ಸಮಾಜದ ಒಳ ಜಗಳ, ಅಸೂಯೆಯಿಂದ ಎಲ್ಲ ರಂಗದಲ್ಲೂ ಹಿಂದೆಬಿದ್ದೇವೆ- ಷಡಕ್ಷರ ಮುನಿ ಸ್ವಾಮಿಗಳು

ಜಗಳೂರು:

      ರಾಜ್ಯದಲ್ಲಿ ಮಾದಿಗ ಸಮಾಜ ಬಹುಸಂಖ್ಯಾರಾಗಿದ್ದರೂ ಸಮಾಜದ ಒಳ ಜಗಳ, ಅಸೂಯೆಯಿಂದ ಎಲ್ಲ ರಂಗದಲ್ಲೂ ಹಿಂದೆಬಿದ್ದೇವೆ. ಈಗಲಾದರು ಎಚ್ಚೆತ್ತುಕೊಂಡು ಮಾದಿಗ ಸಮಾಜದ ಒಗ್ಗಟನ್ನು ಸಮಾಜಕ್ಕೆ ತೋರಿಸಿ ಸರ್ಕಾರವನ್ನು ಬಡಿದೆಬ್ಬಿಸಿ ನಮ್ಮ ಹಕ್ಕನ್ನು ಪಡೆದುಕೊಳ್ಳೊಣ ಎಂದು ಹಿರಿಯೂರು ಕೋಡಿಹಳ್ಳಿ ಶಾಖಾ ಮಠದ ಷಡಕ್ಷರ ಮುನಿ ಸ್ವಾಮಿಗಳು ಅಭಿಪಾಯಪಟ್ಟರು.

       ಪಟ್ಟಣದ ಡಾ.ಬಿ.ಆರ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ಶನಿವಾರ ಆಯೋಜಿಸಿದ್ದ ಕರ್ನಾಟಕ ಮಾದಿಗರ ಸಂಘ ನಗರ ಘಟಕದ ಉದ್ಘಾಟನಾ ಸಮಾರಂಭ ಹಾಗೂ ಮಾದಿಗ ಸಮಾಜದ ಉನ್ನತ ಅಧಿಕಾರಿಗಳಿಗೆ ಸನ್ಮಾನ ಸಮಾರಂಭದ ದಿವ್ಯ ಸಾನಿದ್ಯ ವಹಿಸಿ ಅವರು ಮಾತನಾಡಿದರು.

       ತನ್ನ ಸಮಾಜದ ಹಿತ ಕಾಯುವುದರೊಂದಿಗೆ, ಅನ್ಯ ಸಮಾಜದ ಹಿತವನ್ನು ಕಾಪಾಡಿಕೊಳ್ಳುತ್ತಾ, ಗೌರವಿಸಿ ಸಾಮರಸ್ಯೆದಿಂದ ಬದುಕುವುದು ಸಂಘಟನೆಗಳ ಉದ್ದೇಶವಾಗಿರಬೇಕು . ಬ್ರಿಟೀಷರ ಕಾಲದಲ್ಲಿ ಆಡಳಿತ ಮಾಡುವ ವೇಳೆ ದುರಾಡಳಿತದ ವಿರುದ್ದ ಭಾರತೀಯರು ಸಂಘಟನೆಗಳನ್ನು ಕಟ್ಟಿ ಸಂಘಟನಾತ್ಮಕವಾಗಿ ಹೋರಾಟ ಮಾಡಿ ಆಂಗ್ಲರನ್ನು ಓಡಿಸಿದಂತ ನಿದರ್ಶನಗಳಿವೆ.

         ನಮ್ಮ ಮದ್ಯ ಆಡಳಿತ ನಡೆಸುವ ಸರ್ಕಾರಗಳು ವಿಫಲವಾದಾಗ ವಿರೋಧಿಸುವ ಕೆಲಸವನ್ನು ತಾತ್ವಿಕವಾಗಿ ಮಾಡುವಂತ ಕೆಲಸ ಸಂಘ ಸಂಸ್ಥೆಗಳ ಮೇಲಿದೆ. ಜಾತಿಗೊಂದು ನಾಮಫಲಕ ಅವಶ್ಯಕ ಅದರೆ ಇದರ ನಡುವೆ ನಮ್ಮ ಕರ್ತವ್ಯವೇನು ಎಂಬುವುದನ್ನು ಸಂಘ ಸಂಸ್ಥೆಗಳು ಮರೆಯಬಾರದು. ಸಾಮಾಜಿಕವಾಗಿ ಅನ್ಯಾಯಯವಾದಲ್ಲಿ ಸರಿಪಡಿಸಿಕೊಂಡು ಗುರಿ ಮತ್ತು ಸಾಧನೆಗಳನ್ನು ಮಾಡುವಂತಹದ್ದು ಸಂಘ ಸಂಸ್ಥೆಗಳದ್ದಾಗಿದ್ದು, ಹೋರಾಟ ಮಾಡಲು ಸಂಘಟನೆಗಳು ಪುನಾರಾರಂಭವಾಗಬೇಕು ಎಂದರು.

          ಹಂಪಿ ಮಠದ ಮಾತಂಗ ಮುನಿ ಸ್ವಾಮಿಗಳು ಮಾತನಾಡಿ, ಸಂಘಗಳು ಬರಿ ಹೋರಾಟ ಮಾಡಿದರೇ ಸಾಲದು, ಜನರನ್ನು ಜಾಗೃತಿ ಗೊಳಿಸಿ ಸೈನ್ಯದ ತುಕಡಿಯನ್ನು ತಯಾರಿ ಮಾಡಬೇಕು. ಸೈನ್ಯದ ಜತೆ ಗುರುಗಳು ಇರಬೇಕು, ಗುರುಗಳ ಹಿಂದೆ ಜನರಿರಬೇಕು ಎಂದರು.

          ಶಾಸಕ ಎಸ್.ವಿ ರಾಮಚಂದ್ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅರಸಿಕೆರೆ ಉಪನ್ಯಾಸಕ ದುರುಗೇಶ್ ಪೂಜಾರಿ ವಿಶೇಷ ಉಪನ್ಯಾಸ ನೀಡಿದರು. ಸಂಘದ ರಾಜ್ಯಾಧ್ಯಕ್ಷ ದೇವರಾಜ್ ಅರಸು, ಕಾಂಗ್ರೆಸ್ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ ಪಾಲಯ್ಯ, ಬೆಂಗಳೂರು ವಾಣಿಜ್ಯ ಅಧಿಕಾರಿ ಜೆ.ಪಿ ಓಬಣ್ಣ ಮಾತನಾಡಿದರು

          ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಬೇತೂರು ಮಂಜುನಾಥ್, ತಾಲೂಕಾಧ್ಯಕ್ಷ ಹನುಮಂತಾಪುರ ಸತೀಶ್, ಪ್ರಧಾನ ಕಾರ್ಯದರ್ಶಿ ಚದರಗೋಳ ಆನಂದ, ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ತಿಪ್ಪೇಸ್ವಾಮಿ, ರಾಜ್ಯ ಸಮಿತಿಯ ರವಿಕುಮಾರ್ ನಿಚ್ಚವ್ವನಹಳ್ಳೀ, ಸಿದ್ದು ಮಾದರ ಸೇರಿದಂತೆ ಮತ್ತಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link