ಚಿತ್ರದುರ್ಗ;
ಜಿಲ್ಲೆಯಲ್ಲಿ ಸಕಾಲದಲ್ಲಿ ಮಳೆ ಬೀಳದೆ ಜನ ಜಾನುವಾರುಗಳು ಸಂಕಟ ಅನುಭವಿಸುತ್ತಿದ್ದು ಭಗವಂತ ಉತ್ತಮ ಮಳೆ ಬೆಳೆ ಕರುಣಿಸಲ್ಲಿ ಎಂದು ನಗರದ ಜೆಸಿಆರ್ ಬಡಾವಣೆಯ ಗಣಪತಿ ದೇವಾಲಯದಲ್ಲಿ ಬುಧವಾರ ಚಿತ್ರದುರ್ಗದ ಗಮಕ ಕಲಾ ಪರಿಷತ್ತಿನಿಂದ ನಾಡಿನಲ್ಲಿ ಉತ್ತಮ ಮಳೆಗಾಗಿ ವಿರಾಟ ಪರ್ವ ವಾಚನ ಕಾರ್ಯಕ್ರಮ ಆಯೋಜಿಸಲಾಗಿತು.
ಬೆಳಗ್ಗೆ ಗಣಪತಿ ದೇವಾಲಯದ ಆವರಣದಲ್ಲಿರುವ ಆಂಜನೇಯ ದೇವಾಲಯದಲ್ಲಿ ವಿಶೇಷ ಅಲಂಕಾರ ಮಾಡಲಾಗಿತು. ವಿಶೇಷ ಅಭಿಷಕ ಮಾಡಿ ಆರತಿ ಬೆಳಗಲಾಯಿತು. ನಂತರ ಹನುಮಾನ ಚಾಲೀಸ್ ಪಠಿಸಿ ಸಾಮೋಹಿಕ ಭಜನೆ ಮಾಡಲಾಯಿತು. ಸಂಜೆ ಚಿತ್ರದುರ್ಗದ ಗಮಕ ಕಲಾ ಪರಿಷತ್ತಿನಿಂದ ನಾಡಿನಲ್ಲಿ ಉತ್ತಮ ಮಳೆಗಾಗಿ ವಿರಾಟ ಪರ್ವ ವಾಚನ ಕಾರ್ಯಕ್ರಮ ನಡೆಯಿತು. ವಿರಾಟ ಪರ್ವವನ್ನು ಗಮಕ ಪರಿಷತ್ತಿನ ರಾಜೇಶ್ವರಿ ವಾಚಿಸಿದರು ಹಾಗೂ ರಮದೇವಿ ಇದರ ವ್ಯಾಖ್ಯಾನ ನೀಡಿದರು. ಗಣಪತಿ ದೇವಾಲಯ ಸಮಿತಿಯ ಅಧ್ಯಕ್ಷ ಆರ್.ಕೃಷ್ಣಮೂರ್ತಿ ಹಾಗೂ ಅರ್ಚಕ ನಾಗರಾಜ ಶಾಸ್ತ್ರಿ ಮತ್ತಿತರರು ಉಪಸ್ಥಿತರಿದ್ದರು.