ವಿವೇಚನೆ ಹೇಳಿಕೊಡುವವನೇ ನಿಜವಾದ ಶಿಕ್ಷಕ

ಚಿತ್ರದುರ್ಗ

       ಶಿಕ್ಷಕ ಯಾವಾಗಲೂ ವಿದ್ಯಾರ್ಥಿಯಾಗಿರಬೇಕು ಅಂದಾಗ ಮಾತ್ರ ಅವನು ಹೊಸ ವಿಷಯಗಳನ್ನು ತಿಳಿದುಕೊಳ್ಳಲು ಸಾಧ್ಯ ಎಂದು ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಜಿ.ಬಿ.ರಾಜಪ್ಪ ಹೇಳಿದರು.ನಗರದ ಪಿಳ್ಳೆಕೆರನಹಳ್ಳಿಯ ಬಾಪೂಜಿ ಸಭಾಂಗಣದಲ್ಲಿ ಸೋಮವಾರ ಬಾಪೂಜಿ ಶಿಕ್ಷಣ ಮಹಾವಿದ್ಯಾಲಯ ಆಯೋಜಿಸಿದ ಹತ್ತು ಬೆಳದಿಂಗಳು ವಿಶೇಷ ಕಾರ್ಯಕ್ರಮ ಅಣುಬೋಧನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

        ಪ್ರತಿಯೊಬ್ಬ ಶಿಕ್ಷಕ ಗುರುವಾಗಲು ಸಾಧ್ಯವಿಲ್ಲ. ವಿದ್ಯಾರ್ಥಿಗಳ ಜೀವನದಲ್ಲಿ ವಿವೇಚನೆ ಹೇಳಿ ಕೊಡುವವನೆ ನಿಜವಾದ ಗುರು. ಜ್ಞಾನ ಎಲ್ಲರು ನೀಡುತ್ತಾರೆ ಆದರೆ ವಿದ್ಯಾರ್ಥಿಗಳಿಗೆ ಸರಿದಾರಿಯಲ್ಲಿ ನಡೆಸುವವನೆ ಗುರು. ಇಂದಿನ ಶಿಕ್ಷಕರು ವಿದ್ಯಾರ್ಥಿಗಳಿಗೆ ವಿವೇಚನೆ ಹೇಳಿಕೊಡುತ್ತಿಲ ಕೇವಲ ಜ್ಞಾನ ನೀಡುತ್ತಿದ್ದಾರೆ. ನೀವು ಕೇವಲ ಶಿಕ್ಷಕರಾದರೆ ಸಾಲದು ನೀವು ಗುರುಗಳಾಗಬೇಕು. ವಿದ್ಯಾರ್ಥಿಗಳು ಹೆಚ್ಚಿನ ಸಮಯವನ್ನು ಗ್ರಂಥಾಲಯದಲ್ಲಿ ಕಳೆಯಬೇಕು. ನಿಮ್ಮ ಪಠ್ಯದ ಜೊತೆ ಅನ್ಯ ಪುಸ್ತಕಗಳನ್ನು ಓದಬೇಕು.

      ಇಂದಿನ ಆಧುನಿಕ ಜಗತ್ತಿನಲ್ಲಿ ಎಷ್ಟು ಜ್ಞಾನ ಪಡೆದರೂ ಸಾಲದು. ಇಂಟರ್‍ನೆಟ್ ಯುಗದಲ್ಲಿ ಯಾವುದೇ ವಿಷಯವನ್ನು ಕ್ಷಣ ಮಾತ್ರದಲ್ಲಿ ತಿಳಿದುಕೊಳ್ಳಬಹುದು. ಆದ್ದರಿಂದ ಶಿಕ್ಷಕರು ತರಗತಿಗೆ ಹೋಗುವ ಮುನ್ನ ಸರಿಯಾಗಿ ತಯಾರಿ ಮಾಡಿಕೊಂಡು ಹೋಗಬೇಕು ಎಂದರು.
ಶಿಕ್ಷಕನಿಗೆ ಮಾತನಾಡುವುದೇ ಮುಖ್ಯ ಹಾಗಾಗಿ ಭಾಷೆಯ ಮೇಲೆ ಹಿಡಿತ ಇರಬೇಕು. ಶುದ್ಧವಾದ ಭಾಷಾ ಉಚ್ಚಾರಣೆ ಮಾಡಬೇಕು.

       ವಿದ್ಯಾರ್ಥಿಗಳು ನಿಮ್ಮ ಹಾವಭಾವ ಗಮನಿಸುತ್ತಿರುತ್ತಾರೆ. ಆದ್ದರಿಂದ ಶಿಕ್ಷಕನ ನಡುವಳಿಕ್ಕೆ ಮಾದರಿಯಾಗಿರಬೇಕು. ಉತ್ತಮ ಶಿಕ್ಷಕರನ್ನು ತಯಾರು ಮಾಡಲು ಅಣುಬೋಧನೆ ಸಹಕಾರಿಯಾಗಿದೆ. ಜಗತ್ತಿನಲ್ಲಿ ಶ್ರೇಷ್ಠವಾದ ಕೆಲಸ ಅಂದರೆ ಅದು ಶಿಕ್ಷಕನ ಕೆಲಸ ಎಂದರು.

        ಬಾಪೂಜಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಕೆ.ಎಂ.ವೀರೇಶ್ ಮಾತನಾಡಿ, ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸುಮಾರು ಹತ್ತು ವರ್ಷದಿಂದ ಹತ್ತು ಬೆಳದಿಂಗಳು ಕಾರ್ಯಕ್ರಮ ನಡೆಯುತ್ತಿದೆ. ಪ್ರತಿ ತಿಂಗಳೂ ಒಬ್ಬ ಪ್ರಾಧ್ಯಾಪಕರು ಬಂದು ವಿಧ್ಯಾರ್ಥಿಗಳಿಗೆ ಬಿಇಡಿ ಬಗ್ಗೆ ನಾನಾ ಕಾರ್ಯಗಾರಗಳನ್ನು ನಡೆಸಿಕೊಡುತ್ತಾರೆ. ಇದರ ಲಾಭ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು. ಶಿಕ್ಷಕ ಸಮಾಜ ಕಟ್ಟುವ ಸೈನಿಕ ಇದ್ದಂತೆ. ಶಿಕ್ಷಕರು ಜೀವನದಲ್ಲಿ ಶಿಸ್ತು ಹಾಗೂ ತಾಳ್ಮೆ ಬೆಳಸಿಕೊಳ್ಳಬೇಕು ಎಂದರು.

        ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯೆ ಎಂ.ಆರ್.ಜಯಲಕ್ಷ್ಮೀ, ಬಾಪೂಜಿ ದೂರ ಶಿಕ್ಷಣ ಕೇಂದ್ರದ ಪ್ರೊ.ಎ.ಎಂ.ರುದ್ರಪ್ಪ, ಕೆ.ಎಂ.ಎಸ್. ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಕೆ.ಜಂಬುನಾಥ್, ಬಾಪೂಜಿ ಸಮೂಹ ಸಂಸ್ಥೆಗಳ ನಿರ್ದೇಶಕ ಚೇತನ್ ಮತ್ತಿತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap