ಹುಳಿಯಾರು:
ಸ್ವಾತಂತ್ರ್ಯ ದಿನಾಚರಣೆಯನ್ನು ಗಲ್ಲಿಗಲ್ಲಿಯಲ್ಲಿ ಆಚರಿಸಿದರೆ ದೇಶದ ಅಭಿವೃದ್ಧಿಯಾಗುವುದಿಲ್ಲ. ಬದಲಾಗಿ ಗಾಂದೀಜಿಯ ಕನಸಿನಂತೆ ಹಳ್ಳಿಗಳ ಅಭಿವೃದ್ಧಿ ಮುಂದಾಗಬೇಕು. ವಿದೇಶಿ ವಸ್ತುಗಳ ಮೇಲಿನ ಮೋಹ ಬಿಟ್ಟು ಸ್ವದೇಶಿ ವಸ್ತುಗಳನ್ನು ಬಳಸಬೇಕು ಎಂದು ಪಪಂ ಮುಖ್ಯಾಧಿಕಾರಿ ಮಂಜುನಾಥ್ ಕರೆ ನೀಡಿದರು. ಹುಳಿಯಾರು ಪಟ್ಟಣ ಪಂಚಾಯ್ತಿಯಿಂದ ಏರ್ಪಡಿಸಿದ್ದ 74 ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ರಸ್ತೆ ಒತ್ತುವರಿ ಮಾಡಿಕೊಂಡು ಕಟ್ಟಡಗಳನ್ನು ಕಟ್ಟುವುದು, ಮನೆಯ ಕಸವನ್ನು ಬೀದಿಗೆ ಎಸೆಯುವುದು, ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ಹಾಳುಮಾಡುವುದು, ಕೆರೆಗಳಿಗೆ ತ್ಯಾಜ್ಯ ಸುರಿದು ನೀರನ್ನು ಕಲುಷಿತ ಮಾಡುವುದು, ಮರಗಿಡಗಳನ್ನು ಕಡಿದು ಪರಿಸರ ನಾಶ ಮಾಡುವುದು ಸಹ ದೇಶದ್ರೋಹದ ಕೆಲಸವಾಗಿದೆ ಎಂದರು.
ಪರಿಸರ ಅಸಮತೋಲನದಿಂದ ಅತಿವೃಷ್ಟಿ, ಅನಾವೃಷ್ಟಿಯಂತಹ ಪ್ರಕೃತಿ ವಿಕೋಪಗಳು ಸಂಭವಿಸುತ್ತಿವೆ. ಇದರ ತಡೆಗೆ ಅರಣ್ಯ ಸಂಪತ್ತು ಉಳಿಸಿ ಬೆಳೆಸಬೇಕಿದೆ, ನೀರಿನ ಸದ್ಬಳಕೆ ಮಾಡಿಕೊಳ್ಳಬೇಕಿದೆ. ಹಾಗಾಗಿ 74 ನೇ ಸ್ವಾತಂತ್ರ್ಯ ದಿನದ ನೆನಪಲ್ಲಿ ಗಿಡ ಬೆಳೆಸೋಣ, ನೀರು ಉಳಿಸೋಣ ಎಂಬ ತತ್ವದಡಿ ನಾವೆಲ್ಲರೂ ಮುನ್ನೆಡೆಯಬೇಕಿದೆ ಎಂದರು.
ಈ ಸಂದರ್ಭದಲ್ಲಿ ಕೊರೊನಾ ವಾರಿಯರ್ಸ್‍ಗಳಾದ ಆನಂದ್ ಹಾಗೂ ನಾಗರಾಜು ಅವರನ್ನು ಸನ್ಮಾನಿಸಲಾಯಿತು.
ಪಪಂ ಸಿಬ್ಬಂದಿಗಳಾದ ಆನಂದ್, ವೆಂಕಟೇಶ್, ಕೃಷ್ಣಮೂರ್ತಿ, ಲೈಬ್ರೆರಿ ಗಿರೀಶ್, ಪೌರಕಾರ್ಮೀಕರಾದ ರಾಘವೇಂದ್ರ, ಸಾದಿಕ್, ನಿರ್ವಾಣಸ್ವಾಮಿ, ಕುಮಾರ್, ಸರ್ದಾರ್, ಸಣ್ಣಹನುಮಂತಯ್ಯ, ದುರ್ಗಯ್ಯ ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ