ಮತದಾನವನ್ನು ಕಡ್ಡಾಯವಾಗಿ ಚಲಾಯಿಸುವ ಮೂಲಕ ಮತದಾನ ಹಬ್ಬವನ್ನು ಆಚರಿಸಬೇಕು: ಹುಲ್ಲಮನಿ ತಿಮ್ಮಪ್ಪ

ಜಗಳೂರು:

          ದೇಶದ ಅಭಿವೃದ್ದಿಗೆ ಪೂರಕವಾಗಿ ಸುಭದ್ರ ಸರ್ಕಾರ ರಚನೆಯಲ್ಲಿ ಅತ್ಯಮೂಲ್ಯವಾದ ಮತದಾನವನ್ನು ಕಡ್ಡಾಯವಾಗಿ ಚಲಾಯಿಸಬೇಕಾಗಿದೆ, ಅದರಲ್ಲಿಯೂ ಯುವ ವಯಸ್ಕರರಾದ ವಿದ್ಯಾರ್ಥಿಗಳು ಮತದಾನವನ್ನು ಮಾಡುವ ಮೂಲಕ ಮತದಾನದ ಹಬ್ಬವನ್ನು ಆಚರಿಸಬೇಕು ಎಂದು ತಹಶೀಲ್ದಾರ್ ಹುಲ್ಲಮನಿ ತಿಮ್ಮಪ್ಪ ಹೇಳಿದರು.

        ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ತಾಲೂಕು ಪಂಚಾಯ್ತಿ ವತಿಯಿಂದ ಹಮ್ಮಿಕೊಂಡಿದ್ದ 2019ರ ಲೋಕಸಭಾ ಚುನಾವಣೆಯಲ್ಲಿ ಮತದಾನ ಜನ ಜಾಗೃತಿ ಬೈಕ್ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದರು.ಪ್ರತಿಯೊಬ್ಬ ನಾಗರೀಕನು ಸಂವಿಧಾನ ಬದ್ದ ಮತದಾನದ ಹಕ್ಕನ್ನು ಪಾರದರ್ಶಕವಾಗಿ ಚಲಾಯಿಸಿ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಸಹಕಾರಿಯಾ ಗಬೇಕಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನ ಬದ್ದವಾದ ಮತದಾನದ ಹಕ್ಕ ನ್ನು ಪ್ರತಿಯೊಬ್ಬ ಪ್ರಜೆಯೂ ಪಾರದರ್ಶ ಕವಾಗಿ ಚಲಾಯಿಸುವ ಮೂಲಕ ದೇಶದ ಭದ್ರ ಬುನಾದಿಗಾಗಿ ಅಡಿಗಲ್ಲಾಗಬೇಕಾಗಿದೆ ಎಂದರು.

         ಇಒ ಜಾನಕೀರಾಮ್ ಮಾತನಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ನಾಗರೀಕನ ಮತದಾನವು ಸರ್ಕಾರ ರಚನೆಯ ಅಡಿಪಾಯವಾಗಿದ್ದು, ಅತ್ಯಮೂಲ್ಯವಾದ ಮತದಾನವನ್ನು ಯಾವುದೇ ಆಸೆ ಆಮೀಷಗಳಿಗೆ ಬಲಿಯಾ ಗದೇ ಪಾರದರ್ಶಕವಾಗಿ ಚಲಾಯಿಸು ವುದರೊಂದಿಗೆ ಜಗತ್ತಿಗೆ ಮಾದರಿಯಾಗಿ ರುವ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಎತ್ತಿ ಹಿಡಿಯಬೇಕಾಗಿದೆ.

         ಅಸಂವಿಧಾನಿಕ ಮತದಾನದ ಪ್ರಕ್ರಿಯೆಗಳಿಗೆ ಕಡಿವಾಣವನ್ನು ಹಾಕಿ ಸಂವಿಧಾನ ಬದ್ದವಾದ ಚುನಾವಣಾ ಪ್ರಕ್ರಿ ಯೆಗಳಿಗೆ ಮಾದರಿಯಾಗುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯ ಮೌಲ್ಯಗಳನ್ನು ಜಾರಿಗೊಳಿಸಲು ಮುಂದಾಗಬೇಕಾಗಿದೆ ಎಂದರು.ಈ ಸಂದರ್ಭದಲ್ಲಿ ಚುನಾವಣಾಧಿಕಾರಿ ಮಂಟೆಸ್ವಾಮಿ, ತಾಲೂಕು ಪಂಚಾಯ್ತಿ ಸಿಬ್ಬಂಧಿಗಳಾದ ರೇವಣ್ಣನಾಯ್ಕ, ಸಿದ್ದಿಕ್ ಸೇರಿದಂತೆ ಗ್ರಾಮ ಪಂಚಾಯ್ತಿ ಪಿಡಿಒ, ಕಾರ್ಯದರ್ಶಿಗಳು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link