ಜಗಳೂರು:
ಜಗಳೂರು ಪಟ್ಟಣದಲ್ಲಿ ಭಾರತೀಯ ಚುನಾವಣಾ ಆಯೋಗ ಹಾಗೂ ಪಟ್ಟಣ ಪಂಚಾಯಿತಿ ವತಿಯಿಂದ ಲೋಕಸಭಾ ಸಾರ್ವತ್ರಿಕ ಚುನಾವಣೆ ಮತದಾರರ ಸಹಿ ಸಂಗ್ರಹ ಹಾಗೂ ಜಾಗೃತಿ ಕಾರ್ಯಕ್ರಮಕ್ಕೆ ಸಹಾಯಕ ಚುನಾವಣಾಧಿಕಾರಿ ಮಂಟೇಸ್ವಾಮಿ ಅವರು ಸಹಿ ಹಾಕುವ ಮೂಲಕ ಚಾಲನೆ ನೀಡಿದರು.
ಪಟ್ಟಣದ ಮುಖ್ಯ ಬೀಧಿಗಳಲ್ಲಿ ಹಾಗೂ ಕಾಲೇಜುಗಳಲ್ಲಿ ಕರ ಪತ್ರ ನೀಡಿ ಸಹಿ ಸಂಗ್ರಹ ಮಾಡುವ ಮೂಲಕ ಮತದಾರರಿಗ ಜಾಗೃತಿ ಮೂಡಿಸಲಾಯಿತು.ಈ ಸಂದರ್ಭದಲ್ಲಿ ತಹಶೀಲ್ದಾರ್ ತಿಮ್ಮಪ್ಪ ಉಜ್ಜಿಯಿನಿ,ಪ.ಪ.ಮುಖ್ಯಾಧಿಕಾರಿ ಕಂಪಳಮ್ಮ, ಆರೋಗ್ಯನಿರೀಕ್ಷಕ ಕಿಫಾಯತ್, ಕಂದಾಯ ನಿರೀಕ್ಷಕ ಸಂತೋಷ್ ಇತರರು ಹಾಜರಿದ್ದರು.