ಬೆಂಗಳೂರು
ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಕರ್ನಾಟಕದಲ್ಲಿ 2019-20ನೇ ಸಾಲಿನಲ್ಲಿ ಉಜ್ವಲ ಯೋಜನೆಯಡಿ 1.47 ಲಕ್ಷ ಅಡುಗೆ ಅನಿಲ ಸಂಪರ್ಕ ಕಲ್ಪಿಸುವ ಗುರಿಯನ್ನು ನಿರೀಕ್ಷಿತವಾಗಿ ತಲುಪಿದೆ.ವಾರ್ಷಿಕ 5 ಮಿಲಿಯನ್ ಟನ್ ಪೆಟ್ರೋಲಿಯಂ ಉತ್ಪನ್ನ ಮಾರಾಟ ಮಾಡುವ ಮೂಲಕ ಪೆಟ್ರೋಲಿಯಂ ಮಾರುಕಟ್ಟೆಯಲ್ಲಿ ಶೇ. 44.1 ರಷ್ಟು ಪಾಲನ್ನು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಹೊಂದಿದೆ ಕರ್ನಾಟಕ ಪೆಟ್ರೋಲಿಯಂ ಕಾರ್ಪೊರೇಷನ್ ಕಾರ್ಯಕಾರಿ ನಿರ್ದೇಶಕ ಪ್ರಮೋದ್ ಸುದ್ಧಿಗೋಷ್ಠಿಯಲ್ಲಿ ತಿಳಿಸಿದರು.
ಬೆಂಗಳೂರಿನ ದೇವಗೊಂದಿ ಪೆಟ್ರೋಲಿಯಂ ಸಂಸ್ಕರಣಾ ಘಟಕದಿಂದ ಪೆಟ್ರೋಲಿಯಂ ಉತ್ಪನ್ನಗಳಾದ ಪೆಟ್ರೋಲ್, ಡೀಸೆಲ್, ವಿಮಾನದಲ್ಲಿ ಬಳಸುವ ಪೆಟ್ರೋಲ್ ಹಾಗೂ ಎಲ್‌ಪಿಜಿ ಗ್ಯಾಸ್‌ಅನ್ನು ಬೆಂಗಳೂರು ನಗರ ಸೇರಿದಂತೆ ಹಲವು ಜಿಲ್ಲೆಗಳಿಗೆ ಸರಬರಾಜು ಮಾಡಲಾಗುತ್ತಿದೆ ಎಂದರು.
ರಾಜ್ಯದಲ್ಲಿ ಭಾರತ್ ಪೆಟ್ರೋಲಿಯಂ 3 ಟ್ರಮಿನಲ್‌ಗಳು, 5 ಡಿಪೋಗಳು ಹಾಗೂ 4 ಪೆಟ್ರೋಲಿಯಂ ಗ್ಯಾಸ್ ಸಿಲಿಂಡರ್ ಭರ್ತಿ ಮಾಡುವ ಘಟಕಗಳು, 4 ವಿಮಾನ ಪೆಟ್ರೋಲ್ ಘಟಕಗಳು, 192 ಸೀಮೆಎಣ್ಣೆ ಡೀಲರ್, 1990 ಪೆಟ್ರೋಲ್ ಮತ್ತು ಡೀಸೆಲ್ ಪಂಪುಗಳು, 550 ಎಲ್‌ಪಿಜಿ ಗ್ಯಾಸ್ ವಿತರಣಾ ಕೇಂದ್ರಗಳು, 51 ಸ್ವಯಂಚಾಲಿತ ಗ್ಯಾಸ್ ಸ್ಟೇಷನ್‌ಗಳು ಮತ್ತು 11 ಸಿಎನ್‌ಜಿ ಮಾರಾಟ ಕೇಂದ್ರಗಳನ್ನು ಹೊಂದಿರುವುದಾಗಿ ತಿಳಿಸಿದರು.
ದೇವಗೊಂದಿ ಪೆಟ್ರೋಲಿಯಂ ಗ್ಯಾಸ್ ಸಿಲಿಂಂಡರ್ ಘಟಕದಲ್ಲಿ 21 ಕೋಟಿ ವೆಚ್ಚದ ಸ್ವಯಂಚಾಲಿತ ವ್ಯವಸ್ಥೆಯನ್ನು ಅಳವಡಿಸುವ ಮೂಲಕ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಮೂಲಕ ಗ್ಯಾಸ್ ಘಟಕದಲ್ಲಿ ಸುರಕ್ಷತೆಗೆ ಹೆಚ್ಚು ಆದ್ಯತೆಯನ್ನು ನೀಡಲಾಗಿದ್ದು, ಗ್ರಾಹಕರಿಕೆ ಸಿಲಿಂಡರ್ ವಿತರಿಸುವ ಮೊದಲು ಸಿಲಿಂಡರ್ ಸುರಕ್ಷತೆ ಕುರಿತು ಖಾತರಿ ಪಡಿಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ದೇವಗೊಂದಿ ಟ್ರಮಿನಲ್ ಮೂಲಕ ಪ್ರತಿದಿನ 6 ಸಾವಿರ ಕಿಲೋ ಮೀಟರ್ ಗ್ಯಾಸ್ ಸರಬರಾಜು ಮಾಡಲಾಗುತ್ತಿದ್ದು, ಪ್ರತಿದಿನ 35 ಸಾವಿರ ಸಿಲಿಂಡರ್‌ಗಳಿಗೆ ಅನಿಲ ಭರ್ತಿ ಮಾಡುವ ಮೂಲಕ ಇಂಧನ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಹೆಚ್ಚು ಕಾರ್ಯೋನ್ಮುಖರಾಗಿರುವುದಾಗಿ ತಿಳಿಸಿದರು.
ಪ್ರಮುಖ ಪೈಪ್‌ಲೈನ್
ರಾಜ್ಯದ 6 ಜಿಲ್ಲೆಗಳಾದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ, ರಾಮನಗರ, ಜಿಲ್ಲೆಗಳಿಗೆ ರಾಮನಗೊಂದಿ ಪೆಟ್ರೋಲಿಯಂ ಟ್ರಮಿನಲ್‌ಲ್ಲಿ ಉತ್ಪಾದಿಸುತ್ತಿರುವ ಶೇ. 55 ರಷ್ಟು ಅಡುಗೆ ಅನಿಲವನ್ನು ಸರಬರಾಜು ಮಾಡುತ್ತಿರುವುದಾಗಿ ಅವರು ತಿಳಿಸಿದರು.
ಕರ್ನಾಟಕದ ಭಾರತ್ ಪೆಟ್ರೋಲಿಯಂ ವಿಭಾಗ 2 ಪ್ರಮುಖ ಪೈಪ್‌ಲೈನ್‌ಗಳನ್ನು ಹೊಂದಿದೆ. ಟ್ರಮಿನಲ್‌ನಿಂದ ವಿಮಾನಗಳ ಇಂಧನ ಪೂರೈಕೆಯಾಗಿ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನೇರ ಪೈಪ್‌ಲೈನ್ ಸಂಪರ್ಕ ಬೆಂಗಳೂರು ಅಂತರರಾಷ್ಟ್ರೀಯ ನಿಲ್ದಾಣಕ್ಕೆ 36 ಕಿ.ಮೀ. ದೂರದ ಪೈಪ್‌ಲೈನ್ ಸಂಪರ್ಕ ಕಲ್ಪಿಸಲಾಗಿದೆ. ದೇವಗೊಂದಿ ಟ್ರಮಿನಲ್‌ಗೆ ಬೇರೆ ಬೇರೆ ಪೈಪ್‌ಲೈನ್ ಸಂಪರ್ಕದ ಮೂಲಕ ಮೂಲ ಪೆಟ್ರೋಲಿಯಂ ತರಿಸಿಕೊಳ್ಳಲಾಗುತ್ತಿದೆ. ಇದಕ್ಕಾಗಿ 232 ಕೋಟಿ ವೆಚ್ಚ ಮಾಡಿರುವುದಾಗಿ ತಿಳಿಸಿದ ಅವರು 2018-19ನೇ ಸಾಲಿನಲ್ಲಿ ಕರ್ನಾಟಕದಲ್ಲಿ ಅತಿಹೆಚ್ಚು ಅಡುಗೆ ಅನಿಲ ಸಂಪರ್ಕ ಕಲ್ಪಿಸಲಾಗಿದೆ ಎಂದ ಅವರು ಸುರಕ್ಷತೆಗೆ ಗ್ರಾಹಕರ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಲಾಗಿದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
