ವಿಶ್ವರಂಗಭೂಮಿ ದಿನಾಚರಣೆ

ಹರಪನಹಳ್ಳಿ

       ಜಗತ್ತಿನ ಅನೇಕ ಕಡೆಗಳಲ್ಲಿ ಕಲಾಕೇಂದ್ರಗಳಿವೆ, ಅಭಿನಯತಂಡಗಳು ಇವೆ, ನಮ್ಮ ದೇಶದಲ್ಲು ಅನೇಕ ಬಗೆಯ ಕಲಾ ಪ್ರಕಾರಗಳು ಇದ್ದು ಅದರಲ್ಲಿ ನಾಟಕವನ್ನು ವೃತ್ತಿ ಹಾಗೂ ಹವ್ಯಾಸಿಗರು ಕೂಡ ಸಮಾಜ ತಿದ್ದುವ ಕೆಲಸ ಮಾಡುತ್ತಿದ್ದು ನಾಟಕ ಪರಪಂರೆಯನ್ನು ಮುಂದಿನ ಪೀಳಿಗೆಗೆ ಉಳಿಸುವ ಕೆಲಾವಾಗಬೇಕಾಗಿದೆ ಎಂದು ನಿವೃತ್ತ ಮುಖ್ಯೊಪಾದ್ಯಾಯ ಭೀಮಪ್ಪ ಅಭಿಪ್ರಾಯಪಟ್ಟರು.

      ತಾಲೂಕಿನ ಬಾಗಳಿ ಗ್ರಾಮದಲ್ಲಿ ಭಾನುವಾರ ಶ್ರೀ ವಿಶ್ವಕಲಾ ಯುವಕ ರೈತನಾಟ್ಯಸಂಘ ಹಾಗೂ ಶ್ರೀ ಕನಕೇಶ್ವರ ಕಲಾ ಸಂಘದ ಆಶ್ರಯದಲ್ಲಿ ವಿಶ್ವರಂಗಭೂಮಿ ದಿನಾಚರಣೆ ಪ್ರಯುಕ್ತ ಹಿರಿಯ ಹಾಗೂ ಕಿರಿಯ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

        ಕಾಲಘಟ್ಟದಲ್ಲಿ ಬದಲಾವಣೆಯಾಗಿದ್ದು ಪುರುಷ ಹಾಗೂ ಸ್ತ್ರೀಯರು ಕೂಡ ಸಮಾನತೆಯಿಂದ ನಾಟಕ, ರಂಗಚಟುವಟಿಕೆಗಳಲ್ಲಿ ಅಭಿನಯಿಸುತ್ತಾ ಬಂದಿದ್ದು ಹೆಮ್ಮೆಯ ಸಂಗತಿಯಾಗಿದೆ ಎಂದ ಅವರು ಹೆಚ್ಚು ಹೆಚ್ಚು ರಂಗಚಟುವಟಿಕೆಗಳು ನಡೆಯಬೇಕು ಈ ಮೂಲಕ ನಾಟಕ ಕಲೆ, ಕಲಾವಿದರನ್ನು ಉಳಿಸಬೇಕು ಎಂದರು.

        ರಂಗಚಟುವಟಿಕೆಗಳು ಜನರಲ್ಲಿ ಮೌಡ್ಯತೆಯನ್ನು, ಸಮಾಜದ ಪರಿವರ್ತನೆಗೆ ಪ್ರಮುಖವಾಗಿವೆ. ವೈಚಾರಿಕತೆಯುಳ್ಳ ನಾಟಕಗಳು ಜನರ ಮೇಲೆ ಪ್ರಭಾವ ಬೀರುತ್ತಿದ್ದು ಜಾತ್ಯಾತೀತ, ಧರ್ಮತೀತವಾಗಿರುವುದು ನಾಟಕಗಳಲ್ಲಿ ಕಂಡು ಬರುತ್ತಿವೆ ಎಂದ ಅವರು ಬಾಗಳಿ ಗ್ರಾಮದಲ್ಲಿ ಲಲಿತ ಕಲೆಗಳನ್ನು ಅಳವಡಿಸಿಕೊಂಡಿರುವ ಕಲಾವಿದರು ಇದ್ದಾರೆ ಯಾವುದೆ ರಂಗ ಚಟುವಟಿಕೆಗಳನ್ನು ಯಶಸ್ಸು ಮಾಡುತ್ತಿದ್ದು ಶ್ಲಾಘನೀಯವಾದದ್ದು ಎಂದು ಹೇಳಿದರು.

        ನಾಟಕ ರಚನೆಕಾರರಾದ ಹೆಚ್.ಎನ್ ಕೊಟ್ರಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಗಾಂಧಿ ಜಯಂತಿ ಆಚರಿಸಿ 1966ರಲ್ಲಿ ನಾಟಕ ಆರಂಭವಾಯಿತು. ಅನೇಕರ ಪ್ರೇರಣೆಯಿದೆ, ಶ್ರೀ ಗೋಣಿಬಸವೇಶ್ವರ ನಾಟಕದ ಬಗ್ಗೆ ಸಾಕಷ್ಟು ಹೇಳಿಕೆ ಪಡೆದು, ನಾಟಕ ರಚನೆ ಮಾಡಿದೆ ಅದನ್ನು  ಅನೇಕ ಕಡೆಗಳಲ್ಲಿ ಯಸಸ್ಸು ಕಂಡಿದ್ದು, ಇಂದು ಅನೇಕ ಕಲಾವಿದರು ಲಿಂಗೈಕೆರಾದರು ಸಹ 53ವರ್ಷಗಳಿಂದ ಇಂದಿಗೂ ನಾಟಕ ಪ್ರದರ್ಶನ ನಡೆಯುತ್ತಿದ್ದು ತಪ್ಪು, ಸರಿಗಳ ನಡುವೆ ಪ್ರೇಕ್ಷಕರು ನಾಟಕವನ್ನು ಸ್ವೀಕರಿಸಿದ್ದಾರೆ ಎಂಬುದಕ್ಕೆ ಮೂರನೆ ತಲೆಮಾರಿನವರು ಅಭಿನಯವೆ ಸಾಕ್ಷಿಯಾಗಿದ್ದು ಇನ್ನಷ್ಟು ತರಬ್ಭೆತಿಯ ಮೂಲಕ ಇವರಿಗೆ ಇನ್ನಷ್ಟು ಪ್ರೋತ್ಸಹ ನೀಡುವುದು ಅಗತ್ಯವಾಗಿದೆ ಎಂದರು.ಎನ್.ಕೊಟ್ರಬಸಪ್ಪ, ಹೆಚ್.ಬಿ.ರೇಣುಕಪ್ಪ, ವಿ.ಬಿ.ಮಲ್ಲೇಶ, ಬಿ.ರಾಜಶೇಖರ, ಹೆಚ್.ಬಸವರಾಜಪ್ಪ ಮಾತನಾಡಿದರು.

         ತಬಲ ಅಜ್ಜಪ್ಪ ಹಾಗೂ ಬಿ.ರೇವಣ್ಣ, ಸೋಗಿ ನಾಗರತ್ನಮ್ಮ, ಹೆಚ್.ಷಡಕ್ಷರಪ್ಪ,ಇವರು ರಂಗಗೀತೆಗಳನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಮೇರಗು ನೀಡಿದರು. ಈ ಸಂದರ್ಭದಲ್ಲಿ 1966ರಿಂದ ಶ್ರೀ ಗೋಣಿಬಸವೇಶ್ವರ ನಾಟಕದಲ್ಲಿ ಭಾಗವಹಿಸಿದ ಹಿರಿಯ ಕಲಾವಿದರಿಂದ ಮೂರನೇ ತಲೆಮಾರಿನ ಕಲಾವಿದರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

        ಸಿದ್ದಲಿಂಗಯ್ಯ, ಸಿ.ಎಂ.ಶೇಖರಯ್ಯ, ಹೆಚ್.ಶೇಟ್ಟೆಪ್ಪ, ವಿ.ಬಿ.ವಿರೇಶ, ಮಂಜುನಾಥ, ಆರ್.ನಾಗಪ್ಪ, ಕೊಟ್ರೇಶಪ್ಪ, ಕನ್ನವೀರಪ್ಪ, ಹೇಮಣ್ಣ ಮೋರಿಗೇರಿ, ಪಿ.ಕರಿಬಸಪ್ಪ, ನಾಗರಾಜ, ಎನ್.ಮಂಜುನಾಥ ಸೇರಿದಂತೆ ಅನೇಕ ಕಲಾವಿದರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap