ಸ್ವಾಮೀಜಿ ತೀರ್ಮಾನಕ್ಕೆ ಬದ್ದ;ರಘುಮೂರ್ತಿ

ಚಿತ್ರದುರ್ಗ;

 ನಾಯಕ ಸಮಾಜಕ್ಕೆ 7.5% ಮೀಸಲಾತಿ ಹೆಚ್ಚಳ ಮಾಡಬೇಕು ಇಲ್ಲವಾದಲ್ಲಿ ಸ್ವಾಮಿಜಿಗಳು ಏನೇ ತೀರ್ಮಾನ ಕೈಗೊಂಡರು ನಾನು ಅದಕ್ಕೆ ಬದ್ದನಾಗಿರುತ್ತೇನೆ ಎಂದು ಚಳ್ಳಕೆರೆ ಶಾಸಕ ರಘುಮೂರ್ತಿ ಹೇಳಿದರು.

  ನಗರದ ತರಾಸು ರಂಗಮಂದಿರದಲ್ಲಿ ಇಂದು ವಾಲ್ಮೀಕಿ ನಾಯಕ ನೌಕರರ ಕ್ಷೇಮಾಭಿವೃದ್ಧಿ ಮಥತು ಸಾಂಸ್ಕೃತಿಕ ಸಂಘದವರು ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

  ನಾಯಕ ಸಮಾಜಕ್ಕೆ ಹೀಗಿರುವ 3% ಮೀಸಲಾತಿ ಕಡಿಮೆ ಇದೆ. ಸಂವಿಧಾನದ ಪ್ರಕಾರ ಜನಸಂಖ್ಯೆಗೆ ಅನುಗುಣವಾಗಿ ಯಾವುದೇ ಜನಾಂಗಕ್ಕೆ ಮೀಸಲಾತಿ ಇರಬೇಕು ಅದರಂತೆ ನಮಗೆ ಈಗ 7.5% ಮೀಸಲಾತಿ ಕೊಡಬೇಕು. ಈ ಕಾರ್ಯವನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕೂಡಲೇ ಮಾಡಬೇಕು ಎಂದು ಒತ್ತಾಯ ಮಾಡಿದರು.

   ಫೇಬ್ರವರಿ 8-9 ರಂದು ನಾಯಕ ಸಮಾಜದ ಜಾತ್ರೆ ಇದ್ದು ಆ ಸಮಯದಲ್ಲೆ ಮುಖ್ಯಮಂತ್ರಿಗಳು ನಾಯಕ ಸಮಾಜಕ್ಕೆ ಮೀಸಲಾತಿ ಹೆಚ್ಚಳ ಮಾಡುವ ಬಗ್ಗೆ ನಮಗೆ ಸ್ವಾಮೀಜಿ ಭರವಸೆ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಮೀಸಲಾತಿ ಹೆಚ್ಚಳ ಆಗದಿದ್ದರೆ ಎಲ್ಲಾ ತ್ಯಾಗಕ್ಕೂ ಸಿದ್ದರಾಗಿ ಎಂದು ಸ್ವಾಮೀಜಿಗಳು ಸೂಚನೆ ನೀಡಿದ್ದು ಅವರ ಮಾತಿಗೆ ನಾನು ಬದ್ದನಿರುತ್ತೇನೆ ಎಂದು ಹೇಳಿದರು.

  ಇಂತಹ ಸಮಾರಂಭಗಳಲ್ಲಿ ನಾಯಕ ಸಮಾಜ ಎದುರಿಸುತ್ತಿರುವ ಸಮಸ್ಯೆ ಹಾಗೂ ಸವಾಲುಗಳನ್ನು ಚರ್ಚಿಸಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಗಮನ ಸೆಳೆಯಬೇಕಿದೆ. ಕೇಂದ್ರ ಸರ್ಕಾರ ನಾಯಕ ಸಮಾಜಕ್ಕೆ ಶೇ.ಏಳುವರೆಯಷ್ಟು ಮೀಸಲಾತಿ ನೀಡುತ್ತಿದೆ. ಅದರಂತೆ ರಾಜ್ಯ ಸರ್ಕಾರವೂ ನೀಡಬೇಕು. ಬೇರೆ ಜಾತಿಯವರನ್ನು ನಾಯಕ ಸಮಾಜಕ್ಕೆ ಸೇರಿಸುವುದು ತಪ್ಪಲ್ಲ. ಅದಕ್ಕೆ ನಮ್ಮ ಅಭ್ಯಂತರವೂ ಇಲ್ಲ. ಆದರೆ ಜನಸಂಖ್ಯೆಗನುಗುಣವಾಗಿ ನಾಯಕ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡಬೇಕೆಂಬುದು ನಮ್ಮ ಬೇಡಿಕೆ ಎಂದರು.ಸಾಮಾಜಿಕ, ಶ್ಯಕ್ಷಣಿಕ, ಆರ್ಥಿಕ, ರಾಜಕೀಯವಾಗಿ ನಮ್ಮ ಸಮಾಜ ಬಲಿಷ್ಟವಾಗಬೇಕಿದೆ.

    ಅದಕ್ಕಾಗಿ ಸ್ವಾಮೀಜಿ ಹಾಗೂ ಜನಾಂಗದ ಶಾಸಕರುಗಳು ತೆಗೆದುಕೊಳ್ಳುವ ಯಾವುದೆ ರೀತಿಯ ತೀರ್ಮಾನ ಹಾಗೂ ಹೋರಾಟಕ್ಕೆ ನಾನು ಬದ್ದನಾಗಿರುತ್ತೇನೆ. ನೌಕರ ವರ್ಗ ತಮ್ಮ ಶಕ್ತಿಯಾನುಸಾರ ಸಮುದಾಯ ಹಿತ ಕಾಪಾಡುವಲ್ಲಿ ಗಮನ ಕೊಡಬೇಕು. ಅದರಂತೆ ಬೇರೆ ಜನಾಂಗದವರ ಪ್ರೀತಿ ವಿಶ್ವಾಸವನ್ನು ಗಳಿಸಬೇಕೆಂದು ತಿಳಿಸಿದರು.

    ಸಾಧನೆ ಸಾಧಕನ ಸ್ವತ್ತೆ ವಿನಃ ಸೋಮಾರಿಯ ಸ್ವತ್ತಲ್ಲ. ಅದಕ್ಕಾಗಿ ನಾಯಕ ಜನಾಂಗದ ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಸಾಧಕರನ್ನು ಗುರುತಿಸಿ ಸನ್ಮಾನಿಸುವುದರಿಂದ ಬೇರೆಯವರನ್ನು ಪ್ರೇರೇಪಿಸಿದಂತಾಗುತ್ತದೆ. ಇದಕ್ಕೆ ಇಚ್ಚಾಶಕ್ತಿ ಪರಿಶ್ರಮ ಇರಬೇಕೆಂದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

Recent Articles

spot_img

Related Stories

Share via
Copy link