ಚೇಳೂರು
ಮತದಾನ ಖಾತರಿ ಯಂತ್ರದಿಂದ ಯಾವ ಗೊಂದಲವಿಲ್ಲದೆ ಮತದಾರರು ಮತದಾನ ಮಾಡಬಹುದು ಎಂದು ಅಂಕಸಂದ್ರ ಪಂಚಾಯಿತಿಯ ಆಭಿವೃದ್ಧಿ ಅಧಿಕಾರಿ ಜಿ.ಶ್ರೀನಿವಾಸ್ ಹೇಳಿದರು.
ಇವರು ಚೇಳೂರಿನಲ್ಲಿ ಮತದಾರರಿಗೆ ವಿದ್ಯುನ್ಮಾನ ಮತಯಂತ್ರ, ಮತದಾನ ಖಾತರಿ ಯಂತ್ರ ಉಪಕರಣಗಳ ಮುಕ್ತ ಬಳಕೆ ಮತ್ತು ಅದರ ಮಹತ್ವ ಕುರಿತು ಮತದಾರರಿಗೆ ಅರಿವು ಕಾರ್ಯಕ್ರಮದಲ್ಲಿ ಮತದಾನ ಮಾಡುವ ಯಂತ್ರದ ಬಗ್ಗೆ ತಿಳಿಸಿ ಮಾತನಾಡುತ್ತಾ, ಮತದಾರರು ತಾವು ಮತಚಲಾಯಿಸಿದ ವ್ಯಕ್ತಿಯು, ಕ್ರಮಸಂಖ್ಯೆ, ಹೆಸರು, ಚಿಹ್ನೆಗಳನ್ನು ವಿವಿಪಿಎಟಿ ಯಂತ್ರದಲ್ಲಿ 7 ಸೆಕೆಂಡ್‍ಗಳ ಕಾಲ ಮತದಾನ ಮಾಡಿದವರು ವೀಕ್ಷಿಸಬಹುದು. ಇದರಿಂದ ಯಾವುದೆ ಗೊಂದಲವು ಸಹ ಉಂಟಾಗುವುದಕ್ಕೆ ಅವಕಾಶಗಳು ಇರುವುದಿಲ್ಲ ಹಾಗೂ ಮತದಾರರು ಯಾರಿಗೆ ಮತವನ್ನು ಹಾಕಿದರು ಎಂಬುದನ್ನು ಮತಗಟ್ಟೆಯಲ್ಲಿಯೇ ಖಾತ್ರಿ ಪಡಿಸಿಕೊಳ್ಳಬಹುದು, ಜೊತೆಗೆ ಮತದಾನವು ಸಹ ಗೋಪ್ಯವಾಗಿರುತ್ತದೆ ಎಂದರು.
ಈ ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಗಂಗಮ್ಮ, ಗ್ರಾಪಂ ಸದಸ್ಯರಾದ ಸಿ.ಎನ್.ವೆಂಕಟೇಶ್, ಸಿ.ಎನ್.ಬಸವರಾಜು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ [ಪ್ರಭಾರ] ನೇಮಗೌಡರಾಜು, ಲೆಕ್ಕಸಹಾಯಕ ರಂಗರಾಜು, ಮೋದಿನ್, ರಾಮಣ್ಣ ಹಾಗೂ ಇತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
