ಚಿತ್ರದುರ್ಗ :
ಚುನಾವಣೆಯ ಬಗ್ಗೆ ಹಾಗೂ ಮತದಾನದ ಮಹತ್ವದ ಕುರಿತು ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಅರಿವು ಮೂಡಿಸುವುದು ಅಗತ್ಯವಾಗಿದ್ದು, ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಎಲ್ಲ ಅರ್ಹ ಮತದಾರರು ತಪ್ಪದೆ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡು, ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ಹೇಳಿದರು.
ನಗರದ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ರಾಜ್ಯ ಚುನಾವಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತ್ ಮತ್ತು ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ನಗರದ ಡಯಟ್ ಕೇಂದ್ರದಲ್ಲಿ ಬೂತ್ ಮಟ್ಟದ ಅಧಿಕಾರಿಗಳು ಹಾಗೂ ಕಾಲೇಜುಗಳ ಉಪನ್ಯಾಸಕರಿಗೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಚುನಾವಣೆ ಹಾಗೂ ಮತದಾನದ ಮಹತ್ವದ ಬಗ್ಗೆ ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಅರಿವು ಮೂಡಿಸಬೇಕಿದೆ. ಚುನಾವಣೆ ಸಂದರ್ಭದಲ್ಲಿ ಮತದಾನ ಮಾಡಿ ಮಾಡದೇ ಸತ್ಪ್ರಜೆಗಳನ್ನು ಆಯ್ಕೆ ಮಾಡಬೇಕು ಎಂಬ ಅರಿವು ಮೂಡಿಸಬೇಕಿದೆ. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಪ್ರಮುಖವಾಗಿದೆ. ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದ ಮತದಾನ ಮಾಡಿಸುವ ಮೂಲಕ ಮತದಾನದ ಮಟ್ಟವನ್ನು ಹೆಚ್ಚಿಸುವ ಮುಖ್ಯ ಉದ್ದೇಶ ಹೊಂದಲಾಗಿದೆ ಎಂದರು
ಮತದಾನದ ಪ್ರಾಮುಖ್ಯತೆಯನ್ನು ಪ್ರೌಢಶಾಲಾ ಮಕ್ಕಳಿಗೆ ತಿಳಿಯಪಡಿಸಿದರೆ ಅವರೆಲ್ಲರ ಅವರ ಪೋಷಕರಿಗೆ ಮನವರಿಕೆ ಮಾಡುವುದರೊಂದಿಗೆ ಕುಟುಂಬದ ಸದಸ್ಯರಿಗೆ ಮತದಾನ ಜಾಗೃತಿ ಕೆಲಸವನ್ನು ಮಕ್ಕಳು ಮಾಡುತ್ತಾರೆ. ಕಾಲೇಜಿನಲ್ಲಿ ಕ್ಯಾಂಪಸ್ ಅಂಬಾಸೆಡರ್ ಎಂದು ಆಯ್ಕೆ ಮಾಡಿ ಸ್ನೇಹಿತರಿಗೆ ಮತದಾನ ಕುರಿತು ತಿಳಿಸಿ ಮತದಾನ ಮಾಡುವಂತೆ ಪ್ರೇರಿಪಿಸಲು ಈ ಬಾರಿ ಯೋಜಿಸಲಾಗಿದೆ. ವಿದ್ಯಾರ್ಥಿಗಳು ಕೊಡುವ ಮಾಹಿತಿಯಿಂದ ಸಾವಿರಾರು ಜನರಿಗೆ ಅವರ ಪ್ರಜಾಪ್ರಭುತ್ವ ಮತ್ತು ಮತದಾನ ಕುರಿತು ತಿಳಿಸಲು ಸಹಾಯಕವಾಗುತ್ತದೆ ಎಂದರು
ಶಾಸಕ, ಮಂತ್ರಿ, ಮುಖ್ಯಮಂತ್ರಿ ಹೇಗೆ ಆಯ್ಕೆ ಆಗುತ್ತಾರೆ ಎಂಬುದರ ಸಂಪೂರ್ಣ ಮಾಹಿತಿ ತಿಳಿದುಕೊಂಡಿದ್ದರೆ ಅನುಕೂಲವಾಗುತ್ತದೆ. ಚುನಾವಣೆ ಪ್ರಕ್ರಿಯೆಯ ಮತದಾನದ ಯಾವ ರೀತಿ ಮಾಡುತ್ತಾರೆ. ಮತಯಂತ್ರ ಹಾಗೂ ವಿವಿಪ್ಯಾಟ್ ಹೇಗೆ ತನ್ನ ಕೆಲಸ ನಿರ್ವಹಿಸುತ್ತದೆ ಎನ್ನುವುದರ ಕುರಿತು ಪೂರ್ಣ ನಾಟಕಗಳ ರೂಪದಲ್ಲಿ ಮತದಾರರಿಗೆ ಜಾಗೃತಿ ಮೂಡಿಸಬೇಕಿದೆ. ಇದರೊಂದಿಗೆ ಈ ಬಾರಿಯ ಸಂಸತ್ ಚುನಾವಣೆಯಲ್ಲಿ ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಯಲು ಸಹಕರಿಸಬೇಕಿದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ. ಸತ್ಯಭಾಮ ಅವರು ಮಾತನಾಡಿ, ಏಪ್ರಿಲ್ 18 ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಅರ್ಹ ಮತದಾರರು ಮತದಾನ ಮಾಡುವ ಅವಕಾಶದಿಂದ ವಂಚಿತರಾಗದೆ ಮತದಾನ ಮಾಡಬೇಕು. ಭಾರತದ ಸಂವಿಧಾನವು ತಮ್ಮನ್ನಾಳುವ ಪ್ರಜಾ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಜವಾಬ್ದಾರಿಯನ್ನು ಜನರಿಗೇ ನೀಡಿದೆ. ಉತ್ತಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲು ಇರುವ ಮಾರ್ಗವೇ ಚುನಾವಣೆ ಹಾಗೂ ಮತದಾನ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬೂತ್ ಮಟ್ಟದ ಅಧಿಕಾರಿಗಳು ನಿಗಾವಹಿಸಬೇಕು ಎಂದು ಸೂಚನೆ ನೀಡಿದರು.
ಚುನಾವಣಾ ಅಕ್ರಮಗಳನ್ನು ತಡೆಯಲು ಅಗತ್ಯ ಸಿದ್ದತೆಗಳನ್ನು ಕೈಗೊಂಡಿದ್ದು ಚುನಾವಣಾ ಉಲ್ಲಂಘನೆಯಾದಲ್ಲಿ 1950 ಉಚಿತ ಕರೆಯ ಮೂಲಕ ಎಲ್ಲಾ ಮತದಾರರು ದೂರುಗಳನ್ನು ಸಲ್ಲಿಸಬಹುದು. ಪಿಯುಸಿ ಓದುತ್ತಿರುವ 18 ವರ್ಷ ತುಂಬಿದ ವಿದ್ಯಾರ್ಥಿಗಳುನ್ನು ಗುರುತಿಸಿ, ಆಯಾ ಕಾಲೇಜಿನ ಸಿಬ್ಬಂದಿ ಅಗತ್ಯ ದಾಖಲೆಗಳನ್ನು ಕೂಢೀಕರಿಸಿಕೊಂಡು ಮತದಾರರ ಪಟ್ಟಿಗೆ ಸೇರಿಸಬೇಕೆಂದು ಹೇಳಿದರು.
ಮಹಿಳಾ ಮತದಾರರು ಹೆಚ್ಚಿರುವುದರಿಂದ ಮತದಾನ ಜಾಗೃತಿ ಮೂಡಿಸಿ ಶೇ 100 ರಷ್ಟು ಮತದಾನ ಮಾಡಿಸುವ ಕಾರ್ಯ ನಡೆಯಬೇಕು. ನಾವು ಯಾರಿಗೆ ಮತದಾನ ಮಾಡಿದ್ದೇವೆ ಎಂಬುದನ್ನು ವೀಕ್ಷಿಸಲು ವಿ.ವಿ ಪ್ಯಾಟ್ ಮೂಲಕ ಅವಕಾಶ ಇರುವುದರಿಂದ ಗೊಂದಲಗಳಿಗೆ ಆಸ್ಪದವಿರುವುದಿಲ್ಲ.
ಕಾರ್ಯಕ್ರಮದಲ್ಲಿ ಸ್ವೀಪ್ ನೋಡೆಲ್ ಅಧಿಕಾರಿ ಡಯಟ್‍ನ ಹನುಮಂತರಾಯ, ಡಿಡಿಪಿಐ ಎ.ಜೆ. ಅಥೋನಿ, ಡಯಟ್ ಪ್ರಾಂಶುಪಾಲ ಕೊದಂಡರಾಮ, ಗುಡದೇಶ್ವರಪ್ಪ , ಜಿಲ್ಲಾ ಅಂಗವಿಕಲ ಕಲ್ಯಾಣ ಇಲಾಖೆ ಜೆ.ವೈಶಾಲಿ ಮತ್ತು ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ