ತಿಪಟೂರು :
ರಾಜ್ಯದಲ್ಲಿರುವ ಭೀಕರ ಬರಗಾಲವಿದ್ದು ಕೆಂಚರಾಯನಗರದ ಗ್ರಾಮಸ್ಥರು ನಗರಸಭೆಯ ಮುಂದೆ ಧರಣಿನಡೆಸಿದ ಪ್ರಜಾಪ್ರಗತಿ ಮತ್ತು ಇತರೆ ಪತ್ರಿಕಾ ವರಧಿಯನ್ನು ನೋಡಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿರುವುದನ್ನು ಮನಗಂಡು ನಾವು ನಿಮಗೆ ಕುಡಿಯಲು ನೀರನ್ನು ಒಗದಿಸುತ್ತಿದ್ದೇವೆಂದು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ತಿಪಟೂರು ಘಟಕ ಯೋಜನಾಧಿಕಾರಿ ಶಾಂತಾನಾಯಕ್ ತಿಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಟ್ಯಾಂಕರ್ ಮೂಲಕ ನೀಡುತ್ತಿರುವ ಕುಡಿಯುವ ನೀರಿನ ಯೋಜನೆಯಡಿ ವಾರಕ್ಕೆ 2 ಬಾರಿ ನೀರನ್ನು ಕೊಟುತ್ತಿದ್ದು ನೀರನ್ನು ಹಿತ-ಮಿತವಾಗಿ ಬಳಸಿಕೊಳ್ಳಲು ತಿಳಿಸಿದ ಅವರು ಸಂಸ್ಥೆಯ ಅಧ್ಯಕ್ಷರಾದ ಡಾ. ವೀರೇಂದ್ರ ಹೆಗ್ಗಡೆಯವರು ಕರ್ನಾಟಕ ರಾಜ್ಯದಾದ್ಯಂತ ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವ ಯಿಂದ ಪ್ರತಿ ಗ್ರಾಮದ ಮನೆಮನೆಗಳಿಗೆ ಕುಡಿಯುವ ನೀರನ್ನು ಅಗತ್ಯಕ್ಕೆ ಟ್ಯಾಂಕರ್ ಮೂಲಕ ದೈನಂದಿನ ಬಳಕೆಗೆ ಬೇಕಾಗುವ ಕನಿಷ್ಠ ನೀರಿನ ಸೌಲಭ್ಯವನ್ನು ಪಡೆದುಕೊಳ್ಳಲು ಸಮಸ್ಯೆ ಪೀಡಿತ ಗ್ರಾಮಗಳಿಗೆ ಅವಕಾಶ ಕಲ್ಪಿಸಿರುತ್ತಾರೆ.
ಇತ್ತೀಚಿನ ದಿನಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗಿ ಅಂತರ್ಜಲವು ಬತ್ತುತ್ತಿದ್ದು ಕುಡಿಯುವ ನೀಇಗೆ ಕೆಲವು ಕಡೆ ಹಾಹಾಕಾರವಾಗುತ್ತಿದ್ದನ್ನು ಜನರಿಗೆ ಬಹುಮುಖ್ಯವಾಗಿ ಬೇಕಾದ ನೀರನ್ನು ಕೊಡಲು ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದ್ದು ಇದರ ಸದುಪಯೋಗವನ್ನು ಪಡೆದುಕೊಳ್ಳಿ ಎಂದು ಜನರಿಗೆ ತಿಳಿಸಿದರು.
ಈಬಗ್ಗೆ ಸ್ಥಳಿಯರು ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ನಮಗೆ ಮಂಜುನಾಥನ ತೀರ್ಥದ ರೂಪವಾಗಿ ಆ ಮಂಜುನಾಥನೆ ಇಲ್ಲಿಗೆ ದಾವಿಸಿಬಂದಿದ್ದಾನೆಎನ್ನುವಂತಿದ್ದು ನಗರಸಭೆಯ ಅಧಿಕಾರಿಗಳಿಗೆ ಈ ಸಂಸ್ಥೆಯು ಮಾದರಿಯಾಗಿದ್ದು ಇದನ್ನು ನೋಡಿಯಾದರು ನಗರಸಭೆಯವರು ಎಚ್ಚತ್ತುಕೊಳ್ಳಲಿಎಂದು ಆಗ್ರಹಿಸಿದರು.ಕಾರ್ಯಕ್ರಮದಲ್ಲಿ ಕೆಂಚರಾಯದೇವಸ್ಥಾನದ ಅಧ್ಯಕ್ಷ, ಎಸ್.ಕೆ.ಡಿ.ಪಿ.ಆರ್ ಮೇಲ್ವಿಚಾರಕ ಪ್ರಕಾಶ್, ಪ್ರಸನ್ನ, ಮಂಜುನಾಥ್ ಸೇವಾಪ್ರತಿನಿಧಿಗಳು ಮತ್ತು ಸ್ಥಳಿಯರಿದ್ದರು.