ಮಧುಗಿರಿ
ಯಾವ ಮತಧರ್ಮದ ಅಧಿಪತ್ಯದಲ್ಲೂ ಮನುಷ್ಯ ಮನುಷ್ಯನಾಗಿ ಬಾಳಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ಕುವೆಂಪು ಹಳೆ ಮತದ ಕೊಳೆ, ಹೊಸ ಮತಿಯ ಹೊಳೆಯಲ್ಲಿ ಕೊಚ್ಚಿ ಹೋಗಿ ವಿಜ್ಞಾನ ಬುದ್ಧಿ ಬರಲಿ ಎಂದು ಯುವ ಪೀಳಿಗೆಗೆ ಕರೆ ನೀಡಿದ್ದರು ಎಂದು ಹಿರಿಯ ಸಾಹಿತಿ ಪ್ರೊ.ಮ.ಲ.ನ ಮೂರ್ತಿ ತಿಳಿಸಿದರು.
ಪಟ್ಟಣದ ಕನ್ನಡಭವನದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಕುವೆಂಪು ಜಯಂತಿ ಅಂಗವಾಗಿ ವಿಶ್ವಮಾನವ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮತ ಧರ್ಮಗಳು ಮನುಷ್ಯ ಮನುಷ್ಯರ ನಡುವೆ ಅರ್ಥಮಾಡಿಕೊಳ್ಳಲು ಸಾಧ್ಯವಾಗದಷ್ಟು ಅಗಲವಾದ ಗೋಡೆಗಳು ನಿರ್ಮಾಣವಾಗಿವೆ. ಕಾಲ ಕಾಲಕ್ಕೆ ಕುವೆಂಪು ಸಾಹಿತ್ಯದ ಗುಣ ಮೌಲ್ಯಗಳು ಮರುಚಿಂತನೆಗೆ ಒಳಗಾಗುತ್ತಿದೆ. ಮನುಜಮತ, ವಿಶ್ವಪಥಕ್ಕಾಗಿ ಕರೆಕೊಟ್ಟು ಅದರ ಜೊತೆಗೆ ಸರ್ವೋದಯ, ಸಮನ್ವಯ ಮತ್ತು ಪೂರ್ಣದೃಷ್ಟಿ ಇವು ಮುಂದಿನ ಪೀಳಿಗೆಗೆ ಮಾರ್ಗದರ್ಶಿಯಾಗಲೆಂದು ಕುವೆಂಪು ಆಶಿಸಿದ್ದರು ಎಂದರು.
ಕಾರ್ಯಕ್ರಮದಲ್ಲಿ ವಿಶೇಷವಾಗಿ ಗಾಯಕಿ ಲಲಿತಾಂಬ ಮತ್ತು ಸುಶೀಲ ತಂಡದವರಿಂದ ಕುವೆಂಪು ವಿರಚಿತ ಗೀತೆಗಳ ಗಾಯನ ಏರ್ಪಡಿಸಲಾಗಿತ್ತು.
ತಾಲ್ಲೂಕು ಕ.ಸಾ.ಪ ಅಧ್ಯಕ್ಷ ಚಿ.ಸೂ.ಕೃಷ್ಣಮೂರ್ತಿ, ತಾ.ಕ.ಸಾ.ಪ ಪ್ರಧಾನ ಕಾರ್ಯದರ್ಶಿ ರಾಮಚಂದ್ರಪ್ಪ, ಮಾಜಿ ಅಧ್ಯಕ್ಷ ಪ.ವಿ.ಸುಬ್ರಹ್ಮಣ್ಯ, ತಾ.ಸ.ನೌ.ಸಂಘದ ಅಧ್ಯಕ್ಷ ನಾ.ಮಹಾಲಿಂಗೇಶ್, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿದ್ದಗಂಗಪ್ಪ, ಹಿರಿಯ ಸಾಹಿತಿ ಜಯರಾಮಯ್ಯ, ಪುಟ್ಟಸ್ವಾಮಿ, ಲೇಖಕಿ ವಿಜಯಾಮೋಹನ್, ವೀಣಾ ಶ್ರೀನಿವಾಸ್, ರೈತ ಮುಖಂಡ ಎಚ್.ರಾಮಕೃಷ್ಣ ಮುಂತಾದವರು ಉಪಸ್ಥಿತರಿದ್ದರು,
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








