ಬೆಂಗಳೂರು:
ಯುನೆಸ್ಕೋ ಸಹಯೋಗದಲ್ಲಿ ಐತಿಹಾಸಿಕ ವಾಹನಗಳ ಭಾರತದ ಕಾರು ಒಕ್ಕೂಟ ಆಯೋಜಿಸಿರುವ ವಿಂಟೇಜ್ ಕಾರ್ ರ್ಯಾವಲಿಗೆ ವಿಧಾನಸೌಧದ ಆವರಣದಲ್ಲಿಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಚಾಲನೆ ನೀಡಿದರು.
ಈ ರ್ಯಾಲಿ ಮೈಸೂರಿಗೆ ತೆರಳಿದ್ದು, 2 ದಿನಗಳ ಕಾಲ ಅಲ್ಲಿ ಪ್ರದರ್ಶನಗಳಲ್ಲಿ ಪಾಲ್ಗೊಳ್ಳಲಿದೆ. ಐತಿಹಾಸಿಕ ಪರಂಪರೆ ಸಾರುವ ಈ ರ್ಯಾಲಿಯಲ್ಲಿ 50 ಕಾರ್‍ಗಳು ಪಾಲ್ಗೊಂಡಿದ್ದು, ಭಾರತ ಅಲ್ಲದೇ ಶ್ರೀಲಂಕ, ಲಂಡನ್ ಮತ್ತಿತರ ವಿದೇಶಗಳ ಅತ್ಯಂತ ಹಳೆಯದಾದ ವಿಶೇಷ ಕಾರುಗಳು ಭಾಗವಹಿಸಿವೆ.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಮಾತನಾಡಿ, ವಿಶ್ವವಿಖ್ಯಾತ ದಸರಾ ಮಹೋತ್ಸವವನ್ನು ಅತ್ಯಂತ ಯಶಸ್ವಿಯಾಗಿಸಲು ವಿಂಟೇಜ್ ಕಾರ್ ರ್ಯಾಲಿ ಪಾಲ್ಗೊಳ್ಳುತ್ತಿದ್ದು, ಸರ್ಕಾರದಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
ನಂತರ ಮೈಸೂರಿನ ಅಂಬಾ ವಿಲಾಸ ಅರಮನೆ ಆವರಣದಲ್ಲಿ ವಿಂಟೇಜ್ ಕಾರುಗಳಿಗೆ ಭವ್ಯಸ್ವಾಗತ ನೀಡಲಾಯಿತು. ಇದಕ್ಕೂ ಮುನ್ನ ಮೈಸೂರಿನ ಪ್ರಮುಖ ಬೀದಿಗಳಲ್ಲಿ ಕಾರುಗಳು ಸಂಚರಿಸಿ, ಮೈಸೂರಿನ ಪಾರಂಪರಿಕ ಸ್ಥಳ ಮತ್ತು ಕಟ್ಟಡಗಳ ಮಹತ್ವವನ್ನು ಸಾರಿದವು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ