ಮತದಾರರ ಅಭಿಪ್ರಾಯ

ಹುಳಿಯಾರು:

ದಾನ ನೀಡುವವರ ಕೈ ಮೇಲು

      ದಾನ ಪಡೆಯುವವನಿಗಿಂತ ದಾನ ನೀಡುವವನ ಕೈ ಮೇಲಿನ ಸ್ಥಾನದಲ್ಲಿ ಇರುವಂತೆ ಮತದಾನ ಮಾಡುವವನು ಎಂದೂ ಉನ್ನತ ಮಟ್ಟದವನೆಂದು ಪರಿಭಾವಿಸಿ ಹಕ್ಕು ಚಲಾಯಿಸಬೇಕು. ಸಾರ್ವತ್ರಿಕ ಚುನಾವಣೆಯು ಕೇವಲ ಅಧಿಕಾರ ಅಥವಾ ಸ್ಥಾನ ಗಳಿಕೆಯ ಸಾಧನವಲ್ಲ. ಬದಲಿಗೆ ಅದು ಜನರ ಬದುಕು ಬವಣೆಗಳ ನಡುವೆ ಏರ್ಪಡುವ ಬೆಸುಗೆ.

       ಜನರ ಬದುಕು ಹಸನಾಗಿಸುವ ಜನಾನುರಾಗಿ ಜನಪ್ರತಿನಿಧಿಗಳ ಆಯ್ಕೆಗಾಗಿ ಸಂವಿಧಾನವು ಜನರಿಗೆ ಮತದಾನದ ಹಕ್ಕಿನ ಪ್ರಬಲ ಅಸ್ತ್ರ ಕೊಟ್ಟಿದೆ. ಮತದಾರರು ಹಣ, ಹೆಂಡದ ಆಮಿಷಕ್ಕೆ ಬಲಿಯಾಗದೆ ವಿವೇಕಯುತವಾಗಿ ಈ ಹಕ್ಕು ಚಲಾಯಿಸಬೇಕು. ಆಗ ಮಾತ್ರ ಸಮರ್ಥ ಜನಪ್ರತಿನಿಧಿಗಳ ಆಯ್ಕೆ ಮತ್ತು ಜನಪರ ಸರ್ಕಾರ ರಚನೆ ಸಾಧ್ಯ.
ಎಚ್.ವಿ.ಯೋಗೀಶಚಾರ್, ಹುಳಿಯಾರು
 

`ನನ್ನ ಒಂದು ಮತ ದೇಶಕ್ಕೆ ಹಿತ’

         ಪ್ರಜಾಪ್ರಭುತ್ವದ ವ್ಯವಸ್ಥೆ ಯಶಸ್ವಿಯಾಗಲು ಮತದಾರರು ಕಡ್ಡಾಯವಾಗಿ ಮತದಾನ ಮಾಡಬೇಕು. `ಪ್ರಜೆಗಳೇ ಪ್ರಭುಗಳು’ ಎಂಬುದನ್ನು ಸಾಬೀತುಪಡಿಸಲು ಜನತೆ ಪ್ರಬುದ್ಧತೆಯಿಂದ ಮತ ಹಾಕಬೇಕು. ಯಾವುದೇ ಆಮಿಷಗಳಿಗೆ ಒಳಗಾಗದೇ, ಸ್ವಾರ್ಥಕ್ಕಾಗಿ ಮತವನ್ನು ಮಾರಿಕೊಳ್ಳದೆ ವೋಟು ಮಾಡಬೇಕು.

        ಮತದಾನ ಕರ್ತವ್ಯ ಎಂದುಕೊಂಡರೂ ಉತ್ತಮ ಅಭ್ಯರ್ಥಿಯ ಆಯ್ಕೆಗೆ ವಿವೇಚನೆ ಅಗತ್ಯ. ಏಕೆಂದರೆ `ನನ್ನ ಒಂದು ಮತ ದೇಶಕ್ಕೆ ಹಿತ’ ಎಂಬ ಕಾಳಜಿ ಇರಬೇಕು. ಎಲ್ಲ ವರ್ಗದ ಮತಬಾಂಧವರು ಮತ ಚಲಾಯಿಸುವ ಮೂಲಕ `ಪ್ರಜೆಗಳ ಪ್ರಭುತ್ವ’ಕ್ಕೆ ನಿಜವಾದ ಮಹತ್ವ ಸಿಗಲಿ ಎಂಬುದೇ ಈ ಕ್ಷಣದ ಜವಾಬ್ದಾರಿಯಾಗಿದೆ. ಬನ್ನಿ ವೋಟ್ ಮಾಡೋಣ.
ಎಚ್.ಸಿ.ಪ್ರಸನ್ನ, ಹುಳಿಯಾರು
6: ಎಚ್.ಸಿ.ಪ್ರಸನ್ನ,

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link