ಹುಳಿಯಾರು:
ಕಳಪೆ ಗುಣಮಟ್ಟದ ಚರಂಡಿ ಡಕ್ ಕಿತ್ತಾಕಿ ಗುಣಮಟ್ಟದ ಕಾಮಗಾರಿ ಮಾಡುವಂತೆ ಗ್ರಾಮಸ್ಥರು ಒತ್ತಡ ಹಾಕಿದ ಘಟನೆ ಹುಳಿಯಾರು ಹೋಬಳಿಯ ನಂದಿಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಪಿಡ್ಲ್ಯೂಡಿಯಿಂದ ನಂದಿಹಳ್ಳಿ ಗ್ರಾಮದಲ್ಲಿ ಚರಂಡಿ ಕಾಮಗಾರಿ ಮಾಡಲಾಗುತ್ತಿದ್ದು ಚರಂಡಿ ಕಾಮಗಾರಿಯು ತೀರ ಕಳಪೆಯಿಂದ ಮಾಡಲಾಗುತ್ತಿತ್ತು. ಅಲ್ಲದೆ ಕ್ಯೂರಿಂಗ್ ಸಹ ಸರಿಯಾಗಿ ಮಾಡದೆ ಅಲ್ಲಲ್ಲಿ ಚರಂಡಿ ಬಿರುಕು ಬಿಟ್ಟಿತ್ತು.ಈ ಬಗ್ಗೆ ಗ್ರಾಮಸ್ಥರು ಎಂಜಿನಿಯರ್ ಹಾಗೂ ಗುತ್ತಿಗೆದಾರರಿಗೆ ದೂರು ನೀಡಿದರೂ ಸಹ ಪ್ರಯೋಜವಾಗಲಿಲ್ಲ. ಈಗ ರಸ್ತೆ ಇರುವ ಕಡೆ ಚರಂಡಿಯ ಮೇಲೆ ಕಾಂಕ್ರೀಟ್ ಡಕ್ ಹಾಕಲಾಗುತ್ತಿದ್ದು ಇದೂ ಸಹ ಕಳಪೆಯಿಂದ ಮಾಡುತ್ತಿದ್ದು ಅದರ ಮೇಲೆ ಹೆಜ್ಜೆ ಇಟ್ಟರೆ ಸಾಕು ಕಿತ್ತೋಗುತ್ತಿತ್ತು.
ಪದೇ ಪದೇ ಕಳಪೆ ಕಾಮಗಾರಿ ಕಂಡು ಬೇಸತ್ತ ಕೆಲ ಗ್ರಾಮಸ್ಥರು ಗುಣಮಟ್ಟದ ಕಾಮಗಾರಿ ಮಾಡುವಂತೆ ಮೇಸ್ತ್ರಿ ಬಳಿ ಬಂದು ಕೇಳಿಕೊಂಡಿದ್ದಾರೆ. ಕಳಪೆಯನ್ನು ಒಪ್ಪದ ಮೇಸ್ತ್ರಿ ನಾವು ಗುಣಮಟ್ಟದ ಕಾಮಗಾರಿ ಮಾಡುತ್ತಿರುವುದಾಗಿ ಹೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಕಾಲಿನಿಂದ ಡಕ್ ತುಳಿದು ಕಳಪೆ ಕಾಮಗಾರಿಯ ದರ್ಶನ ಮಾಡಿಸಿದ್ದಾರೆ.
ಕಾಲಿಟ್ಟ ಕೂಡಲೆ ಕುಸಿದ ಡಕ್ ನೋಡಿ ಮುಜುಗರಕ್ಕೀಡಾಡ ಮೇಸ್ತ್ರೀ ಪೂರ್ತಿ ಕಿತ್ತು ಗುಣಮಟ್ಟದ ಕಾಮಗಾರಿ ಮಾಡುವ ಭರವಸೆ ನೀಡಿದ್ದಾರೆ. ತಕ್ಷಣ ಕೆಲಸಗಾರರನ್ನು ಕರೆಸಿ ಕಾಮಗಾರಿ ಆರಂಭಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ