ಸಾರ್ವಜನಿಕ ಸೇವೆ ಸುಧಾರಣೆ ನಮ್ಮ ಮೊದಲ ಆಧ್ಯತೆ: ಮಹೇಶ್

ಹೊಳಲ್ಕೆರೆ:

    ಭ್ರಷ್ಟಚಾರ ನಿಮೂರ್ಲನೆ ಲೋಕಾಯುಕ್ತರ ಉದ್ದೇಶವಾದರೂ ಭ್ರಷರಿಗೆ ಜೈಲು ಅಥವಾ ಶಿಕ್ಷೆಯ ತಮ್ಮ ಗುರಿಯಲ್ಲ. ಸಾರ್ವಜನಿಕ ಸೇವೆಯಲ್ಲಿ ಸ್ಮಧಾರಣೆ ತರುವುದಕ್ಕೆ ತಮ್ಮ ಪ್ರಥಮ ಆಧ್ಯತೆ ಎಂದು ಲೋಕಾಯುಕ್ತ ಇನ್ಸ್ಪೆಕ್ಟರ್ ಮಹೇಶ್ ಹೇಳಿದರು.

    ಪಟ್ಟಣದ ತಾಲ್ಲುಕು ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ತಾಲ್ಲುಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಅವರು ಅಧಿಕಾರಿಗಳು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳದಂತೆ ಜನರು ನೋಡಿಕೊಳ್ಳಬೇಕು. ಜನರೇ ಅಧಿಕಾರಿಗಳನ್ನು ದುರುಪಯೋಗ ಪಡಿಸಿ ಕೊಳ್ಳುವುದನ್ನು ನಿಲ್ಲಿಸಬೇಕು. ಸಕಾರಾತ್ಮಕವಾಗಿ ನೋಡದೇ ಎಲ್ಲರೂ ಒಳ್ಳೆಯರೆಂಬ ಭಾವನೆಯಲ್ಲಿ ಕೆಲಸ ಮಾಡಲಾಗುವುದು. ನಮ್ಮ ಕೆಲಸಕ್ಕೆ ಜನರ ಸಹಕಾರ ಬೇಕು ಎಂದರು.

    ಸುಧಾರಣೆಗೆ ಪ್ರಥಮ ಆಧ್ಯತೆ ನೀಡಲಾಗುವುದು. ಅನಂತರದಲ್ಲೂ ಪರಿಸ್ಥಿತಿ ಸುಧಾರಿಸದಿದ್ದಲ್ಲಿ ಬೇರೆ ರೀತಿಯಲ್ಲಿ ಆಲೋಚನೆ ಮಾಡಲಾಗುವುದು. ದಾಳಿ, ಶಿಕ್ಷೆ ಮೂಲಕ ಅವಮಾನಿಸುವುದು ಬಹಳ ಸುಲಭ, ಆದರೆ ಅಧಿಕಾರಿ, ಸಿಬ್ಬಂದಿಯ ಗೌರವ ರಕ್ಷಿಸುವುದು ನಮ್ಮ ಕರ್ತವ್ಯ ಎಂದರು.

    ಎಸಿಬಿಯು ತನ್ನದೇ ಆದ ಚೌಕಟ್ಟಿನಲ್ಲಿ ಕೆಲಸ ಮಾಡುತ್ತದೆ. ನಮ್ಮ ಬಳಿಯೂ ಪೋಲೀಸ್ ಅಧಿಕಾರಿಗಳಿದ್ದಾರೆ. ಭ್ರಷ್ಟಾಚಾರದ ಅಪಾದನೆಗಳು ಕೇಳಿ ಬಂದಾಗ ಸ್ಥಳಕ್ಕೆ ಕಳುಹಿಸಿ ಪರಿಶೀಲಿಸಲಾಗುತ್ತದೆ. ಸಾರ್ವಜನಿಕರು, ಮಾಧ್ಯಮ ಮತ್ತು ಅಧಿಕಾರಿಗಳ ಸಹಕಾರ ಇರಬೇಕು ಎಂದರು.

    ಈ ಸಂದರ್ಭದಲ್ಲಿ ಲೊಕಾಯುಕ್ತ ಅಧಿಕಾರಿ ರಾಜು, ಶಿರೆಸ್ತೆದಾರ್ ವನಜಾಕ್ಷಮ್ಮ, ಹಾಗೂ ತಾಲ್ಲುಕು ಮಟ್ಟದ ಎಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರುತಾಲ್ಲುಕು ಮಟ್ಟದ ಎಲ್ಲಾ ಅಧಿಕಾರಿಗಳಿಗೆ ಮೊದಲನೆ ಸಭೆಯೆಂದು ಎಲ್ಲರನ್ನು ಪರಿಶೀಲಿಸುತ್ತಿದ್ದೇನೆ ಇನ್ನೊಂದು ಸಲ ಸಭೆ ಮಾಡಿದಾಗ ಯಾವುದೇ ಲೋಪ ದೋಷ ಕಾಣಬಾರದು ಲೋಕ ಯುಕ್ತ ಇನ್ಸ್ಪೆಕ್ಟರ್ ಮಹೇಶ್ ತಿಳಿಸಿದರು.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link