ಪತಂಜಲಿ ಯೋಗ ಶಿಕ್ಷಣ ಕೇಂದ್ರದ ಮೂಲಕ ಮತ ಜಾಗೃತಿ ಅಭಿಯಾನ

ಚಳ್ಳಕೆರೆ

       ನಮ್ಮ ದೇಶವನ್ನು ಸದೃಢಗೊಳಿಸುವ ಅಭಿವೃದ್ಧಿ ಪಥದತ್ತ ಸಾಗಿಸುವ ವ್ಯಕ್ತಿಗಳನ್ನು ಮತ್ತು ಆಡಳಿತವನ್ನು ನಾವು ಪಡೆಯಬೇಕಾದರೆ ಸಂವಿಧಾನ ಬದ್ದವಾಗಿ ಬಂದ ನಮ್ಮ ಮತದಾನವನ್ನು ಯೋಗ್ಯ ಅಭ್ಯರ್ಥಿಗೆ ಮಾಡುವ ಮೂಲಕ ಉತ್ತಮ ಆಯ್ಕೆಗೆ ಸಹಕರಿಸೋಣ.

       ಪ್ರತಿಯೊಬ್ಬರೂ ಏ.18ರಂದು ನಡೆಯುವ ಮತದಾನದಲ್ಲಿ ಪಾಲ್ಗೊಳ್ಳುವ ಮೂಲಕ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಉತ್ತಮ ಪಡಿಸೋಣವೆಂದು ಪತಂಜಲಿ ಯೋಗ ಶಿಕ್ಷಣ ಸಮಿತಿ ತಾಲ್ಲೂಕು ಅಧ್ಯಕ್ಷ ಹನುಮಂತಪ್ಪ ತಿಳಿಸಿದರು.

        ಅವರು, ಭಾನುವಾರ ಇಲ್ಲಿನ ನೆಹರೂ ಸರ್ಕಲ್‍ನಲ್ಲಿ ಶ್ರೀಪತಂಜಲಿ ಯೋಗ ಶಿಕ್ಷಣ ವತಿಯಿಂದ ಮೋಟಾರ್ ಬೈಕ್ ರ್ಯಾಲಿ ನಡೆಸಿ ಮತ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದರು. ನಮಗೆ ಬಂದ ಮತದಾನದ ಹಕ್ಕನ್ನು ಚಲಾಯಿಸುವ ಮೂಲಕ ನಾವೆಲ್ಲರೂ ಪ್ರಜಾಪ್ರಭುತ್ವದ ಆಡಳಿತ ವ್ಯವಸ್ಥೆಯನ್ನು ಸದೃಢಗೊಳಿಸುವಂತೆ ಮನವಿ ಮಾಡಿದರು.

        ಯೋಗ ಗುರು ಮನೋಹರ್ ಮಾತನಾಡಿ, ನಾವು ಪ್ರತಿನಿತ್ಯ ಯೋಗಾಸನದ ವಿವಿಧ ಆಸನಗಳನ್ನು ಮಾಡುವ ಮೂಲಕ ನಮ್ಮ ಆರೋಗ್ಯವನ್ನು ಸಂರಕ್ಷಣೆ ಮಾಡಿಕೊಳ್ಳುತ್ತೇವೆ. ಯಾರು ಪ್ರತಿನಿತ್ಯ ಯೋಗದಲ್ಲಿ ನಿರತರಾಗುತ್ತಾರೋ ಅವರು ಶಕ್ತಿಯಾಲಿಯಾಗಿ ಬೆಳೆಯುತ್ತಾರೆ. ಅದರೇ ರೀತಿ ನಾವು ಪ್ರತಿ ಚುನಾವಣೆಯಲ್ಲೂ ನಮ್ಮ ಮತವನ್ನು ಪ್ರಾಮಾಣಿಕವಾಗಿ ಸೂಕ್ತ ಅಭ್ಯರ್ಥಿಗೆ ಚಲಾಯಿಸಿದಲ್ಲಿ ನಮ್ಮ ಪ್ರಜಾಪ್ರಭುತ್ವಕ್ಕೆ ಹೆಚ್ಚು ಶಕ್ತಿ ಉಂಟಾಗಲಿದೆ ಎಂದರು.

       ಮೋಟಾರ್ ಬೈಕ್ ರ್ಯಾಲಿಯನ್ನು ನಗರದ ವಾಲ್ಮೀಕಿ ವೃತ್ತದಿಂದ ಆಗಮಿಸಿ ಚಿತ್ರದುರ್ಗ ರಸ್ತೆ, ನೆಹರೂ ಸರ್ಕಲ್, ಬಳ್ಳಾರಿ ರಸ್ತೆ, ಪಾವಗಡ ರಸ್ತೆ, ಬೆಂಗಳೂರು ರಸ್ತೆಯ ಪ್ರಮುಖ ಬೀದಿಗಳಲ್ಲಿ ಮತ ಜಾಗೃತಿ ಅಭಿಯಾನ ನಡೆಸಲಾಯಿತು. ಈ ಸಂದರ್ಭದಲ್ಲಿ ನಾಗೇಶ್, ಕೆ.ಪಿ.ನಾಗಭೂಷಣ್, ವಿ.ಎಂ.ಮಂಜುನಾಥ, ನಾಗರಾಜು, ಚಿದಾನಂದಮೂರ್ತಿ, ಚಂದ್ರಶೇಖರ್‍ಐತಾಳ್ ಮುಂತಾದವರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link