ಹರಪನಹಳ್ಳಿ:
ಅಂಗವಿಕಲರಿಗೆ ನೀಡಲಾಗುವ ವಿವಾಹ ಪ್ರೋತ್ಸಹ ಧನವನ್ನು ಹೆಚ್ಚಿಸುವಂತೆ ಸಂಬಂಧಿಸಿದ ಸಚಿವರು ಹಾಗೂ ಮುಖ್ಯಮಂತ್ರಗಳ ಗಮನಕ್ಕೆ ತರುತ್ತೇನೆ ಎಂದು ಶಾಸಕ ಜಿ. ಕರುಣಾಕರರೆಡ್ಡಿ ಹೇಳಿದರು.
ಪಟ್ಟಣದ ಸಾಮರ್ಥ್ಯ ಸೌಧದಲ್ಲಿ ವಿಶ್ವ ಅಂಗವಿಕಲರ ದಿನಾಚರಣೆ ಅಂಗವಾಗಿ ಅಂಗವಿಕಲರ ಕುರಿತು ಅರಿವು ಮೂಡಿಸುವ ಜನಾಂದೋಲನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. `ಅನ್ಯ ಜಾತಿ ವಿವಾಹವಾಗುವವರಿಗೆ ಎರಡು ಲಕ್ಷದವರಿಗೂ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಆದರೆ ಅಂಗವಿಕಲರ ವಿವಾಹ ಪ್ರೋತ್ಸಾಹ ಧನ 50 ಸಾವಿರ ನೀಡುತ್ತಿರುವುದು ಕಡಿಮೆಯಾಗಿದೆ. ಇದನ್ನು ಎರಡು ಲಕ್ಷದವರೆಗೆ ಹೆಚ್ಚಿಸಲು ಸರ್ಕಾರದ ಮಟ್ಟದಲ್ಲಿ ಗಮನ ಸೆಳೆಯುತ್ತೇನೆ’ ಎಂದರು.
`ಅಂಗವಿಕಲರನ್ನು ಸಾಮಾನ್ಯ ಜನರಂತೆ ಕಾಣಬೇಕು. ಅವರಲ್ಲಿ ವಿಶೇಷ ಕೌಶಲ್ಯ, ಪ್ರತಿಭೆ ಅಡಕವಾಗಿದೆ. ಸರ್ಕಾರದಿಂದ ಅವರಿಗೆ ಮೀಸಲಿರಿಸುವ ಅನುದಾನವನ್ನು ಕಡ್ಡಾಯವಾಗಿ ಬಳಕೆ ಮಾಡಿ ಅವರ ಕಲ್ಯಾಣಕ್ಕಾಗಿ ಎಲ್ಲರೂ ಶ್ರಮಿಸೋಣ’ ಎಂದು ಕರೆ ನೀಡಿದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಅನ್ನಪೂರ್ಣಮ್ಮ ಮಾತನಾಡಿ, `ಅಂಗವಿಲಕಲರು ವಿಕಲಚೇತನರಾಗಿದ್ದರೂ ಜೀವನವನ್ನು ಧೈರ್ಯದಿಂದ ಎದುರಿಸಿ ಸಮಾಜದಲ್ಲಿ ಮಾದರಿ ಬದುಕು ಸಾಗಿಸುತ್ತಾರೆ. ಸಾಮಾನ್ಯ ಜನರು ಜೀವನದ ಅಡೆತಡೆಗಳನ್ನು ಸಮರ್ಪಕವಾಗಿ ಎದುರಿಸದೇ ಅತ್ಮಹತ್ಯೆಗೆ ಶರಣಾರಾಗುತ್ತಾರೆ’ ಎಂದು ಹೇಳಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಮತಾ ಹೊಸಗೌಡರ ಮಾತನಾಡಿ, ಅಂಗವಿಲಕರು ಪ್ರಬುದ್ಧರು. ಇತಿಹಾಸದ ಪುಟಗಳನ್ನು ಮೇಲುಕು ಹಾಕಿದಾಗ ಅಂಗವಿಕಲರು ಸಾಧನೆ ಮಾಡಿದ ಸಾಕಷ್ಟು ಉದಾರಹಣೆಗಳಿವೆ. ಅಂತವರ ಆದರ್ಶವನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಕು’ ಎಂದರು.
ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಎಲ್.ಮಂಜ್ಯಾನಾಯ್ಕ, ಪುರಸಭೆ ಅಧ್ಯಕ್ಷ ಎಚ್.ಕೆ. ಹಾಲೇಶ್, ಉಪಾಧ್ಯಕ್ಷ ಕೆ.ಸತ್ಯನಾರಾಯಣ ಮಾತನಾಡಿದರು. ಉಪನ್ಯಾಸಕ ಎಚ್.ಮಲ್ಲಿಕಾರ್ಜುನ್ ಉಪನ್ಯಾಸ ನೀಡಿದರು.ಪುರಸಭೆ ಸದಸ್ಯರಾದ ಕೆಂಚಮ್ಮ ಪೂಜಾರ, ಮೆಹಬೂಬ್ ಸಾಬ್, ಎಂ.ಆರ್.ಡಬ್ಲ್ಯೂ, ವಿ.ಆರ್.ಡಬ್ಲ್ಯೂ ಒಕ್ಕೂಟದ ರಾಜ್ಯಾಧ್ಯಕ್ಷ ಕೆ.ಸುಬ್ರಮಣ್ಯಂ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಓ.ರಾಮಪ್ಪ, ಕೆಂಚನಗೌಡರ, ಟಿ.ಪ್ರಕಾಶ್, ಶಿಂಗ್ರಿಹಳ್ಳಿ ನಾಗರಾಜ್, ಆರ್. ಧನರಾಜ್, ಬಿ.ಕೆ.ಇಮ್ರಾನ್ ರಹಮತುಲ್ಲಾ, ಯು.ಶೇಖರಪ್ಪ, ಡಿ ನೇಮ್ಯನಾಯ್ಕ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ