ವಿಶ್ವ ರಂಗಭೂಮಿ ದಿನಾಚರಣೆ

ತುಮಕೂರು:

       ಡಾ.ಗುಬ್ಬಿ ವೀರಣ್ಣನವರು ರಂಗಭೂಮಿ ಕ್ಷೇತ್ರದಲ್ಲಿ ಅಡಿಗಲ್ಲು ನೆಟ್ಟು ನಾಟಕ ಪರಂಪರೆಗೆ ಇತಿಹಾಸ ಬರೆದವರು. 70-80 ರ ದಶಕದಲ್ಲಿ ಮತ್ತೊಮ್ಮೆ ರಂಗ ಇತಿಹಾಸ ಬರೆದವರು ಹೆಚ್.ಎಂ.ಟಿ. ಕಾರ್ಖಾನೆಯ ಲಲಿತ ಕಲಾ ಸಂಘದ ಕಲಾವಿದರು. ಆದರೆ ಇಂದು ಹೆಚ್.ಎಂ.ಟಿ. ಕಾರ್ಖಾನೆ ಕಳೆದು ಇತಿಹಾಸದಲ್ಲಿ ಬೆರೆತು ಹೋಗಿದೆ. ಆದರೂ ಹೆಚ್.ಎಂ.ಟಿ. ಲಲಿತ ಕಲಾ ಸಂಘದ ಕಲಾವಿದರ ಕಲೆ ಇನ್ನೂ ಜೀವಂತವಿದೆ. ಅದಕ್ಕೆ ಆ ದಿನದ ಕಾರ್ಯಕ್ರಮವೇ ಸಾಕ್ಷಿ ಎಂದು ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕøತ ಡಾ.ಜಿ.ವೆಂಕಟೇಶಲು ತಿಳಿಸಿದರು.

        ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ತುಮಕೂರಿನ ನುಡಿ ಕನ್ನಡ ಕಲಾ ಸಂಘ ಮತ್ತು ಸಮುಖ, ರಂಗ ಸಂಪನ್ಮೂಲ ಕೇಂದ್ರವು ಶ್ರೀ ವಾಲ್ಮೀಕಿ ಕನ್ವೆನ್ಷನ್ ಹಾಲ್‍ನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಸಮುಖ ಹಾಗೂ ಭೂಮಿ ಬಳಗದ ಜಿ.ಎಸ್.ಸೋಮಣ್ಣ ರಾಜಕೀಯ, ಜಾತಿ ವರ್ಗ, ದೇಶಗಳ ಬೇಧವಿಲ್ಲದೆ ಪ್ರಪಂಚದ ಎಲ್ಲಾ ಕಲಾವಿದರು ಒಟ್ಟಿಗೆ ವಿಶ್ವ ರಂಗಭೂಮಿ ದಿನವನ್ನು ಆಚರಿಸುತ್ತಿರುವುದು ವಿಶ್ವದ ಐಕ್ಯತೆಯನ್ನು ಸಾರುವಂತಿದೆ ಎಂದರು.

         ಸಮಾರಂಭದಲ್ಲಿ ರಂಗಭೂಮಿ ಹಾಗೂ ಕಿರುತೆರೆ ಕ್ಷೇತ್ರದಲ್ಲಿ ಅದ್ವಿತೀಯ ಸೇವೆ ಸಲ್ಲಿಸಿ ಗುರುತಿಸಿಕೊಂಡಿರುವ ಈಶ್ವರ್ ದಲ, ಎಲ್.ಆನಂದ್‍ಕುಮಾರ್ ಹಾಗೂ ಎನ್.ಎಸ್.ರಮಾನಂದ್ ಇವರುಗಳನ್ನು ಅಭಿನಂದಿಸಿ ಗೌರವಿಸಲಾಯಿತು. ಮಾಜಿ ಮುಖಂಡ ಬಿ.ಜಿ.ಕೃಷ್ಣಪ್ಪ ಮತ್ತು ಎಚ್.ಎಂ.ಟಿ. ಮಾಜಿ ಕಾರ್ಮಿಕ ಮುಖಂಡ ಸಿ.ಎನ್.ರಮೇಶ್ ಇವರನ್ನು ಅಭಿನಂದಿಸಲಾಯಿತು.

        ಸಂಗೀತ್ ಶ್ರೀನಿವಾಸ್ ಅವರ ಸಂಗೀತ ನಿರ್ದೇಶನದಲ್ಲಿ ಫಿಲೋಮಿನ, ಭೀಮಯ್ಯ, ಎ.ಆರ್.ನಾಗಯ್ಯ, ನಾಗರಾಜಾಚಾಜ್, ಜಗನ್ನಾಥ್, ನರಸಿಂಹಸ್ವಾಮಿ, ಮಂಜುನಾಥ್, ದೇವರಾಜ್, ವೆಂಕಟ್ ನಾರಾಯಣ್ ವಿವಿಧ ಕಲಾ ಸಂಘಗಳ ಕಲಾವಿದರು ರಂಗಗೀತೆ ಹಾಡಿದರು. ರಾಮಲಿಂಗೇಗೌಡ, ರಂಗಕರ್ಮಿ ಭೀಮ್‍ಸೇನ್, ಡಾ.ಲೀಲಾಲೇಪಾಕ್ಷಿ, ಹರಿದಾಸ್, ಶಂಕರಪ್ಪ, ಬಿ.ಆರ್.ಜಯರಾಂ, ಲಿಂಗರಾಜು, ಶಿವಸ್ವಾಮಿ, ಶಂಕರಲಿಂಗಪ್ಪ, ಸಿದ್ಧಗಂಗಯ್ಯ ಮತ್ತಿರರರು ಉಪಸ್ಥಿತರಿದ್ದರು. ಟಿ.ಬಿ.ಶೇಖರ್ ಕಾರ್ಯಕ್ರಮ ಉದ್ಘಾಟಿಸಿದರೆ, ಪಿ.ಮೂರ್ತಿ ಸ್ವಾಗತಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap