ಕೊರಟಗೆರೆ
ಮತದಾನ ಮಾಡುವ ಪ್ರತಿಯೊಬ್ಬ ಮತದಾರನು ಯಾವುದೇ ಹಣ ಹಾಗೂ ಇತರೇ ವಸ್ತುಗಳಿಗೆ ಆಸೆ ಪಡೆದೇ ನೈತಿಕ ಮತದಾನ ಮಾಡಬೇಕು ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸರ್ವೇಶ್ ತಿಳಿಸಿದರು.
ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಜಿಪಂ.ತಾಪಂ ಹಾಗೂ ತಾಲೂಕು ಸ್ವೀಪ್ ಸಮಿತಿ ಏರ್ಪಡಿಸಲಾಗಿದ್ದ ಮತದಾರರಿಗೆ ಅರಿವು ಮೂಡಿಸಲು ಸಲುವಾಗಿ ಕ್ರಿಕೆಟ್ ಪಂದ್ಯಾವಳಿಯನ್ನ ಶನಿವಾರ ಉದ್ಘಾಟಿಸಿ ಮಾತನಾಡಿದರು.
ಈ ಬಾರಿ ಚುನಾವಣಾ ಆಯೋಗ ಪ್ರತಿ ಗ್ರಾಪಂಯಲ್ಲಿ ಇರುವ ವಿಶೇಷ ಚೇತನ ಮತ್ತು ಹಿರಿಯ ನಾಗರೀಕರಿಗೆ ಎರಡು ವಾಹನ ಸೇವೆಯನ್ನ ಮಾಡಲಾಗಿದ್ದು, ಪ್ರತಿ ಪಂಚಾಯಿತಿಗೆ 20 ಜನರ ಸ್ವಯಂಸೇವಾಕರು ನೇಮಿಸಲಾಗಿದ್ದು, ಮತದಾರರು ಯಾವುದೇ ರೀತಿಯ ಆಮಿಷಕ್ಕೆ ಒಳಗಾಗದೇ ಮತದಾನ ಮಾಡಬೇಕು. ಲೋಕಸಭಾ ಚುನಾವಣೆಯ ಮತದಾನ ಏ.18ರ ಗುರುವಾರ ಮುಂಜಾನೆ 7ಗಂಟೆಯಿಂದ ಸಂಜೆ 6ಗಂಟೆವರೇಗೆ ನಡೆಯಲಿದೆ ಎಂದು ತಿಳಿಸಿದರು.
ಪ್ರತಿಯೊಬ್ಬ ಮನುಷ್ಯನು ಮತದಾನ ತಮ್ಮ ಮೂಲಭೂತ ಹಕ್ಕು. ನಿಮ್ಮ ಹಕ್ಕನ್ನ ತಪ್ಪದೇ 18ನೇ ತಾರೀಖು ತಪ್ಪದೇ ಮತದಾನ ಮಾಡಬೇಕು. ಗ್ರಾಮೀಣ ಪ್ರದೇಶದಲ್ಲಿ ಮತದಾನದ ಅರಿವು ಮೂಡಿಸುವ ಕೆಲಸವನ್ನ ತಮ್ಮ ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಸಹಕರಿಸಿ ಜಿಲ್ಲೆಯಲ್ಲಿ ಬೇರೆ ತಾಲೂಕಿಗಿಂತ ನಮ್ಮ ತಾಲೂಕಿನಲ್ಲಿ ಹೆಚ್ಚು ಮತದಾನ ಮಾಡುವ ಸಲುವಾಗಿ ಪ್ರತಿಯೊಬ್ಬ ಅಧಿಕಾರಿಗಳು ಸಹಕರಿಸಬೇಕು ಎಂದು ಹೇಳಿದರು.
ದೈಹಿಕ ಶಿಕ್ಷಕ ಸಂಘದ ಸಂಯೋಜಕರಾದ ವಜೀರ್ ಖಾನ್ ಮಾತನಾಡಿ ಬೇರೆ ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ ನೆಡೆದಿದ್ದು ಅದರಲ್ಲಿ ಆಂದ್ರದಲ್ಲಿ ಯಾವ ರೀತಿ ಚುನಾವಣೆ ನಡೆಯಿತ್ತು ಎಂದು ನೀವು ಪತ್ರಿಕೆಗಳಲ್ಲಿ ನೋಡಿದ್ದಿರಾ, ಅದರೆ ನಮ್ಮ ರಾಜ್ಯದಲ್ಲಿ ಅಂತಹ ಘಟನೆಗಳು ನೆಡೆಯುವುದಿಲ್ಲ. ನಮ್ಮ ರಾಜ್ಯದಲ್ಲಿ ಇರುವ ಉತ್ತಮ ವ್ಯವಸ್ಥೆಯಿಂದ ಅಂತಹ ಅಹಿತಕರ ಘಟನೆಗಳು ನೆಡೆಯುವುದಿಲ್ಲ ನಮ್ಮ ಮತದಾರರು ಶಾಂತಿಯುತ ಮತದಾನ ಮಾಡುವ ಮೂಲಕ ದೇಶಕ್ಕೆ ಮಾದರಿಯಾಗಿದ್ದಾರೆ ಎಂದು ತಿಳಿಸಿದರು.
ಇದೆ ಸಂಧರ್ಭದಲ್ಲಿ ತಾಪಂ ಸಹಾಯಕ ನಿರ್ದೇಶಕ ನಾಗರಾಜು, ವ್ಯವಸ್ಥಾಪಕ ಅನಿಲ್‍ಕುಮಾರ್, ಪಿಡಿಒಗಳಾದ ರಾಮಚಂದ್ರರಾವ್, ರಾಘವೇಂದ್ರ, ಸುನಿಲ್‍ಕುಮಾರ್, ಸತ್ಯನಾರಾಯಣರಾಜು, ರಂಗಶಾಮಯ್ಯ, ರಮೇಶ್, ಚಲುವರಾಜು, ಕುಮಾರ್‍ಸ್ವಾಮಿ, ಮಂಜುನಾಥ್, ನಾಗರಾಜು, ಶಿವಕುಮಾರ್ ಸಿಬ್ಬಂದಿಗಳಾದ ಶಿವಶಂಕರ್, ರಮೇಶ್, ದೈಹಿಕ ಶಿಕ್ಷಕರಾದ ಸತೀಶ್, ಪ್ರಭಾಕರ್, ಶಿವು ಸೇರಿದಂತೆ ಇತರರು ಇದ್ದರು