ತುಮಕೂರು
ತಿಪಟೂರು ತಾಲ್ಲೂಕು ಮಡೆನೂರು ಗ್ರಾಮಲೆಕ್ಕಿಗ ರವಿಶಂಕರ್ 5 ಸಾವಿರ ಲಂಚ ಪಡೆಯುತ್ತಿದ್ದಾಗ ಭ್ರಷ್ಟಾಚಾರ ನಿಗ್ರಹ ದಳದ ದಾಳಿಗೆ ಸಿಕ್ಕಿಬಿದ್ದಿದ್ದಾರೆ.ಮಡೆನೂರು ಗ್ರಾಮಲೆಕ್ಕಿಗರ ವ್ಯಾಪ್ತಿಯಲ್ಲಿ ಬರುವ ಕಂದಾಯದ ಜಮೀನನ್ನು ದೂರುದಾರರಾದ ಉಮೇಶ್ ರವರ ಅಕ್ಕ ಶುದ್ಧ ಕ್ರಯಕ್ಕೆ ಖರೀದಿ ಮಾಡಿದ್ದು, ಖರೀದಿದಾರರ ಹೆಸರಿಗೆ ಸ್ವತ್ತನ್ನು ಖಾತೆ ಬದಲಾವಣೆ ಮಾಡಲು 30 ಸಾವಿರ ಲಂಚದ ಹಣಕ್ಕೆ ಒತ್ತಾಯಿಸಿದ್ದರು ಎನ್ನಲಾಗಿದೆ.
ದೂರುದಾರರಾದ ಉಮೇಶ್‍ರವರು ಮೊದಲ ಕಂತಾಗಿ 5 ಸಾವಿರ ರೂ.ಗಳನ್ನು ಫೋನ್ ಪೇ ಮುಖಾಂತರ ಗ್ರಾಮಲೆಕ್ಕಿಗ ರವಿಶಂಕರ್‍ರವರ ಖಾತೆಗೆ ವರ್ಗಾವಣೆ ಮಾಡಿದ್ದರು. ಉಳಿಕೆ 25 ಸಾವಿರ ರೂ.ಗಳ ಬಾಬ್ತು 2 ನೇ ಕಂತಾಗಿ 5 ಸಾವಿರ ರೂಗಳನ್ನು ಮಂಗಳವಾರ ಪಾವತಿಸುವ ವೇಳೆ ತುಮಕೂರು ಭ್ರಷ್ಟಾಚಾರ ನಿಗ್ರಹದಳದ ಉಪಾಧೀಕ್ಷಕ ಬಿ.ಉಮಾಶಂಕರ್ ಅವರು ನೆರಳು ಸಾಕ್ಷಿಗಳ ಸಮ್ಮುಖದಲ್ಲಿ ಹಣದ ಸಮೇತ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ರವಿಶಂಕರ್ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಕಲಂ 7ಎ ಅನ್ವಯ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ