ಡಾ.ವಿಷ್ಣುವರ್ಧನ ಸ್ಮರಣಾರ್ಥ ನಾಳೆ ಅಂಚೆ ಚೀಟಿ ಬಿಡುಗಡೆ..!

ಬೆಂಗಳೂರು:

   ಕನ್ನಡದ ಚಿತ್ರರಂಗದಲ್ಲಿ ಧೃವತಾರೆಯಾಗಿ ಮಿಂಚಿದ ನಟ ಡಾ. ವಿಷ್ಣುವರ್ಧನ್​ ಅವರ ನೆನಪಲ್ಲಿ ಈಗಾಗಲೇ ಹಲವು ರಸ್ತೆಗಳಿಗೆ, ಪಾರ್ಕುಗಳಿಗೆ ಅವರ ಹೆಸರನ್ನು ಇಡಲಾಗಿದೆ. ಇನ್ನು ರಾಜ್ಯಾದ್ಯಂತ ಅವರ ಪುತ್ಥಳಿಗಳು ಅದೆಷ್ಟು ಪ್ರತಿಷ್ಠಾಪನೆಯಾಗಿವೆಯೋ ಎಂದು ಲೆಕ್ಕ ಇಡುವುದು ಕಷ್ಟ.

   ಈಗ ವಿಷ್ಣು ಅವರ ಹೆಸರನ್ನು ಇನ್ನಷ್ಟು ನೆನಪಿನಲ್ಲುಳಿಯುವಂತೆ ಮಾಡುವುದಕ್ಕೆ ಅಂಚೆ ಇಲಾಖೆ ಹೆಜ್ಜೆ ಇಟ್ಟಿದೆ. ದೇಶದಲ್ಲಿ ನಡೆಯುವ ಪ್ರಮುಖ ವಿದ್ಯಮಾನಗಳು, ಸಾಧಕರ ಮಹತ್ವದ ಹೆಜ್ಜೆಗಳನ್ನು ಪೋಸ್ಟಲ್ ಸ್ಟ್ಯಾಂಪ್, ಪೋಸ್ಟಲ್ ಕವರ್ ಮೂಲಕ ಭಾರತ ಸರ್ಕಾರದ ಅಂಚೆ ಇಲಾಖೆ ಆಗಾಗ ದಾಖಲಿಸುತ್ತಾ ಬಂದಿದೆ.

   ಇದೀಗ ಅಂತಹದೇ ವಿಶೇಷ ಅಂಚೆ ಲಕೋಟೆಯನ್ನು ಅಂಚೆ ಇಲಾಖೆಯು ಡಾ. ವಿಷ್ಣುವರ್ಧನ್​ ಅವರ ಹೆಸರಿನಲ್ಲಿ ಬಿಡುಗಡೆ ಮಾಡುತ್ತಿದೆ. ಈ ಲಕೋಟೆಯ (ಪೋಸ್ಟಲ್​ ಕವರ್) ಮೂಲಕ ವಿಷ್ಣುವರ್ಧನ್​ ಅವರ ಹೆಸರು ಅಂಚೆ ಕಚೇರಿಯ ದಾಖಲೆಗಳಲ್ಲಿ ಶಾಶ್ವತವಾಗಿ ಉಳಿಯುವುದಷ್ಟೇ ಅಲ್ಲ, ದೇಶದ ಯಾವುದೇ ಮೂಲೆಯಲ್ಲಿ ಅಂಚೆಚೀಟಿ ಪ್ರದರ್ಶನವಾದರೂ, ಅಲ್ಲಿ ಈ ವಿಶೇಷ ಪೋಸ್ಟಲ್ ಕವರ್ ಪ್ರದರ್ಶನವಾಗಲಿದೆ.

   ಈ ಲಕೋಟೆಯನ್ನು ನಾಳೆ (ಸೆಪ್ಟೆಂಬರ್​ 18) ವಿಷ್ಣುವರ್ಧನ್​ ಅವರ 70ನೇ ಜಯಂತೋತ್ಸವದ ಪ್ರಯುಕ್ತ, ಮಧ್ಯಾಹ್ನ 3 ಗಂಟೆಗೆ ವಿಧಾನ ಸೌಧದ ಎದುರಿನ ಕೇಂದ್ರ ಅಂಚೆ ಇಲಾಖೆಯಲ್ಲಿ ಆಯೋಜಿಸಿರುವ ವಿಶೇಷ ಕಾರ್ಯಕ್ರಮದಲ್ಲಿ ಈ ಲಕೋಟೆ ಬಿಡುಗಡೆಯಾಗಲಿದೆ. ಈ ಸಂದರ್ಭದಲ್ಲಿ ನಟ-ನಿರ್ದೇಶಕ ‘ಜೋಗಿ’ ಪ್ರೇಮ್​, ಚೀಫ್​ ಪೋಸ್ಟ್​ ಮಾಸ್ಟರ್​ ಜನರಲ್​ ಶಾರದಾ ಸಂಪತ್​, ಡಾ. ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್​ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap