ಒಡೆದ ಕೊಳವೆ ಪೈಪ್ : ಅಪಾರ ಪ್ರಮಾಣದ ನೀರು ಪೊಲು

ಹರಪನಹಳ್ಳಿ:

     ತಾಲ್ಲೂಕಿನ ಗರ್ಭಗುಡಿ ಜಾಕ್‍ವೆಲ್‍ನಿಂದ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡುತ್ತಿರುವ ಮಾರ್ಗಮಧ್ಯೆ ಕೊಳವೆಪೈಪ್ ಒಡೆದು ಹೋದ ಪರಿಣಾಮ ಅಪಾರ ಪ್ರಮಾಣದ ನೀರು(ಒಂದು ದಿನಕ್ಕೆ ಸರಬರಾಜು ಮಾಡುವಷ್ಟು) ಪೋಲಾಗಿದೆ.

     ತಾಲ್ಲೂಕಿನ ಇಟ್ಟಿಗುಡಿ-ನೀಲಗುಂದ ಗ್ರಾಮಗಳ ಮಧ್ಯೆ ರೈತರ ಜಮೀನಿನಲ್ಲಿ ಪೈಪ್ ಒಡೆದು ನೀರು ಪೋಲಾಗಿದ್ದು ಈ ಕುರಿತು ಮುಖ್ಯಾಧಿಕಾರಿ ಸಿ.ನಾಗರಾಜ ಪ್ರತಿಕ್ರಿಯಿಸಿ ಪಟ್ಟಣಕ್ಕೆ ನೀರು ಸರಬರಾಜು ಮಾಡುವ ಕೇಂದ್ರದಿಂದ ಪಟ್ಟಣದ ಓವರಹೆಡ್ ಟ್ಯಾಂಕ್‍ಗೆ ಸರಬರಾಜು ಆಗಲು 35ಕಿ.ಮೀ.ದೂರದಲ್ಲಿದ್ದು ಪ್ರತಿನಿತ್ಯ ಸಮಸ್ಯೆ ಇದ್ದೇ ಇರುತ್ತದೆ ಇದನ್ನು ಗಮನಿಸಿ ಶಾಸಕರ ಗಮನಕ್ಕೆ ತಂದಾಗ ಕೆಯುಡಬ್ಲೂ ಎಸ್ ಅಭಿಯಂತರ್ ವೀರನಗೌಡ್ರು ಇವರಿಗೆ ಪರ್ಯಾಯ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದಾರೆ.

     ಪಟ್ಟಣದಲ್ಲಿ ಜನಸಂಖ್ಯೆ ಹೆಚ್ಚಿದಂತೆ ನೀರಿನ ಸರಬರಾಜು ಕೂಡ ಹೆಚ್ಚಾಗಬೇಕಾಗಿದ್ದು ಈಗಿರುವ ಪೈಪ್‍ಗಳು ಶಿಥಿಲಗೊಂಡಿದ್ದು ವಿದ್ಯುತ್ ವ್ಯತ್ಯಯವಾದಾಗ ಪೈಪ್‍ಗಳು ಒಡೆದು ಹೋಗುವುದು ಸಾಮಾನ್ಯವಾಗಿದ್ದು ಆದ್ದರಿಂದ ಎರಡನೇ ಹಂತದ ಕುಡಿಯುವ ನೀರಿನ ಯೋಜನೆಗೆ ಪ್ರಸ್ಥಾವನೆಯನ್ನು ಸರ್ಕಾರಕ್ಕೆ ಕಳಿಸಲಾಗಿದೆ. ಈ ಬಗ್ಗೆ ಶಾಸಕರು ಸರ್ಕಾರದ ಮಟ್ಟದಲ್ಲಿ ಒತ್ತಡ ತರುವ ಮೂಲಕ ಎರಡನೇ ಹಂತದ ಕುಡಿಯುವ ನೀರಿನ ಯೋಜನೆಗೆ ಕಾಮಗಾರಿ ಆರಂಭಿಸುವುದಾಗಿ ಹೇಳಿದ್ದಾರೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap