ನಾವು ಪದಗ್ರಹಣ ರಾಜಕೀಯ ಮಾಡಿಲ್ಲ : ಕೆ ಎಸ್ ಈಶ್ವರಪ್ಪ

ಬಳ್ಳಾರಿ,

      ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಒಂದು ರೀತಿಯಲ್ಲಿ ಬೇವು-ಬೆಲ್ಲದ ಸಮಯ. ಒಂದು ಕಡೆ ಕೆಪಿಸಿಸಿ ಅಧ್ಯಕ್ಷರಾಗಿರುವ ಖುಷಿ, ಮತ್ತೊಂದೆಡೆ ಪದಗ್ರಹಣ ವಿಳಂಬವಾಗುತ್ತಿರುವುದಕ್ಕೆ ಬೇಸರ. ಕೊರೊನಾ ವೈರಸ್ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಡಿಕೆಶಿ ಪದಗ್ರಹಣ ಕಾರ್ಯಕ್ರಮ ವಿಳಂಬವಾಗುತ್ತಲೆ ಇದೆ.

      ಕಾಂಗ್ರೆಸ್‌ ನಲ್ಲಿ ಟ್ರಬಲ್ ಶೂಟರ್ ಎಂದೇ ಖ್ಯಾತಿ ಪಡೆದಿರುವ ಡಿ.ಕೆ. ಶಿವಕುಮಾರ್ ಅವರ ಪದಗ್ರಹಣಕ್ಕೆ ಇದೀಗ ವಿಜ್ಞ ಎದುರುರಾಗಿದೆ.ಇದೇ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್ ಪದಗ್ರಹಣ ಸಮಾರಂಭಕ್ಕೆ ರಾಜ್ಯ ಬಿಜೆಪಿ ಸರ್ಕಾರ ತಡೆಹಾಕಿದೆ ಎಂಬ ರಾಜಕೀಯ ಆರೋಪಗಳು ಕೇಳಿ ಬಂದಿವೆ.

     ಆದರೆ ಆ ಆರೋಪಕ್ಕೆ ಸರ್ಕಾರ ಉತ್ತರ ಕೊಟ್ಟಿದೆ. ಡಿ.ಕೆ. ಶಿವಕುಮಾರ್ ಅವರ ಪದಗ್ರಹಣ ಕಾರ್ಯಕ್ರಮದಲ್ಲಿ ನಾವು ರಾಜಕೀಯ ಮಾಡಿಲ್ಲ. ಕೊರೊನಾ ವೈರಸ್ ಹರಡುವ ಸಾಧ್ಯತೆ ಇದ್ದಿದ್ದರಿಂದ ಕಾರ್ಯಕ್ರಮ ಬೇಡ ಎಂದಿದ್ದೇವು. ಅದು ರಾಜಕೀಯ ಅಲ್ಲ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ