ವಿಶ್ವ ತಂಬಾಕು ಮುಕ್ತ ದಿನಾಚಾರಣೆ

ತುರುವೇಕೆರೆ:

    ತಾಲೂಕು ಆರೋಗ್ಯ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯಲ್ಲಿ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ವಿಶ್ವ ತಂಬಾಕು ಮುಕ್ತ ದಿನಾಚಾರಣೆಯನ್ನು ಶನಿವಾರ ಆಚರಿಸಲಾಯಿತು.

     ಕಾರ್ಯಕ್ರಮ ಉದ್ಘಾಟಿಸಿದ ಬಿಇಓ ರಂಗದಾಮಯ್ಯ ಮಾತನಾಡಿ ತಂಬಾಕು ಆರೋಗ್ಯಕ್ಕೆ ಹಾನಿಕಾರಕ. ಹಲವಾರು ಮಾರಕ ರೋಗಗಳು ಬರಲಿವೆ. ಬೀಡಿ, ಸಿಗರೇಟು, ಹೊಗೆಸೊಪ್ಪು, ಕಟ್ಟಿ ಪುಡಿ, ಗುಟ್ಕ, ಪಾನ್‍ಮಸಾಲಾ, ನಶ್ಯೆ ಮುಂತಾದವುಗಳನ್ನು ಸೇವಿಸುವುದರಿಂದ ಮನಿಷ್ಯನಿಗೆ ಅಲ್ಸರ್, ಕ್ಯಾನ್ಸರ್, ಕ್ಷಯ, ನ್ಯೂಮೋನಿಯದಂತಹ ಮಾರಕ ಕಾಯಿಲೆಗಳಿಗೆ ತುತ್ತಾಗಿ ಚಿಕ್ಕ ವಯಸ್ಸಿಗೆ ಮನುಷ್ಯ ಸಾವನ್ನಪ್ಪುತ್ತಾನೆ. ಅದ್ದರಿಂದ ಎಲ್ಲರು ದುಶ್ಚಟಗಳಿಂದ ದೂರ ಇರಬೇಕು ಎಂದು ತಿಳಸಿದರು.

     ತಾಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಚಂದ್ರಶೇಖರ್ ಮಾತನಾಡಿ ಇತ್ತೀಚಿನ ಮನುಷ್ಯನ ಹೊಸ ಜೀವನ ಶೈಲಿಯಲ್ಲಿ ಹೊಸ ಖಾಯಿಲೆಗಳಾದ ಬಿ.ಪಿ. ಸಕ್ಕರೆ ಖಾಯಿಲೆ, ಹೃದಯ ವೈಪಲ್ಯ, ಹೃದಯ ರಕ್ತನಾಳ ಖಾಯಿಲೆ ಮತ್ತು ಪಾರ್ಶುವಾಯು ಸಂಭವಿಸುತ್ತವೆ. ಎಲ್ಲರು ನಿತ್ಯ ವ್ಯಾಯಾಮ ಹಾಗೂ ವಾಕಿಂಗ್ ಮಾಡುವ ಅಭ್ಯಾಸ ಬೆಳಸಿಕೊಳ್ಳಬೇಕು. ಹಾಗೂ ತಂಬಾಕು ವಸ್ತುಗಳನ್ನು ಬಳಸಬಾರದು ಎಂದು ತಿಳಿಸಿದರು.

       ಈ ಸಂದರ್ಬದಲ್ಲಿ ಬಿಆರ್.ಸಿ ಹಾಗೂ ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರುಗಳಿಗೆ ಬಿ.ಪಿ ಶುಗರ್ ಪರೀಕ್ಷೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯ ಸತೀಶ್‍ಕುಮಾರ್, ಶಿಕ್ಷಕರಾದ ವಸಂತ್‍ಕುಮಾರ್, ಉಮಾ, ಗೋಪಾಲ್, ಅಂಬುಜಾ, ಪ್ರವೀಣ್ ಕುಮಾರಿ, ಲೋಕೇಶ್, ನಾಗರತ್ನಮ್ಮ, ಚಂದ್ರಶೇಖರ್ ಸೇರಿದಂತೆ ಶಾಲಾ ಮಕ್ಕಳು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap