ಚುನಾವಣಾ ಪಾಠಶಾಲೆ ಮೂಲಕ ಪರಿಣಾಮಕಾರಿ ಪ್ರಚಾರ: ಹೆಚ್ ಬಸವರಾಜೇಂದ್ರ

ದಾವಣಗೆರೆ

       ಲೋಕಸಭಾ ಸಾರ್ವತ್ರಿಕ ಚುನಾವಣೆ-2019ರ ಸ್ವೀಪ್ ಕಾರ್ಯಕ್ರಮದಡಿ ಜಿಲ್ಲಾ ಪಂಚಾಯತ್, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಹೆಚ್.ಬಸವರಾಜೇಂದ್ರ ಇವರ ನೇತೃತ್ವದಲ್ಲಿ ಹಲವು ವಿನೂತನ ಕಾರ್ಯಕ್ರಮಗಳನ್ನು ದಾವಣಗೆರೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆಸಲಾಗುತ್ತಿದೆ.

        ಜಿಲ್ಲೆಯಲ್ಲಿ ಈವರೆಗೆ ಗ್ರಾಮೀಣ ಪ್ರದೇಶಗಳನ್ನೊಳಗೊಂಡಂತೆ ಒಟ್ಟು 7,344 ಕಾರ್ಯಕ್ರಮಗಳ ಮೂಲಕ ಈಗಾಗಲೇ ಹನ್ನೊಂದು ಲಕ್ಷಕ್ಕೂ ಹೆಚ್ಚು ಮತದಾರರಿಗೆ ಮತದಾನ ಮಾಡುವಂತೆ ಜಾಗೃತಿ ಮೂಡಿಸಲಾಗಿದೆ.

ಚುನಾವಣಾ ಪಾಠಶಾಲೆ :

       ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಹೆಚ್.ಬಸವರಾಜೇಂದ್ರ ಇವರು ಮತದಾರರಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸಲು ಚುನಾವಣಾ ಪಾಠಶಾಲೆಗೆ ಚಾಲನೆ ನೀಡಿದ್ದು, ಇದು ಮತದಾರರಲ್ಲಿ ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸಲು ಸಹಕಾರಿಯಾಗಿದೆ.

       ಟಾಟಾ ಏಸ್ ವಾಹನಕ್ಕೆ ವಿದ್ಯುತ್ ಅಲಂಕಾರದೊಂದಿಗೆ ಚುನಾವಣಾ ರಾಜ್ಯ ಐಕಾನ್‍ಗಳಾದ ಕ್ರಿಕೆಟಿಗ ರಾಹುಲ್ ದ್ರಾವಿಡ್, ಚಿತ್ರನಟಿ ಪ್ರಣಿತರ ಛಾಯಾಚಿತ್ರದೊಂದಿಗೆ ಇವಿಎಂ/ವಿವಿಪ್ಯಾಟ್ ಮಾದರಿಗಳು, ದೆಹಲಿ ಸಂಸತ್ ಭವನದ ಚಿತ್ರಗಳನ್ನೊಳಗೊಂಡಂತೆ ಚುನಾವಣಾ ಪಾಠ ಶಾಲೆ ವಾಹನವು ಈಗಾಗಲೇ ದಾವಣಗೆರೆ ಲೋಕಸಭಾ ಕ್ಷೇತ್ರದ ದಾವಣಗೆರೆ ಉತ್ತರ, ದಾವಣಗೆರೆ ದಕ್ಷಿಣ ಹಾಗೂ ಹರಿಹರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಲ್ಲಿ ಸಂಚಾರ ಪ್ರಾರಂಭಿಸಿದೆ.

        ಈ ಚುನಾವಣಾ ಪಾಠಶಾಲೆಯಲ್ಲಿ ಸ್ತಬ್ಧ ಚಿತ್ರಗಳನ್ನು ಅಳವಡಿಸಲಾಗಿದ್ದು ಮತದಾನದ ಮಹತ್ವವನ್ನು ಸಾರುವ ಘೋಷ ವಾಕ್ಯಗಳೊಂದಿಗೆ ಮತದಾನ ಜಾಗೃತಿ ಗೀತೆ ಮತ್ತು ಘೋಷಣೆ ಹಾಗೂ ಮತದಾರರ ಮಾರ್ಗದರ್ಶಿ ಪುಸ್ತಕವನ್ನು ಪ್ರತಿ ಮನೆ ಮನೆಗಳ ಬಾಗಿಲಿಗೂ ಹಂಚುವ ಮೂಲಕ ಹಾಗೂ ಪ್ರತಿ ಮತದಾರನ ಬಳಿಗೂ ಹೋಗುವ ಮೂಲಕ ಮತಜಾಗೃತಿ ಮೂಡಿಸುತ್ತಿದೆ.

        ಹೊನ್ನಾಳಿ ವಿಧಾನಸಭಾ ಕ್ಷೇತ್ರದಲ್ಲಿ ಏ.02 ರಿಂದ ಏ.05 ರವರೆಗೆ, ಚನ್ನಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಲ್ಲಿ ಏ.06 ರಿಂದ ಏ.10 ರವರೆಗೆ, ಹರಪನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಲ್ಲಿ ಏ.11 ರಿಂದ ಏ.15 ರವರೆಗೆ, ಜಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಲ್ಲಿ ಏ.16 ರಿಂದ ಏ.18 ರವರೆಗೆ, ಕೊನೆಯದಾಗಿ ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಲ್ಲಿ ಏ.19 ರಿಂದ ಏ.21 ರವರೆಗೆ ಈ ಚುನಾವಣಾ ಪಾಠಶಾಲಾ ಸಂಚಾರಿ ವಾಹನ ಪ್ರತಿ ಮತದಾರನ ಬಳಿಗೂ ಹೋಗುವ ಮೂಲಕ ಮತದಾನ ಮಾಡಿ ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವದ ಗೆಲುವಿಗೆ ಶ್ರಮಸಲು ಜಿಲ್ಲಾ ಸ್ವೀಪ್ ಸಮಿತಿ ಕರೆ ನೀಡಿದೆ ಹಾಗೂ ದಾವಣಗೆರೆ ಲೋಕಸಭಾ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 16,11,045 ಇದ್ದು, ಪ್ರತಿಯೊಬ್ಬರೂ ಮತದಾನ ಮಾಡಲು ಪ್ರೇರೆಪಣೆ ಮಾಡಲಾಗುತ್ತಿದೆ.

          ಚುನಾವಣಾ ಪಾಠಶಾಲೆ ವೀಕ್ಷಣೆ: ಚುನಾವಣಾ ಪಾಠ ಶಾಲೆಯನ್ನು ಹೊತ್ತ ಸ್ಥಬ್ದ ಚಿತ್ರ ವಾಹನವು ಪ್ರತಿ ಸ್ಥಳಗಳಲ್ಲಿ ಹೋದಾಗ ಸಾರ್ವಜನಿಕರು ಕುತೂಹಲದಿಂದ ವೀಕ್ಷಣೆ ಮಾಡುತ್ತಿದ್ದು, ವಿವರಗಳನ್ನು ನೀಡುವಂತೆ, ಚುನಾವಣಾ ಪಾಠ ಶಾಲೆಯನ್ನು ಹೊತ್ತ ಸ್ಥಬ್ದ ಚಿತ್ರ ತಂಡದ ಮುಖ್ಯಸ್ಥರಿಗೆ ಪ್ರಶ್ನೆ ಮಾಡುತ್ತಿದ್ದಾರೆ. ಸ್ಥಬ್ದ ಚಿತ್ರ ತಂಡದ ಮುಖ್ಯಸ್ಥರು ವಾಹನದ ಬಳಿ ಗುಂಪು ಗುಂಪಾಗಿ ಬಂದ ಸಾರ್ವಜನಿಕರಿಗೆ ಮತದಾರರ ಮಾರ್ಗದರ್ಶಿ ಪುಸ್ತಕ ಹಾಗೂ “ಸಿ” ವಿಜಿಲ್ ಆ್ಯಪ್ ವಿವರಗಳನ್ನು ಒಳಗೊಂಡ ಕರಪತ್ರಗಳನ್ನು ವಿತರಿಸುತ್ತಾ ಕಡ್ಡಾಯವಾಗಿ ತಮ್ಮ ಕುಟುಂಬ ಹಾಗೂ ಸ್ನೇಹಿತರೊಂದಿಗೆ ಏ.23 ರಂದು ನಡೆಯುವ ಮತದಾನ ದಿನದಂದು ಮತದಾನ ಮಾಡುವಂತೆ ಕೋರುತ್ತಿರುವುದು ಕಂಡು ಬಂದಿರುತ್ತದೆ.

         ಸಾರ್ವಜನಿಕರು ಚುನಾವಣಾ ಪಾಠ ಶಾಲಾ ವಾಹನದ ಮುಂದೆ ನಿಂತು ಸೆಲ್ಫಿ, ಫೋಟೊ ಮತ್ತು ವಿಡಿಯೋಗಳನ್ನು ತೆಗೆದು, ತಮ್ಮ ವ್ಯಾಟ್ಸ್‍ಪ್ ಮತ್ತು ಫೇಸ್‍ಬುಕ್ ಗ್ರೂಪ್‍ಗಳಲ್ಲಿ ಮತ್ತು ಸ್ಟೇಟಸ್‍ಗಳಲ್ಲಿ ಹಂಚಿಕೊಳ್ಳುತ್ತಿರುವುದು ಜಿಲ್ಲಾ ಸ್ವೀಪ್ ಸಮಿತಿಗೆ ತುಂಬಾ ಸಂತೋಷದ ವಿಷಯವಾಗಿದೆ ಎಂದು ಜಿ.ಪಂ. ಸಿಇಓ ಹೆಚ್.ಬಸವರಾಜೇಂದ್ರ ತಿಳಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link