ಹೊಸದುರ್ಗ:
ಕಳೆದ 17 ವರ್ಷಗಳ ಹಿಂದೆ ಹೊಸದುರ್ಗಕ್ಕೆ ಆಗಮಿಸಿದ ನಮಗೆ ಮಾಜಿ ಶಾಸಕ ಬಿ.ಜಿ.ಗೋವಿಂದಪ್ಪನವರು 28 ಎಕರೆ ಜಮೀನು ನೀಡಿ ಮಠದ ಅಭಿವೃದ್ಧಿಗೆ ಅನುದಾನ ಹಾಗೂ ದಾನಿಗಳನ್ನು ಕರೆ ತಂದು ಕನಕ ಮಠದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದಾರೆ ಎಂದು ಕನಕ ಗುರು ಪೀಠದ ಶ್ರೀ ಈಶ್ವರಾನಂದ ಪುರಿ ಸ್ವಾಮಿಜಿ ಹೇಳಿದರು.
ತಾಲೂಕಿನ ಕೆಲ್ಲೋಡು ಕಾಗಿನೆಲೆ ಮಹಾಸಂಸ್ಥಾನದ ಕನಕ ಗುರು ಪೀಠದಲ್ಲಿ ಕನಕ ಜಯಂತಿ ಮಹೋತ್ಸವದ ಅಂಗವಾಗಿ ಶುಕ್ರವಾರ ರಾತ್ರಿ ನಡೆದ ಲಕ್ಷ ದೀಪೋತ್ಸವ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದರು.
ಎಲ್ಲ ಭಕ್ತರ ಸಹಕಾರದಿಂದ ಕೆಲ್ಲೋಡು ಕನಕ ಗುರು ಪೀಠ ಈ ಮಟ್ಟಗೆ ಬೆಳೆದು ಬಂದಿದೆ, ಶ್ರಾವಣ ಭಿಕ್ಷೆ ಕಾರ್ಯಕ್ರಮದ ಮುಖಾಂತರ ಬಡವರು ಸಹುಕಾರರು ಎನ್ನದೆ ಎಲ್ಲ ಭಕ್ತರ ಮನೆಗೆ ತೆರಳಿ ಜೋಳಿಗೆ ಹಿಡಿದು ಭಿಕ್ಷೆ ಬೇಡಿ ಶ್ರೀ ಮಠದ ಅಭಿವೃದ್ಧಿಗೆ ಮುಂದಾಗಿದ್ದೇವೆ. ಮಹಾದ್ವಾರಗಳ ಉದ್ಘಾಟನೆಯನ್ನು ನೆರವೇರಿಸಿದ ಮಹಾದ್ವಾರದ ದಾನಿಗಳಾದ ಶ್ರೀಮತಿ ಶಾಂತಮ್ಮ ಶ್ರೀ ಲಕ್ಕಣ್ಣ ಗೌಡರು ಎಲ್ಲ ಮಠಾಧೀಶರ ಸಮ್ಮುಖದಲ್ಲಿ ಇಂದು ಅವರನ್ನು ಸನ್ಮಾನಿಸಲಾಗಿದೆ ಅವರು ಸಾಕಷ್ಟು ಧಾರ್ಮಿಕ ಕಾರ್ಯಗಳನ್ನು ನಾಡಿನ ವಿವಿಧಡೆ ಮಾಡಿದ್ದಾರೆ ಶ್ರೀ ಮಠದಲ್ಲಿಯು ಸಹ ಮೂರು ಮಹಾದ್ವಾರಗಳನ್ನು ನಿರ್ಮಿಸುವ ಮೂಲಕ ಎಲ್ಲಕ್ಕು ಮಾದರಿಯಾಗಿದ್ದಾರೆ ಎಂದರು.
ಚನ್ನಯ್ಯ ಗುರುಪೀಠದ ಶ್ರೀ ಶ್ರೀ ಮಾದಾರ ಚನ್ನಯ್ಯ ಸ್ವಾಮಿಗಳು ಮಾತನಾಡಿ, ಕೆಲ್ಲೋಡು ಕನಕ ಗುರು ಪೀಠದ ಬೆಳವಣಿಗೆಗೆ ಶ್ರೀ ಈಶ್ವರಾನಂದಪುರಿಸ್ವಾಮಿಗಳು, ಮಾಜಿ ಶಾಸಕ ಬಿ.ಜಿ.ಗೋವಿಂದಪ್ಪನವರ ಶ್ರಮ ಸಾಕಷ್ಟಿದೆ .ದಾರ್ಶನಿಕರನ್ನು ಜಾತಿಗೆ ಸೀಮಿತಗೊಳಿಸದೆ ಎಲ್ಲರು ಆಚರಿಸುವಂತಾಗಬೇಕು ಅವರ ತತ್ವಾದರ್ಶಗಳನ್ನು ಪಾಲಿಸಬೇಕು.
ಬಸವಣ್ಣನವರ ನಂತರ 6 ನೇಯ ಶತಮಾನದಲ್ಲಿ ಶೋಷಣೆಯ ವಿರುದ್ಧ ಹೋರಾಡಿದ ವಿಶ್ವ ಮಾನವ ಕನಕದಾಸರು ಎಲ್ಲರಿಗೂ ಆದರ್ಶ ವ್ಯಕ್ತಿಗಳಾಗಿದ್ದಾರೆ ಎಂದರು. ಭಾರತ ಸಮಾಜದ ಶೋಷಿತ ಜಾತಿಗಳಿಗೆ ದಾರ್ಶನಿಕ ವ್ಯಕ್ತಿಗಳು ಅವಶ್ಯಕ ಆ ಹಿನ್ನಲೆಯಲ್ಲಿ ಕುರುಬ ಸಮಾಜಕ್ಕೆ ಎಲ್ಲರಿಗೂ ಕನಕದಾಸರು ಪ್ರೇರಣೆಯಾಗಿದ್ದಾರೆ ಎಂದರು. ಕನದಾಸರು ತಮ್ಮ ಸಾಹಿತ್ಯದ ಮೂಲಕ ಶೋಷಣೆಯ ವಿರುದ್ಧದ ಹೋರಾಟವನ್ನು ಮಾಡಿದವರು. ಕನ್ನಡ ಸಾಹಿತ್ಯಕ್ಕೆ ಅವರು ನೀಡಿದ ಕೊಡುಗೆ ಅಪಾರವಾಗಿದೆ ಅವರ ಸಾಹಿತ್ಯವನ್ನು ಪ್ರಚಾರ ಮಾಡಬೇಕಾಗಿದೆ , ಕಾಗಿನೆಲೆ ಮಹಾ ಸಂಸ್ಥಾನದ ಆಡಳಿತಾಧಿಕಾರಿ ಮಾಜಿ ಶಾಸಕ ಬಿ.ಜಿ.ಗೋವಿಂದಪ್ಪ ಕನಕ ಗುರು ಪೀಠ ಎಲ್ಲಶೋಷಿತ ವರ್ಗಗಳ ಧ್ವನಿಯಾಗಬೇಕಾಗಿದೆ , ಶ್ರೀ ಮಠದ ಅಭಿವೃದ್ಧಿಗೆ ಭಕ್ತರ ಸಹಕಾರ ಅಗತ್ಯವಿದ್ದು ಸಮಾಜದ ಸ್ಥಿತಿವಂತ ಭಕ್ತರು ಹೆಚ್ಚಿನ ಸಹಕಾರಕೆ ಮುಂದಾದರೆ ಸಮಾಜದ ಹಿಂದುಳಿದ , ಬಡ ವರ್ಗದ ಶೈಕ್ಷಣಿಕ, ಸಾಮಾಜಿಕ ಪ್ರಗತಿಗೆ ಸಹಕಾರಿಯಾಗಲಿದೆ ಎಂದರು.
ಲಕ್ಷ ದೀಪೋತ್ಸವ ಕಾರ್ಯಕ್ರಮದಲ್ಲಿ ಭಗೀರಥ ಪೀಠದ ಶ್ರೀ ಪುರುಷೋತ್ತಮಾನಂದಪುರಿಸ್ವಾಮಿಗಳು, ಕುಂಚಟಿಗ ಮಹಾ ಸಂಸ್ಥಾನದ ಶ್ರೀ ಶಾಂತವೀರಸ್ವಾಮಿಗಳು, ಭೋವಿ ಗುರು ಪೀಠದ ಶ್ರೀ ಇಮ್ಮಡಿ ಸಿದ್ಧರಾಮಸ್ವಾಮಿಗಳು, ಮಹಾಲಕ್ಷ್ಮೀಪೀಠದ ಶ್ರೀ ಜ್ಞಾನನಂದಾ ಪುರಿಸ್ವಾಮಿಗಳು, ಶ್ರೀಕೃಷ್ಣ ಯಾದವ ಸಂಸ್ಥಾನದ ಶ್ರೀ ಶ್ರೀ ಕೃಷ್ಣಯಾದವಾನಂದ ಸ್ವಾಮಿಗಳು, ಮಾದಾರ ಚನ್ನಯ್ಯ ಗುರುಪೀಠದಶ್ರೀ ಶ್ರೀ ಮಾದಾರ ಚನ್ನಯ್ಯ ಸ್ವಾಮಿಗಳು, ಮಡಿವಾಳ ಗುರು ಪೀಠದ ಶ್ರೀ ಮಡಿವಾಳ ಮಾಚಿದೇವ ಸ್ವಾಮಿಗಳು, ಛಲವಾದಿ ಪೀಠದ ಶ್ರೀ ಬಸವ ನಾಗಿದೇವ ಸ್ವಾಮಿಗಳು, ಶ್ರೀ ಕುಂಬಾರ ಪೀಠದ ಶ್ರೀಗಳು ಸಾನಿಧ್ಯವಹಿಸಿದ್ದರು. ಕುರುಬ ಸಮಾಜದ ಮುಖಂಡರಾದ ಟಿ.ಬಿ.ಬೆಳಗಾವಿ, ಶ್ರೀ ಲಿಂಗಪ್ಪ, ನಾಗಲಕ್ಷ್ಮಿ, ಸೋಮಶೇಖರ್, ಕನಕ ವೈದ್ಯರ ಬಳಗದ ವಿಜಯಲಕ್ಷಿ ಪರಮೇಶ್ವರ್ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ