ಅನುದಾನ ಇಲ್ಲದಿದ್ದರೂ ಅಭಿವೃದ್ಧಿಗೆ ಒತ್ತು

ಮಧುಗಿರಿ

    ಕಳೆದ ಒಂದು ವಾರದಿಂದ ಮಳೆ ಸುರಿಯುತ್ತಿರವ ಕಾರಣ ಕಾಮಗಾರಿ ತಡವಾಗಿದೆ, ಮಳೆ ನಿಂತ ತಕ್ಷಣ ರಸ್ತೆ ಕಾಮಗಾರಿ  ಪೂರ್ಣಗೊಳಿಸಲಾಗುವುದು ಎಂದು ಶಾಸಕ ಎಂ.ವಿ ವೀರಭದ್ರಯ್ಯ ಭರವಸೆ ನೀಡಿದರು.ಅವರು ತಾಲ್ಲೂಕಿನ ಕೊಡಿಗೇನಹಳ್ಳಿ ಹೋಬಳಿಯ ವೀರಾಪುರ ಗ್ರಾಮಕ್ಕೆ ಭೇಟಿ ನೀಡಿ ರಸ್ತೆ ಕಾಮಗಾರಿ ವೀಕ್ಷಣೆ ಮಾಡಿದ ನಂತರ ಮಾತನಾಡಿದರು.

     ಸರಕಾರದಿಂದ ಯಾವುದೆ ಅನುದಾನ ಇಲ್ಲ, ಆದರೂ ಈ ಭಾಗಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಚಿಕ್ಕಮಾಲೂರು ಗ್ರಾಮದಿಂದ ವೀರಾಪುರ ಹಾಗೂ ಕಾಳೇನಹಳ್ಳಿ ಗ್ರಾಮದವರೆಗೆ ರಸ್ತೆ ಅಭಿವೃದ್ಧಿ ಪಡಸಿಲು ಈಗಾಗಲೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ವೆಂಕಟಾಪುರದಿಂದ ತಿಗಳರಹಳ್ಳಿ ಗ್ರಾಮದವರೆಗೆ ರಸ್ತೆ ಅಭಿವೃದ್ಧಿಪಡಿಸಿಲಾಗುವುದು

    ಸತತವಾಗಿ ಹತ್ತು ವರ್ಷ ಬರಗಾಲದಿಂದ ತತ್ತರಿಸಿದ್ದ ರೈತರಿಗೆ ಈ ಬಾರಿ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿರುವುದರಿಂದ ಜಾನುವಾರುಗಳಿಗೆ ಮೇವಿಗೆ ಕೊರತೆ ಎದುರಾಗುವುದಿಲ್ಲ. ಹಂತ ಹಂತವಾಗಿ ಈ ಭಾಗದ ಸಮಸ್ಯೆ ಬಗೆಹರಿಸುತ್ತೇನೆ ಎಂದರು.

    ತಾ.ಪಂ. ಸದಸ್ಯ ಕೆ.ಸಿ ನರಸಾರೆಡ್ಡಿ, ಜಿಪಂ ಎಇಇ ಸುರೇಶ್ ರೆಡ್ಡಿ, ಎಂಜಿನಿಯರ್ ಕೃಷ್ಣಪ್ಪ, ಮುಖಂಡರಾದ ಲೋಕೇಶ್, ಸಿದ್ದಾರೆಡ್ಡಿ, ಜಬೀಉಲ್ಲಾ, ದಯಾನಂದ ರೆಡ್ಡಿ, ಟಿ ರಾಮಕೃಷ್ಣಪ್ಪ, ರಮೇಶ್, ಕಾಳೇನಹಳ್ಳಿ ಹರೀಶ್, ಪಿ. ರಾಜು ಹಾಗೂ ಗ್ರಾಮಸ್ಥರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap