ಅರವಿ ಬಸನಗೌಡರ ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap