ಬೆಂಗಳೂರು
ಶಾಸಕರರಾಜೀನಾಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‍ತೀರ್ಪು ಬುಧವಾರ ಬೆಳಿಗ್ಗೆ ಹೊರಬರುವುದು ನಿಗದಿಯಾಗುತ್ತಿ ದ್ದಂತೆಯೇ ವಿಶ್ವಾಸ ಮತಯಾಚನೆಯ ಸಂದರ್ಭದಲ್ಲಿ ಸರ್ಕಾರದ ಪರವಾಗಿ ಮತಚಲಾಯಿಸುವಂತೆಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ತಮ್ಮ ಶಾಸಕರಿಗೆ ವಿಪ್ ಜಾರಿ ಮಾಡಿವೆ.
ವಿಶ್ವಾಸ ಮತಯಾಚನೆಯ ಸಂದರ್ಭದಲ್ಲಿ ಹಾಜರಿದ್ದು ವಿಶ್ವಾಸಮತಯಾಚನೆಯ ನಿರ್ಣಯದ ಪರವಾಗಿ ಮತಚಲಾಯಿಸಬೇಕು .ಇಲ್ಲದಿದ್ದರೆ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದುಉಭಯ ಪಕ್ಷಗಳ ಶಾಸಕಾಂಗ ನಾಯಕರು ವಿಪ್‍ನಲ್ಲಿ ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ಧರಾಮಯ್ಯ ತಮ್ಮ ಪಕ್ಷದ ಶಾಸಕರಿಗೆ ವಿಪ್ ಜಾರಿಮಾಡಿದ್ದರೆ,ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿತಮ್ಮ ಪಕ್ಷದ ಶಾಸಕರಿಗೆ ವಿಪ್ ಜಾರಿ ಮಾಡಿದ್ದಾರೆ.
ಶಾಸಕರ ಮನೆ,ಎಲ್.ಹೆಚ್.ನಲ್ಲಿರುವ ಶಾಸಕರ ಕೊಠಡಿ ಸೇರಿದಂತೆ ಶಾಸಕರು ಎಲ್ಲಿ ಲಭ್ಯವಿರುತ್ತಾರೆ ಎಂಬ ಮಾಹಿತಿ ಇದೆಯೋ?ಅಲ್ಲಿಗೆ ಹೋಗಿ ವಿಪ್ ಅನ್ನು ತಲುಪಿಸಲಾಗಿದೆ. ಸಿಗದ ಶಾಸಕರ ಮನೆ ಮತ್ತುಎಲ್.ಹೆಚ್.ನ ಕೊಠಡಿಗಳಿಗೆ ವಿಪ್ ಪ್ರತಿಯನ್ನು ಅಂಟಿಸಿ ಬರಲಾಗಿದೆ.
ಹೀಗೆ ಸುಪ್ರೀಂಕೋರ್ಟ್‍ತೀರ್ಪು ಬರುವ ಮುನ್ನವೇ ಶಾಸಕರಿಗೆ ವಿಪ್ ಬಾಂಬ್‍ಜಾರಿಯಾಗಿದ್ದುಇದುಎಷ್ಟರ ಮಟ್ಟಿಗೆ ಕೆಲಸ ಮಾಡಲಿದೆ ಎಂಬುದು ಬುಧವಾರ ಬೆಳಿಗ್ಗೆ ಪ್ರಕಟವಾಗಲಿರುವ ಸುಪ್ರಿಂಕೋರ್ಟ್‍ತೀರ್ಪಿನ ನಂತರಖಚಿತವಾಗಲಿದೆ.ಒಂದು ವೇಳೆ ಶಾಸಕರ ರಾಜೀನಾಮೆ ಯನ್ನು ಅಂಗೀಕರಿಸುವಂತೆ ಸುಪ್ರೀಂಕೋರ್ಟ್ ಹೇಳಿದರೆ ಇದಕ್ಕೆ ಪರ್ಯಾಯವಾಗಿ ವಿಶ್ವಾಸ ಮತಯಾಚನೆಯ ಸಂದರ್ಭವನ್ನು ಬಳಸಿಕೊಂಡು ಅವರನ್ನು ಅನರ್ಹಗೊಳಿಸಲು ಉಭಯ ಪಕ್ಷಗಳ ನಾಯಕರು ನಿರ್ಧರಿಸಿದ್ದಾರೆ.
ಆದರೆ ಯಾವಕಾರಣಕ್ಕೂ ಶಾಸಕರನ್ನು ಸದಸ್ಯತ್ವದಿಂದ ಅನರ್ಹಗೊಳಿಸದಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿದರೆ ಏನು ಮಾಡಬೇಕು? ಎನ್ನುವ ಕುರಿತು ಇಂದು ಉಭಯ ಪಕ್ಷಗಳ ನಾಯಕರು ಸುಧೀರ್ಘ ಚರ್ಚೆ ನಡೆಸಿದರು. ಈ ಮಧ್ಯೆ ಸುಪ್ರೀಂಕೋರ್ಟ್‍ತೀರ್ಪು ಬುಧವಾರ ಪ್ರಕಟವಾಗಲಿರುವ ಹಿನ್ನೆಲೆಯಲ್ಲಿ ಇಂದು ತಮ್ಮ ಸ್ವಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಭಾಧ್ಯಕ್ಷ ರಮೇಶ್ ಕುಮಾರ್ : ನಾನು ಸುಪ್ರೀಂಕೋರ್ಟ್‍ಗಿಂತ ದೊಡ್ಡವನಲ್ಲ . ಹೀಗಾಗಿ ಬುಧವಾರ ಅದು ತೀರ್ಪು ನೀಡಿದ ಬಳಿಕ ಮುಂದೇನು ಮಾಡಬೇಕು?ಎಂಬುದನ್ನು ತೀರ್ಮಾನಿಸುತ್ತೇನೆ ಎಂದರು.