ಹುಳಿಯಾರು: ಮತದಾರರಿಂದ ಮತದಾನದ ಅಭಿಪ್ರಾಯ

ಹುಳಿಯಾರು:

ಮತದಾನದ ಘನತೆ ಉಳಿಸೋಣ

       ಪಕ್ಷ ಯಾವುದೇ ಆಗಿರಲಿ, ಅಭ್ಯರ್ಥಿಗಳು ಯಾರೇ ಆಗಿರಲಿ. ಕಣದಲ್ಲಿ ಇದ್ದವರಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಗುಣವುಳ್ಳವರಿಗೆ ಮತ ಹಾಕಬೇಕು. ಅಭ್ಯರ್ಥಿಗಳು ಯಾರೂ ಸರಿ ಇಲ್ಲ ಎಂಬ ಕಾರಣವೊಡ್ಡಿ ಮತದಾನ ಪ್ರಕ್ರಿಯೆಯಿಂದ ದೂರ ಉಳಿದರೆ ಅದು ಭಾರತೀಯ ಸಂವಿಧಾನ ನೀಡಿರುವ ಹಕ್ಕಿಗೆ ಕುಂದು ತರುವ ಕೆಲಸವಾಗಿದೆ.

        ಮತದಾನ ಮಾಡದಿದ್ದರೆ ಇಡೀ ವ್ಯವಸ್ಥೆ ಕಲುಷಿತವಾಗುತ್ತದೆ. ಅದರ ಅಪಕೀರ್ತಿಗೆ ನಾವೇ ಕಾರಣರಾಗುತ್ತೇವೆ. ನಮ್ಮ ಜವಾಬ್ದಾರಿ ಅರಿತು ಏಪ್ರಿಲ್ 18 ರಂದು ಅರ್ಹ ಮತದಾರರೆಲ್ಲರೂ ಮತಗಟ್ಟೆಗೆ ತೆರಳಿ ಮತ ಹಾಕೋಣ ಬನ್ನಿ.
ಪಾತ್ರೆ ಸತೀಶ್, ಅಧ್ಯಕ್ಷರು, ರೈತ ಸಂಘ, ಹುಳಿಯಾರು
4 : ಪಾತ್ರೆ ಸತೀಶ್,

ಓಟು ಹಾಕದಿದ್ದರೆ ನೈತಿಕತೆ ಇರಲ್ಲ

        ಭ್ರಷ್ಟಾಚಾರ ಮುಕ್ತ ಆಡಳಿತ ಹಾಗೂ ಸ್ವಚ್ಛ ರಾಜಕಾರಣಕ್ಕೆ ಮತದಾನವು ಭದ್ರ ಬುನಾದಿಯಾಗಿದೆ. ದೇಶದಲ್ಲಿ ರಾಜಕೀಯವಾಗಿ, ಆಡಳಿತಾತ್ಮಕವಾಗಿ ಮತ್ತು ಸಾಮಾಜಿಕವಾಗಿ ಬದಲಾವಣೆ ತರಲು ಮತದಾರರು ತಪ್ಪದೇ ಮತ ಚಲಾಯಿಸಬೇಕು.

       ಸಂವಿಧಾನ ಬದ್ಧವಾಗಿ ಬಂದಿರುವ ಮತದಾನದ ಹಕ್ಕನ್ನು ನಿರ್ಲಕ್ಷಿಸುವುದು ಪ್ರಜಾಪ್ರಭುತ್ವದ ವ್ಯವಸ್ಥೆಗೆ ಮಾರಕ. ಮತದಾರರು ಈ ಹಕ್ಕನ್ನು ಚಲಾಯಿಸದಿದ್ದರೆ ಭವಿಷ್ಯದಲ್ಲಿ ಜನಪ್ರತಿನಿಧಿಗಳು ಮತ್ತು ಸರ್ಕಾರವನ್ನು ಪ್ರಶ್ನಿಸುವ ನೈತಿಕ ಹಕ್ಕನ್ನು ಕಳೆದುಕೊಳ್ಳುತ್ತಾರೆ. ಸಮಸ್ಯೆಗಳಿಗೆ ಸ್ಪಂದಿಸದ ಸರ್ಕಾರ ಮತ್ತು ಜನಪ್ರತಿನಿಧಿಗಳನ್ನು ಮತದಾನದ ಹಕ್ಕಿನ ಮೂಲಕವೇ ಬದಲಿಸಬೇಕು.
 5 : ಬಿ.ಜಯಣ್ಣ,

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link