ಗಡಿ ವಿವಾದ,ಸುಪ್ರೀಂ ಕೋರ್ಟ್ ತೀರ್ಪಿಗೆ ಬದ್ದ : ಸಂಜಯ ರಾವುತ

ಬೆಂಗಳೂರು:

     ಕರ್ನಾಟಕ ಮಹಾರಾಷ್ಟ್ರ ಗಡಿವಿವಾದ ಬಗ್ಗೆ ಸುಪ್ರೀಂಕೋರ್ಟ್ ತೀರ್ಪಿಗೆ ಬದ್ಧರಾಗಿದ್ದೇವೆ ಎಂದು  ಶಿವಸೇನೆ ಪಕ್ಷದ ವಕ್ತಾರ ಸಂಜಯ್ ರಾವುತ್ ಬೆಳಗಾವಿಯಲ್ಲಿ ಇಂದು ತಿಳಿಸಿದ್ದಾರೆ.

    ಬೆಳಗಾವಿಯ ಗೋಗಟೆ ರಂಗ ಮಂದಿರದಲ್ಲಿ ಸಾರ್ವಜನಿಕ ವಾಚನಾಲಯದ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು   ಕರ್ನಾಟಕ-ಮಹಾರಾಷ್ಟ್ರ ಗಡಿವಿವಾದ ಸುಪ್ರೀಂಕೋರ್ಟ್ ನಲ್ಲಿದೆ. ಗಡಿವಿವಾದ ಸಮಸ್ಯೆ ಸುಪ್ರೀಂ ಕೋರ್ಟ್ ನಲ್ಲಿ ಇತ್ಯರ್ಥ ವಾಗಲಿದೆ ಸುಪ್ರೀಂಕೋರ್ಟ್ ಉಭಯ ರಾಜ್ಯಗಳ ವಾದ ಆಲಿಸಲಿ. ಬಳಿಕ ಸುಪ್ರೀಂ ಕೋರ್ಟ್ ನೀಡುವ ತೀರ್ಪಿಗೆ ನಾವು ಬದ್ಧರಾಗಿರಬೇಕು ಎಂದು ಸಂಜಯ ರಾವುತ ಹೇಳಿದರು

    ದಶಕಗಳಿಂದ ವಿವಾದವಾಗಿದ್ದ ಅಯೋಧ್ಯೆ-ರಾಮಮಂದಿರ ವಿವಾದ ಇತ್ಯರ್ಥವಾಗಿದೆ. ಅದೇ ರೀತಿ ಗಡಿ ವಿವಾದವೂ ಬೇಗ ಇತ್ಯಾರ್ಥವಾಗಬೇಕಾಗಿದೆ. ದೇಶದ ಸಂವಿಧಾನ, ಸುಪ್ರೀಂ ಕೋರ್ಟ್ ಎಲ್ಲದಕ್ಕಿಂತ, ದೊಡ್ಡದು. ನ್ಯಾಯಾಲಯ ನೀಡುವ ತೀರ್ಪನ್ನು ಗೌರವಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ಗಡಿ ವಿವಾದದ ಕಾರಣ ಇತ್ತೀಚಿಗೆ ಆರೋಪ ಪ್ರತ್ಯಾರೋಪ ಹೆಚ್ಚುತ್ತಿರುವುದರಿಂದ ಶಾಂತಿ ಸುವ್ಯವಸ್ಥೆಯ ಕಾರಣ ಸಂಜಯ ರಾವತ್ ಕಾರ್ಯಕ್ರಮ ಸಂದರ್ಭದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ ಮಾಡಲಾಗಿತ್ತು.

Recent Articles

spot_img

Related Stories

Share via
Copy link
Powered by Social Snap