ದಾವಣಗೆರೆ:
ಕೇಂದ್ರೀಯ ವಿಜ್ಞಾನ ಪರಿಷತ್ ಯೋಜನಾ (ಕೆವಿಪಿವೈ) ಪರೀಕ್ಷೆಯಲ್ಲಿ ರ್ಯಾಂಕ್ ಪಡೆದ ದಾವಣಗೆರೆಯ ವೈಷ್ಣವಿ ಚೇತನಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ವಿದ್ಯಾಸಾಗರ, ಚಿರಂತ್ ನೊಣವಿನಕೆರೆ ಅವರನ್ನು ಸಂಸ್ಥೆ ಅಧ್ಯಕ್ಷೆ ವಿಜಯಲಕ್ಷ್ಮಿ ವಿ. ಅವರು ಹೂವಿನ ಗುಚ್ಛ ನೀಡಿ ಅಭಿನಂದಿಸಿದರು.
ಕೇಂದ್ರೀಯ ವಿಜ್ಞಾನ ಪರಿಷತ್ ಯೋಜನಾ (ಕೆವಿಪಿವೈ) ಪರೀಕ್ಷೆಯಲ್ಲಿ ಇಲ್ಲಿನ ವೈಷ್ಣವಿ ಚೇತನಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ವಿದ್ಯಾಸಾಗರ ರಾಷ್ಟ್ರಮಟ್ಟದಲ್ಲಿ 7 ನೇ ರ್ಯಾಂಕ್ ಪಡೆದಿದ್ದಾನೆ. ಚಿರಂತ್ ನೊಣವಿನಕೆರೆ 434 ರ್ಯಾಂಕ್ ಪಡೆದಿದ್ದಾನೆ.
ಜೆಇಇ ಮೇನ್ ಪರೀಕ್ಷೆಯಲ್ಲಿ ಕಾಲೇಜಿನ ಶಶಾಂಕ್ ಜೆ.ಬಿ. ಶೇ 99.8 ಅಂಕ ಪಡೆದು ಜಿಲ್ಲೆಗೆ ಪ್ರಥಮ ರ್ಯಾಂಕ್ ಪಡೆದಿದ್ದಾನೆ ಎಂದು ಪ್ರಾಚಾರ್ಯ ಪವನ್‍ಕುಮಾರ್ ಜಿ. ತಿಳಿಸಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷೆ ಡಾ.ವಿಜಯಲಕ್ಷ್ಮಿ ಮಾಚಿನೇನಿ ಹರ್ಷ ವ್ಯಕ್ತಪಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
