ಬೆಂಗಳೂರು
ಸ್ಕೂಟರ್ಗಳಲ್ಲಿ ಅಪಾಯಕಾರಿ ವ್ಹೀಲಿಂಗ್ ಮಾಡುತ್ತಿದ್ದ ನಾಲ್ವರನ್ನು ಕೆಂಗೇರಿಯ ಹೆಮ್ಮಿಗೆಪುರದ ಗ್ರಾಮಸ್ಥರು ಹಿಡಿದು ಧರ್ಮದೇಟು ಕೊಟ್ಟು ತಕ್ಕ ಶಾಸ್ತಿ ಮಾಡಿದ್ದಾರೆ.
ನೈಸ್ ರಸ್ತೆಯ ಹೆಮ್ಮಿಗೆಪುರದ ಬಳಿ ಭಾನುವಾರ ಮಧ್ಯಾಹ್ನ ಎರಡು ಸ್ಕೂಟರ್ಗಳಲ್ಲಿ ನಾಲ್ವರು ಯುವಕರು ವೀಲಿಂಗ್ ಮಾಡುತ್ತಿರುವುದದನ್ನು ನೋಡಿದ ಹೆಮ್ಮಿಗೆಪುರದ ಗ್ರಾಮಸ್ಥರು ಅವರನ್ನು ತಡೆದು, ಹಿಗ್ಗಾಮುಗ್ಗಾ ಥಳಿಸಿ ಮತ್ತೊಮ್ಮೆ ವೀಲಿಂಗ್ ಮಾಡದಂತೆ ಎಚ್ಚರಿಕೆ ಕೊಟ್ಟಿದ್ದಾರೆ.
ಗ್ರಾಮಸ್ಥರಿಂದ ಗೂಸಾ ತಿಂದ ಯುವಕರ ಹೆಸರು ತಿಳಿದು ಬಂದಿಲ್ಲ. ಗ್ರಾಮಸ್ಥರು ಯುವಕರನ್ನು ಥಳಿಸಿದ್ದು ಅಷ್ಟೇ ಅಲ್ಲದೆ ಸ್ಕೂಟಿಗಳಿಗೆ ಕಲ್ಲು, ಕೋಲಿನಿಂದ ಹೊಡೆದು ಜಖಂಗೊಳಿಸಿದ್ದಾರೆ.ಇತ್ತೀಚೆಗಷ್ಟೇ ಸ್ಕೂಟರ್ನಲ್ಲಿ ವ್ಹೀಲಿಂಗ್ ಮಾಡುತ್ತಿದ್ದ ಯುವಕರು ಡಿಕ್ಕಿ ಹೊಡೆದು ಹೆಮ್ಮಿಗೆಪುರದ ಸಿದ್ದಪ್ಪ ಎನ್ನುವರ ಕಾಲು ಮುರಿದಿತ್ತು.ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ವೀಲಿಂಗ್ ಮಾಡುವ ಯುವಕರಿಗೆ ಪಾಠ ಕಲಿಸಿದ್ದಾರೆ.ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








