ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವುದೇ ನಮ್ಮ ಸರ್ಕಾರದ ಗುರಿ : ಬಿ ಎಸ್ ವೈ

ತಿಪಟೂರು
    ಶ್ರೀಗಳ ಆಶೀರ್ವಾದಿಂದ ನಮಗೆ ರಾಜ್ಯದಲ್ಲಿ ಮತ್ತೆ ಸರ್ಕಾರ ರಚಿಸುವ ಅವಕಾಶ ಸಿಕ್ಕಿದ್ದು,  ಅದನ್ನು ಸೂಕ್ತವಾಗಿ ನಿರ್ವಹಿಸುವ ಜವಾಬ್ದಾರಿ ನನ್ನ ಮೇಲಿದೆ ಮತ್ತು ಶ್ರೀಗಳ ಆಶೀರ್ವಾದಿಂದ ರಾಜ್ಯವು ಅಭಿವೃದ್ಧಿಯಾಗಲಿದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಿಳಿಸಿದರು.
   
       ತಿಪಟೂರು ತಾಲ್ಲೂಕಿನ ನೊಣವಿನಕೆರೆಯ ಸೋಮೆಕಟ್ಟೆ ಶ್ರೀ ಕಾಡ ಸಿದ್ಧೇಶ್ವರ ಮಠದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶ್ರೀ ಕರಿಬಸವ ದೇಶಿಕೇಂದ್ರ ಸ್ವಾಮಿಗಳ 227ನೆ ವಾರ್ಷಿಕ ಸ್ಮರಣೋತ್ಸವ, ಶ್ರೀ ಮಠದ 19ನೇ ಗುರು ಕರಿಬಸವ ದೇಶಿಕೇಂದ್ರ ಶ್ರೀಗಳ 12ನೇ ವರ್ಷದ ಪುಣ್ಯಾರಾಧನೆ ಮತ್ತು ಧರ್ಮ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. 
     ಪುರಾತನ ಕಾಲದಿಂದಲೂ ಜನ ಸಾಮಾನ್ಯರ ಕಷ್ಟ-ಕಾರ್ಪಣ್ಯಗಳನ್ನು ಪರಿಹರಿಸುತ್ತಾ, ನೊಂದವರ, ದೀನದಲಿತರ
ಧ್ವನಿಯಾಗುವುದರೊಂದಿಗೆ, ತ್ರಿವಿಧ ದಾಸೋಹದ ಜೊತೆಗೆ ವೈದ್ಯಕೀಯ ಸೌಲಭ್ಯವನ್ನು ದೊರಕಿಸಿಕೊಡುತ್ತಿರುವ ಕಾಡಸಿದ್ದೇಶ್ವರ ಮಠವು ಸಿದ್ದಗಂಗೆಯ ನಂತರದ ಸ್ಥಾನದಲ್ಲಿದೆ.  ನಾಡಿನ ಜನರ ಸೇವೆ ಮಾಡುವ ಅವಕಾಶ  ಶ್ರೀಗಳ ಆಶೀರ್ವಾದಿಂದ ದೊರೆತಿದ್ದು,  ನಾನು ಉತ್ತಮವಾಗಿ ಕಾರ್ಯನಿರ್ವಹಿಸಿ ದೇಶದಲ್ಲೇ ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿ ಮಾಡಿ ಅಭಿವೃದ್ಧಿ ಪತದತ್ತ ಕೊಂಡೊಯ್ಯುವುದೇ ನಮ್ಮ ಸರ್ಕಾರದ ಗುರಿ ಎಂದು ತಿಳಿಸಿದರು. 
ಯಡಿಯೂರಪ್ಪ ಸರ್ಕಾರ ಅವಧಿ ಪೂರ್ಣಗೊಳಿಸಲಿದೆ 
       ಯಡಿಯೂರಪ್ಪನವರಿಗೆ ಎಲ್ಲಾ ಕಷ್ಟ ಕಾರ್ಪಣ್ಯಗಳು ಕಳೆದು ಈಗ ಅಧಿಕಾರವಹಿಸಿಕೊಂಡು ರಾಜ್ಯಸರ್ಕಾರದ ಇನ್ನುಳಿದ  ಅವಧಿ  ಯಾವುದೇ ವಿಘ್ಞವಿಲ್ಲದೇ ಸಂಪೂರ್ಣವಾಗಿ ಸುಸ್ಥಿರ ಆಡಳಿತವನ್ನು ನೀಡಲಿ.  ಸರ್ಕಾರಗಳು ಮಠಮಾನ್ಯಗಳ ವಿಷಯದಲ್ಲಿ ರಾಜಕೀಯವನ್ನು ಬಳಸಬಾರದು. ಎಲ್ಲಾ ಸರ್ಕಾರಗಳು ಮಠಗಳ ಅಭಿವೃದ್ಧಿಗೆ ಸಹಕಾರವನ್ನು ನೀಡುತ್ತ, ನಮ್ಮ ಮುಖಾಂತರ ಜನರಿಗೆ ಸಾಕಷ್ಟು ಸಹಾಯವನ್ನು ಮಾಡಿಸುತ್ತಿದ್ದೇವೆ ಎಂದು  ಶ್ರೀಗಳು ತಿಳಿಸಿದರು.
ನಾವು ಮಠದ ಮಕ್ಕಳು 
      ಕಾರ್ಯಕ್ರಮದಲ್ಲಿ ಮಾತನಾಡಿದ ವಸತಿ ಸಚಿವ ವಿ.ಸೋಮಣ್ಣ, ನಾನು, ಡಿ.ಕೆ ಶಿವಕುಮಾರ್, ಚೆಲುವನಾರಾಯಣಸ್ವಾಮಿ ಮೂವರು ಮಠದಲ್ಲಿ ಒಂದು ತಾಯಿಯ ಮಕ್ಕಳಂತೆ ಇದ್ದು, ನಾವು ಇಷ್ಟು  ಎತ್ತರಕ್ಕೆ ಬೆಳೆಯಲು  ಶ್ರೀಗಳ ಕೃಪಾಶೀರ್ವಾದವೇ ಕಾರಣ.  ನಾನು ಮತ್ತು ಮುಖ್ಯಮಂತ್ರಿಗಳು ಈ ಬಾರಿಯ ಬಜೆಟ್‍ನಲ್ಲಿ ರಾಜ್ಯದಲ್ಲಿ ಯಾವುದೇ ವರ್ಗದವರೂ ಸಹ ಸೂರಿಲ್ಲದೆ ಇರಬಾರದೆಂಬ ಉದ್ದೇಶದಿಂದ ಎಲ್ಲರಿಗೂ ಸೂರು ಕಲ್ಪಿಸುವ ಯೋಜನೆಯನ್ನು ತರಬೇಕೆಂದಿದ್ದೇವೆ ಇದಕ್ಕೆ ಸಹಾಯವಾಗುವಂತೆ ನಮ್ಮನ್ನು ಶ್ರೀಗಳು ಆಶೀರ್ವದಿಸಬೇಕು.  ಇನ್ನು ಶ್ರೀ ಮಠವು ತ್ರಿವಿಧ ದಾಸೋಹ ಮಾಡಿಕೊಂಡು ಬರುತ್ತಿದ್ದು, ತನ್ನದೆ ಆದ ಸಾಮಾಜಿಕ ಸೇವೆ ಮಾಡುತ್ತ್ತಿದೆ. ಇಂತಹ ಮಠ ಮಾನ್ಯಗಳ ಅಭಿವೃದ್ದಿ ಮಾಡುವುದೆ ನಮ್ಮ ಗುರಿ. ಮುಖ್ಯಮಂತ್ರಿಗಳು ಬರುವುದು ತಡವಾಯಿತು. ಆದರೆ ಇಂದು ಸದನವಿದ್ದರೂ ಕಾರ್ಯಕ್ರಮಕ್ಕೆ ಆಗಮಿಸಿ ಶ್ರೀಗಳ ಆಶೀರ್ವಾದ ಪಡೆದುಕೊಂಡಿದ್ದರಿಂದ  ತಮ್ಮ ಅವಧಿಯನ್ನು ಪೂರ್ಣಗೊಳಿಸುತ್ತಾರೆ ಎಂದರು.
     ಸಮಾರಂಭದಲ್ಲಿ ಸುತ್ತೂರು ಮಠದ ಕಿರಿಯ ಶ್ರೀ ಜಯಚಾಮರಾಜೇಂದ್ರ ಸ್ವಾಮಿ, ಮಹಾರಾಷ್ಟ್ರದ ಕರಜಗಿ ಮಠದ ಶಿವಾನಂದ ಸ್ವಾಮಿ, ಕಲಬುರಗಿಯ ಯಲಗೋಡು ಮಠದ ಗುರುಲಿಂಗ ಸ್ವಾಮಿ, ಹಾವೇರಿಯ ಗಂಚಿಗಟ್ಟಿ ಮಠದ ವೈಜನಾಥ ಶಿವಾಚಾರ್ಯ ಸ್ವಾಮಿ, ಶಾಸಕ ಬಿ.ಸಿ.ನಾಗೇಶ್, ಮಾಜಿ ಸಚಿವ ಸೊಗಡು ಶಿವಣ್ಣ, ಲೋಕೇಶ್ವರ್ ಮತ್ತಿತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap